ಅಮೆರಿಕ ಚುನಾವಣೆಗೆ ಮತದಾರರಿಂದ ಭರ್ಜರಿ ರೆಸ್ಪಾನ್ಸ್‌..! 1908ರ ಬಳಿಕ ಅತಿಹೆಚ್ಚು ವೋಟಿಂಗ್‌

ವಾಷಿಂಗ್‌ಟನ್‌ ಡಿಸಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಹಂತದಲ್ಲಿದ್ದು, ಫಲಿತಾಂಶಕ್ಕಾಗಿ ಕ್ಷಣಗಣನೆ ಶುರುವಾಗಿದೆ. ಈ ಸಲ ಅಮೆರಿಕದಲ್ಲಿ ಭರ್ಜರಿಯಾಗಿಯೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, 1908ರ ನಂತರ ಇದೇ ಮೊದಲ ಬಾರಿಗೆ ಶೇಕಡಾವಾರು ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಮಂಗಳವಾರದ ಚುನಾವಣೆಗೂ ಮೊದಲೇ 100.8 ಮಿಲಿಯನ್‌ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು ಎಂದು ತಿಳಿದು ಬಂದಿದೆ. ಅಮೆರಿಕದ ಚುನಾವಣ ಯೋಜನೆಯ ಪ್ರಕಾರ ಅಂಚೆ ಮತದಾನ ಹಾಗೂ ಆರಂಭಿಕ ಮತದಾನದ ಅಂಕಿ ಅಂಶಗಳನ್ನು ಗಮನಿಸಿದರೆ ನೂರು ಮಿಲಿಯನ್‌ ದಾಟಿರುವುದು ಗೊತ್ತಾಗಿದೆ. ಸುಮಾರು 35 ಮಿಲಿಯನ್ ವೈಯಕ್ತಿಕ ಆರಂಭಿಕ ಮತಗಳು ಮತ್ತು 65 ಮಿಲಿಯನ್‌ ಅಂಚೆ ಮತಗಳು ಚಲಾವಣೆಯಾಗಿವೆ. ಮಂಗಳವಾರದ ಸಾರ್ವತ್ರಿಕ ಚುನಾವಣೆಯ ನಂತರ ಮತದಾನದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಮತದಾರರಿಂದ ಇದುವರೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1908ರ ಬಳಿಕ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾವಾರು ಮತದಾನದ ಪ್ರಮಾಣ ಗುರುತಿಸಿದರೆ ಈ ಬಾರಿ 150 ಮಿಲಿಯನ್‌ಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸುವ ಸಾಧ್ಯತೆ ಇದೆ. 2016ರಲ್ಲಿ ಒಟ್ಟು ಮತದಾರರಲ್ಲಿ 138.8 ಮಿಲಿಯನ್‌ ಜನ ಮತ ಚಲಾಯಿಸಿದ್ದರು. ಶೇ.60.1ರಷ್ಟು ಮತದಾನ ನಡೆದಿತ್ತು. ಈ ಬಾರಿ ಅದು ಶೇ.70 ಅಥವಾ ಅದನ್ನು ಮೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2018ರಲ್ಲಿ ಅಂದಾಜು ಮಾಡಲಾದ 233.7 ಮಿಲಿಯನ್‌ ಅರ್ಹ ಮತದಾರರಲ್ಲಿ ಶೇ.43ರಷ್ಟು ಮತದಾರರು ಆರಂಭಿಕವಾಗಿಯೇ ಮತ ಚಲಾಯಿಸಿದ್ದಾರೆ. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಒಟ್ಟು ಮತದಾನದ ಪ್ರಮಾಣದ ಶೇ.73ರಷ್ಟು ಮತಗಳು ಎಲೆಕ್ಷನ್‌ ಡೇಗೂ ಮುಂಚೆಯೇ ಚಲಾವಣೆಯಾಗಿರುವುದು ವಿಶೇಷ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.


from India & World News in Kannada | VK Polls https://ift.tt/2TPz88r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...