ಕೊರೊನಾ ನೆಪ ಹೇಳಿ ಪ್ರಜೆಗಳನ್ನು ಭಾರತದಿಂದ ವಾಪಸ್ ಕರೆಯಿಸಿಕೊಳ್ಳುತ್ತಿರುವ ಚೀನಾ

ಹೊಸದಿಲ್ಲಿ: ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ತನ್ನ ಪ್ರಜೆಗಳನ್ನು ಭಾರತದಿಂದ ಹಿಂದಕ್ಕೆ ಕರೆಯಿಸಿಕೊಳ್ಳಲು ಮಾಡಲು ನಿರ್ಧರಿಸಿದೆ. ಈ ಬಗ್ಗೆ ಸೋಮವಾರ ಚೀನಾದ ರಾಯಭಾರಿ ಕಚೇರಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಉದ್ಯಮಿಗಳಿಗ ವಿಶೇಷ ವಿಮಾನಗಳ ಮೂಲಕ ಚೀನಾಗೆ ಹಿಂತಿರುಗಲು ಅವಕಾಶ ನೀಡಲಾಗುವುದು ಎಂದು ಚೀನಾ ದೂತವಾಸದ ವೈಬ್‌ಸಟ್‌ನಲ್ಲಿ ಪ್ರಕಟಿಸಲಾಗಿದೆ. ಹಾಗೂ ಚೀನಾ ನಡುವೆ ಗಡಿ ವಿವಾದ ತಾರಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಇಂತಹದೊಂದು ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ಶಂಕಿಸಲಾಗಿದೆ. ಭಾರತದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾಭ್ಯಾಸ ಮಾಡುತ್ತಿರುವ ಚೀನಾ ನಾಗರಿಕರು ತಕ್ಷಣವೇ ಹಿಂತಿರುಗುವರೇ ಎಂಬುದು ತಿಳಿದು ಬಂದಿಲ್ಲ. ಆದರೆ ಮೇ 27ರ ಮೊದಲು ರಿಜಿಸ್ಟರ್ ಮಾಡುವಂತೆ ಚೀನಾ ಸೂಚಿಸಿದೆ. ಬೌದ್ಧ ಧಾರ್ಮಿಕ ಕೇಂದ್ರದಲ್ಲಿ ಯೋಗಾಭ್ಯಾಸ ಮಾಡುವುದಕ್ಕಾಗಿ ಭಾರತಕ್ಕೆ ತೀರ್ಥಯಾತ್ರೆ ಬಂದಿರುವ ಚೀನಾ ನಾಗರಿಕರಿಗೂ ಹಿಂತಿರುಗಲು ಸೂಚಿಸಲಾಗಿದೆ. ಹಾಗೆಯೇ ಭಾರತದಿಂದ ಹಿಂತಿರುಗಿದ ನಾಗರಿಕರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗುವುದು ಎಂದು ತಿಳಿಸಿದೆ. ಈ ಮೊದಲು ಚೀನಾದ ಹುಬೇ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದಾಗ 700ರಷ್ಟು ಭಾರತೀಯ ಪ್ರಜೆಗಳನ್ನು ಭಾರತ ಹಿಂದಕ್ಕೆ ಕರೆಯಿಸಿಕೊಂಡಿತ್ತು.


from India & World News in Kannada | VK Polls https://ift.tt/2X692k1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...