ಮತದಾರರ ಬಳಿ ಭಿಕ್ಷೆ ಕೇಳಿದ್ದೇನೆ, ಅಭಿವೃದ್ದಿಗೆ ಮತ ಹಾಕ್ತಾರೆ ಎಂಬ ನಂಬಿಕೆ, ಮುನಿರತ್ನ ವಿಶ್ವಾಸ

ಬೆಂಗಳೂರು: ಭಿಕ್ಷುಕರು ಅಮ್ಮಾ ತಾಯಿ ಭಿಕ್ಷೆ ಎಂದು ಕೇಳಿದ ಹಾಗೆ ನಾನು ಅಮ್ಮಾ ತಾಯಿ ಮತ ಹಾಕಿ ಎಂದು ಭಿಕ್ಷೆ ಕೇಳಿದ್ದೇನೆ, ಅಭಿವೃದ್ದಿಗೆ ಜನರು ಮತ ಹಾಕುತ್ತಾರೆ ಎಂಬ ವಿಶ್ವಾಸ ಇದೆ. ಹೀಗಂದವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ . ಬೆಂಗಳೂರಿನಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಇದೊಂದು ಮರೆಯಲಾಗದ ಚುನಾವಣೆ ಎಂದರು. ಮತಗಟ್ಟೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ತಪಾಸಣೆ ನಡೆಸಿದ್ದಾರೆ. ಇದೊಂದು ಮರೆಯಲಾದ ಸಂದರ್ಭವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮತಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು. ಮತದಾನ ಮಾಡುವುದು ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ಈ ಹಕ್ಕನ್ನು ನಾವು ಕಳೆದುಕೊಳ್ಳಬಾರದು. ಕ್ಷೇತ್ರದ ಅಭಿವೃದ್ದಿಗೆ ಜನರು ಮತ ಹಾಕುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾರರಿಗೆ ಹಣದ ಆಮಿಷ ನೀಡಿ ಗುರುತಿನ ಚೀಟಿಯನ್ನು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕ್ಷೇತ್ರದ ಮತದಾರರಿಗೆ ಆಮಿಷ ನೀಡುವ ಮೂಲಕ ಚುನಾವಣಾ ಅಕ್ರಮ ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಉಪ ಚುನಾವಣೆಗೆ ಮುನಿರತ್ನ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ತಿಮ್ಮಪ್ಪನ ಮೊರೆ ಹೋದ ಮುನಿರತ್ನ ಇನ್ನು ಮತದಾನಕ್ಕೂ ಮೊದಲು ಮುನಿರತ್ನ ನಾಯ್ಡು ತಿರುಪತಿ ತಿಮ್ಮಪ್ಪನ ಮೊರೆ ಹೋದರು. ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುನಿರತ್ನ ತಿಮ್ಮಪ್ಪನ ದರ್ಶನ ಪಡೆದರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ಮತದಾನ ನೀರಸವಾಗಿದ್ದು ಬೆಳಗ್ಗೆ 9 ಗಂಟೆಯ ವರೆಗೆ ಶೇ. 6.27 ರಷ್ಟು ಮತದಾನ ನಡೆದಿದೆ.


from India & World News in Kannada | VK Polls https://ift.tt/2HYzTcR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...