ಹೊಸದಿಲ್ಲಿ: ಕಳೆದ ಮಾರ್ಚ್‌ನಲ್ಲಿ ಬರ ಸಿಡಿಲಿನಂತೆ ಭಾರತಕ್ಕೆ ಕೊರೊನಾ ವೈರಸ್ ಅಪ್ಪಳಿಸಿದ್ದು, ಕೋವಿಡ್-19 ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಭಾರತ ಸರಕಾರ ವಿವಿಧ ಹಂತಗಳಲ್ಲಿ ಲಾಕ್‌ಡೌನ್ ಜಾರಿಗೆ ತಂದಿತ್ತು. ಇದೀಗ ವೈರಸ್‌ನಿಂದಾಗಿ ದೇಶದ ಆರ್ಥಿಕತೆಗೆ ಇನ್ನಿಲ್ಲದ ಹೊಡೆತ ಕೂಡ ಬಿದ್ದಿರುವ ಕಾರಣ, ಹಂತ ಹಂತವಾಗಿ ಜನಜೀವನವನ್ನು ಯಥಾಸ್ಥಿತಿಗೆ ತರಲು ಕಠಿಣ ನಿಯಮಗಳೊಂದಿಗೆ 'ಅನ್‌ಲಾಕ್' ಅಸ್ತ್ರ ಬಳಕೆ ಮಾಡಲು ಮುಂದಾಗಿದೆ. ಮೇ 31ಕ್ಕೆ ಲಾಕ್‌ಡೌನ್ 4.0 ಅಂತ್ಯಗೊಳ್ಳಲಿದ್ದು, ಜೂನ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹಸಚಿವಾಲಯ ಘೋಷಿಸಿದೆ. ಇದರ ಪ್ರಕಾರ ಇನ್ನು ಮುಂದೆ ಲಾಕ್‌ಡೌನಮ್ ನಿಯಮಗಳು ಕೇವಲ ಕಂಟೈನ್ಮೆಂಟ್ ವಯಲಗಳಲ್ಲಿ ಮಾತ್ರ ಜೂನ್ 30ರವರೆಗೆ ಮುಂದುವರಿಯಲಿದೆ. ಕಂಟೈನ್ಮೆಂಟ್ ಅಲ್ಲದೇ ಇರುವ ವಲಯಗಳಲ್ಲಿ ಜೂನ್ 8ರ ಬಳಿಕ ಜನಜೀವನ ಹಂತ ಹಂತವಾಗಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಯಥಾಸ್ಥಿತಿಗೆ ಮರಳಲಿದೆ ಎಂದು ಗೃಹಸಚಿವಾಲಯ ಹೇಳಿದೆ.ಟ್ವಿಟರ್ ಖಾತೆಗೆ ಕನ್ನ, ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಪಾಕ್‌ನ ಮಾಜಿ ನಾಯಕ!"ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರು ಪ್ರವೇಶಿಸಬಹುದು. ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳು ಮರಳಿ ಕಾರ್ಯಾಚರಣೆ ಆರಂಭಿಸಲಿವೆ. ಜೂನ್ 8ರ ಬಳಿಕ ಮಾಲ್‌ಗಳು ಕೂಡ ತೆರೆಯಲಾಗುತ್ತವೆ. ಇಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸರಕಾರ ಶೀಘ್ರವೇ ಸರಕಾರ ಬಿಡುಗಡೆ ಮಾಡಲಿದೆ," ಎಂದು ಗೃಹಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ದೇವರು ಎಲ್ಲೆಡೆ ಇದ್ದಾನೆ ಅಲ್ಲವೆ: ಆಕಾಶ್ ಛೋಪ್ರ: ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಛೋಪ್ರ, ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ತೆರೆಯುವುದರಿಂದ ಹೆಚ್ಚಿನ ಜನರು ಒಟ್ಟಾಗಿ ಸೇರಿ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿರ್ಧಾರ ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದರು. ಇದೇ ವೇಳೆ ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವುದರಲ್ಲಿ ಅರ್ಥವಿದೆ. ಇದರಿಂದ ಆರ್ಥಿಕತೆ ಸುಧಾರಣೆಗೆ ನೆರವಾಗುತ್ತದೆ. ಆದರೆ ಧಾರ್ಮಿಕ ಸ್ಥಳಗಳನ್ನು ಮರಳಿ ಆರಂಭಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು."