ಕೇರಳ: ಖ್ಯಾತ ವಯೊಲಿನ್‌ ವಾದಕ ಟಿ.ಎನ್‌.ಕೃಷ್ಣನ್‌ ವಿಧಿವಶ, ಪ್ರಧಾನಿ ಮೋದಿ ಸಂತಾಪ!

ತಿರುವನಂತಪುರ: ಖ್ಯಾತ ವಯೊಲಿನ್‌ ವಾದಕ ವಿದ್ವಾನ್‌ ತ್ರಿಪ್ಪುನಿತುರ ನಾರಾಯಣ ಅಯ್ಯರ್‌ ಕೃಷ್ಣನ್‌ (ಟಿ.ಎನ್‌.ಕೃಷ್ಣನ್‌) ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ ಕೃಷ್ಣನ್‌ (92) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಪತ್ನಿ ಕಮಲಾ, ಮಕ್ಕಳಾದ ವಿ.ಜಿ.ಕೃಷ್ಣನ್‌ ನಟರಾಜನ್‌, ಶ್ರೀರಾಮ್‌ ಕೃಷ್ಣನ್‌ ಅವರನ್ನು ಅಗಲಿದ್ದಾರೆ. ಅವರ ಮಕ್ಕಳಿಬ್ಬರೂ ಖ್ಯಾತ ವಯೊಲಿನ್‌ ವಾದಕರು. ಸೋದರಿ ಎನ್‌.ರಾಜಂ ಕೂಡ ಹೆಸರುವಾಸಿ ವಯೊಲಿನ್‌ವಾದಕಿ. ಕೇರಳದ ತ್ರಿಪ್ಪುನಿತುರ ಗ್ರಾಮದಲ್ಲಿ 1928ರ ಅಕ್ಟೊಬರ್‌ 6ರಂದು ಜನಿಸಿದ ಟಿ.ಎನ್‌.ಕೃಷ್ಣನ್‌ ಹುಟ್ಟು ಕಲಾವಿದರು. ಅವರ ತಂದೆ ನಾರಾಯಣ ಅಯ್ಯರ್‌ ಹಾಗೂ ಅಮ್ಮ ಅಮ್ಮಿಣಿ ಅಮ್ಮಾಳ್‌ ಕೂಡ ಸಂಗೀತ ಕಲಾವಿದರಾಗಿದ್ದರು. ಅವರ ಆರಂಭಿಕ ಸಂಗೀತಾಭ್ಯಾಸಕ್ಕೆ ತಂದೆಯೇ ಗುರುವಾಗಿದ್ದರು. ಬಳಿಕ ಅಲೆಪ್ಪಿ ಕೆ.ಪಾರ್ಥಸಾರಥಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್‌, ಶೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್‌ ಅವರಂಥ ದಿಗ್ಗಜರ ಬಳಿ ಸಂಗೀತಾಭ್ಯಾಸ ಮಾಡಿದ್ದರು. ಚೆನ್ನೈ ಮತ್ತು ದಿಲ್ಲಿಸಂಗೀತ ಕಾಲೇಜುಗಳಲ್ಲಿಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ದೇಶ ವಿದೇಶಗಳಲ್ಲಿಸಂಗೀತ ಕಚೇರಿಗಳನ್ನು ನಡೆಸಿಕೊಟ್ಟು ಅಪಾರ ಕೀರ್ತಿ ಸಂಪಾದಿಸಿದ್ದರು. ಪದ್ಮಭೂಷಣ, ಸಂಗೀತ ಕಲಾನಿಧಿ ಸೇರಿದಂತೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿದ್ದವು. ಪ್ರಧಾನಿ ಮೋದಿ ಸಂತಾಪ!ಖ್ಯಾತ ವಯೊಲಿನ್‌ ವಾದಕ ಶ್ರೀ ಟಿ.ಎನ್.ಕೃಷ್ಣನ್ ಅವರ ನಿಧನದ ಹಿನ್ನೆಲೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಟಿ.ಎನ್.ಕೃಷ್ಣನ್ ನಿಧನದಿಂ ಸಂಗೀತ ಜಗತ್ತು ಬರಿದಾಗಿದೆ. ಅವರ ಸಂಗೀತ ಸಂಸ್ಕೃತಿ ಮತ್ತು ಭಾವನೆಗಳನ್ನು ಹೊಂದುವ ಮೂಲಕ ಸುಂದರವನ್ನಾಗಿಸಿದ್ದವು. ಅಲ್ಲದೇ ಅವರು ಯುವ ಸಂಗೀತಗಾರರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


from India & World News in Kannada | VK Polls https://ift.tt/2HW8DeD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...