ನವದೆಹಲಿ: ಚೀನಾದೊಂದಿಗಿನ ಗಡಿ ಸಮಸ್ಯೆಯ ಕಾರಣಕ್ಕೆ ತಮ್ಮೊಂದಿಗೆ ಮಾತನಾಡಲು ಭಾರತದ ಉತ್ಸುಕರಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ. ಟ್ರಂಪ್ ಹೀಗೆ ಹೇಳಿ ಕೇವಲ ಒಂದು ಗಂಟೆಯಲ್ಲಿ ಈ ಕುರಿತು ಭಾರತ ಪ್ರತಿಕ್ರಿಯೆ ನೀಡಿದ್ದು, ಕಳೆದ ಏಪ್ರಿಲ್ನಲ್ಲಿ ಕೊನೆಯ ಬಾರಿ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ದೂರವಾಣಿಯಲ್ಲಿ ಮಾತನಾಡಿದ್ದರು ಎಂದು ಸ್ಪಷ್ಟಪಡಿಸಿದೆ. ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ತಲುಪಿದ ಬಳಿಕ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಲು ಟ್ರಂಪ್ ದೂರವಣಿ ಕರೆ ಮಾಡಿದ್ದರು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಳೆದ ಏಪ್ರಿಲ್ 4 ರಂದು ಉಭಯ ನಾಯಕರು ಪರಸ್ಪರ ದೂರವಾಣಿ ಮೂಲಕ ಮಾತನಾಡಿದ್ದರು. ಅದಾದ ಬಳಿಕ ಇಬ್ಬರ ಬಡುವೆ ಯಾವುದೇ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ ಗಡಿ ಸಮಸ್ಯೆ ಕುರಿತು ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ ಎಂದೂ ಭಾರತ ಸ್ಪಷ್ಟಪಡಿಸಿದ್ದು, ಗಡಿ ತಕಾರಾರು ಶಾಂತಿಯುತವಾಗಿ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿ ತಮ್ಮೊಂದಿಗೆ ಮಾತನಾಡುವ ಮೂಡ್ನಲ್ಲಿ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿ ಕೆಲವೇ ಗಂಟೆಗಳಲ್ಲಿ ಭಾರತ ಈ ರೀತಿ ಹೇಳಿರುವುದು ಕುತೂಹಲ ಮೂಡಿಸಿದೆ.
from India & World News in Kannada | VK Polls https://ift.tt/3dffXwz