ಮಾಲ್‌ಗಳು, ರೆಸ್ಟೋರೆಂಟ್ ಮತ್ತು ಮೊದಲಾದುವುಗಳಿಂದ ಹಣಕಾಸಿನ ವ್ಯವಹಾರ ಸುಧಾರಣೆ ಆಗಲಿದೆ. ಆದ್ದರಿಂದಲೇ ಅವುಗಳನ್ನು ಶಾಶ್ವತವಾಗಿ ಮುಚ್ಚಲು ಸಾಧ್ಯವಿಲ್ಲ. ಆದರೆ ಪ್ರಾರ್ಥನಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಕ್ತವನ್ನಾಗಿಸಿರುವುದು ಏಕೆ? ದೇವರು ಎಲ್ಲೆಡೆ ಇದ್ದಾನೆ ಅಲ್ಲವೆ??," ಎಂದು ಛೋಪ್ರ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.ಕೆ.ಎಲ್ ರಾಹುಲ್ ಅವರಿಂದ ಕೊರೊನಾ ವಾರಿಯರ್ಸ್‌ಗೆ 'ಪೂಮಾ ಶೂ' ಕೊಡುಗೆಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ಜನಪ್ರಿಯ ಕಾಮೆಂಟೇಟರ್ ಆಗಿರುವ ಆಕಾಶ್ ಛೋಪ್ರಾ ಅವರ ಈ ಟ್ವೀಟ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ಟ್ವಿಟರ್‌ನಲ್ಲಿ ಹಿಗ್ಗಾಮಗ್ಗ ಜಾಡಿಸಿ ದೇಶದ ಆರ್ಥಿಕತೆಗೆ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳಿಂದಲೂ ಸಾಕಷ್ಟು ನೆರವು ಲಭ್ಯವಾಗುತ್ತಿದೆ ಎಂಬುದರ ಸತ್ಯಾಂಶದ ಅರಿವು ಮೂಡಿಸಿದ್ದಾರೆ.ಧಾರ್ಮಿಕ ಸ್ಥಳಗಳು ಯಾವುದೇ ಕೈಗಾರಿಕೆಗಳಿಗೇನು ಕಡಿಮೆಯಿಲ್ಲ: ಆಕಾಶ್ ಅವರ ಟ್ವೀಟ್‌ಗೆ ಉತ್ತರಿಸಿರುವ ಅಭಿಮಾನಿಯೊಬ್ಬ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರಾರ್ಥನಾ ಮಂದಿರಗಳು ಯಾವುದೇ ಕೈಗಾರಿಕೆಗಳಿಗೆ ಏನೂ ಕಡಿಮೆ ಇಲ್ಲ ಎಂದಿದ್ದಾನೆ. "ಸರ್, ಎಲ್ಲ ರೀತಿಯ ಗೌರವದೊಂದಿಗೆ ಹೇಳುವುದೇನೆಂದರೆ ಧಾರ್ಮವು ಯಾವುದೇ ಕೈಗಾರಿಕೆಗಿಂತ ಕಡಿಮೆಯೇನಿಲ್ಲ. ಇಲ್ಲಿ ಎಲ್ಲ ರೀತಿಯ ಕೆಲಸಗಾರರಿದ್ದಾರೆ, ವ್ಯಾಪಾರಿಗಳಿದ್ದಾರೆ ಮತ್ತು ಸರಕು ಸಾಗಣಿಕೆಯ ಕೆಲಸಗಾರರಿದ್ದಾರೆ. ಬಹುತೇಕ ಧಾರ್ಮಿಕ ಸ್ಥಳಗಳು ಉಳಿದಿರುವಿದೇ ಇವುಗಳಿಂದ. ಅವರು ಕೂಡ ಧಾರ್ಮಿಕ ಸ್ಥಳಗಳನ್ನೇ ಅವಲಂಬಿಸಿದ್ದಾರೆ ಕೂಡ. ಈ ಬಗ್ಗೆಯೂ ನಾವು ಆಲೋಚಿಸಬೇಕಾಗುತ್ತದೆ ಅಲ್ಲವೆ," ಎಂದು ಆಕಾಶ್ ಛೋಪ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ.ಇಂಗ್ಲೆಂಡ್ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕ್ರಿಕೆಟ್ ವೆಸ್ಟ್ ಇಂಡೀಸ್ಎಲ್ಲರಿಂದಲೂ ಆರ್ಥಿಕತೆಗೆ ಕೊಡುಗೆ ಲಭ್ಯವಾಗುತ್ತಿದೆ!: ಛೋಪ್ರಾ ಅವರ ಟ್ವೀಟ್‌ನಿಂದ ಅಭಿಮಾನಿಗಳ ಧಾರ್ಮಿಕ ಭಾವನೆಗೆ ಪೆಟ್ಟಾದಂತಿದ್ದು, ಒಬ್ಬಾತ ಆಕಾಶ್ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. "ಆಕಾಶ್ ನಿಮ್ಮಿಂದ ಈ ರೀತಿಯ ಏಕಮುಖವಾದ ಹೇಳಿಕೆಯನ್ನು ನಿರೀಕ್ಷಿಸರಲಿಲ್ಲ. ಮಂದಿರಗಳು ಆಫೀಸ್ ಮಾದರಿಯಲ್ಲಿ ಇಲ್ಲದೇ ಇರಬಹುದು. ಆದರೆ ಹಲವು ಕುಟುಂಬಗಳು ತಮ್ಮ ಜೀವನ ಸಲುವಾಗಿ ಮಂದಿರಗಳನ್ನೇ ಆಧಾರಿಸಿವೆ. ಹೂವು ಮಾರುವವರು, ಪ್ರಸಾದದ ಅಂಗಡಿಯವರು, ಪಂಡಿತರು ಹೀಗೆ ಎಲ್ಲರ ಜೀವನ ಇದ್ನನೇ ಆಧರಿಸಿದೆ. ಜೀವಿಸುತ್ತಿರುವ ಪ್ರತಿಯೊಬ್ಬರು ಕೂಡ ಭಾರತದ ಆರ್ಥಿಕತೆಗೆ ಕೊಡುಗೆ ಸಲ್ಲಿಸುತ್ತಿದ್ದಾನೆ," ಎಂದು ಜಾಡಿಸಿದ್ದಾರೆ.ಮಾಲ್‌ಗಳಿಂದ ಸೋಂಕು ಹರಡುವುದಿಲ್ಲವೆ?: ಮತ್ತೊಬ್ಬ ಅಭಿಮಾನಿ ಆಕಾಶ್‌ಗೆ ಹಲವು ಪ್ರಶ್ನೆಗಳ ಬೌನ್ಸರ್‌ಗಳನ್ನೇ ಎಸೆದಿದ್ದಾನೆ. "ಆಯ್ತು ಸರ್, ಹಾಗಿದ್ದರೆ ಮಾಲ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವುದೇಕೆ? ಎಲ್ಲವನ್ನೂ ಈಗ ಆನ್ ಲೈನ್ ಮೂಲಕ ಖರೀದಿಸಬಹುದಲ್ಲವೆ. ಹಾಗೆಯೆ ಬೇಕ್ಕಾದ ಆಹರ ಪದಾರ್ಥಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಪಡೆಯಬಹುದು. ಸಿನಿಮಾ ಎಲ್ಲವೂ ಇಂದು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿವೆ. ಇನ್ನು ಧಾರ್ಮಿಕ ಸ್ಥಳಗಳನ್ನು ತೆರೆಯಬೇಕು ಏಕೆಂದರೆ ಅದು ನಮ್ಮ ಸಂಕೃತಿ. ಮಾಲ್‌ಗಳು ನಮ್ಮ ಸಂಸ್ಕೃತಿಯಲ್ಲ," ಎಂದು ಆಕಾಶ್‌ಗೆ ತಿಳಿಸಿಕೊಟ್ಟಿದ್ದಾರೆ.
Malls, Restuarants etc. have financial implications...and perhaps, that’s why it’s not feasible to keep them shut f… https://t.co/AohVSpsnqd
— Aakash Chopra (@cricketaakash) 1590851869000
@cricketaakash Okay then sir Why to open malls, resto etc then? You can order the stuff you get in mall online And… https://t.co/Q99s8xsh1x
— SMVAIDYA (@SmitVaidya2) 1590859875000
@cricketaakash Akash..Didn't expected such one-sided thinking from you. Temples might not be like offices, but many… https://t.co/evBUpmW22R
— Home Sapiens (@athomosapien) 1590852432000
@cricketaakash Sir, with due respect the religion is not less than any industry. All the workers, buisness man, tra… https://t.co/atW87Rdcr9
— Saurav Malla (@SauravMalla7) 1590852166000
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XhSB3P