ಸಮ - ಬೆಸ ನೀತಿಯಡಿ ಶಾಲೆ ಆರಂಭಿಸಲಿ ಎಂದು ರಾಹುಲ್‌ ಗಾಂಧಿ ಟ್ವೀಟ್‌?

ಹಕ್ಕು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಶಾಲೆಗಳನ್ನು ಪುನಃ ತೆರೆಯಲು ಸಮ - ಬೆಸ ನೀತಿಯನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ಜೂನ್ 1 ರಿಂದ ಸಮ - ಬೆಸ ನೀತಿ ಆಧಾರದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮತ್ತೆ ತೆರೆಯಬೇಕು. ಬೆಸ ದಿನಗಳಲ್ಲಿ ಶಿಕ್ಷಕರು ಬರಬೇಕು ಮತ್ತು ಸಮ ದಿನಗಳಲ್ಲಿ ವಿದ್ಯಾರ್ಥಿಗಳು ಬರಬೇಕು ಎಂದು ಈ ಟ್ವೀಟ್ ಹೇಳುತ್ತದೆ. ಟೈಮ್ಸ್ ಫ್ಯಾಕ್ಟ್ ಚೆಕ್ ಓದುಗರು ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಕಳಿಸಿದ್ದು, ಇದು ಅಧಿಕೃತ ಟ್ವೀಟ್‌ ಹೌದೋ ಅಲ್ಲವೋ ಎಂದು ತಿಳಿಯಲು ಬಯಸಿದ್ದರು. ಸತ್ಯ ಇದು ನಕಲಿ ಟ್ವೀಟ್. ರಾಹುಲ್‌ ಗಾಂಧಿ ಅಂತಹ ಯಾವುದೇ ಟ್ವೀಟ್ ಮಾಡಿಲ್ಲ. ಈ ಟ್ವೀಟ್‌ ಅನ್ನು ತಮಾಷೆಯಾಗಿ ಸೃಷ್ಟಿ ಮಾಡಲಾಗಿದೆ ಎಂದು ತೋರುತ್ತದೆ. ಆದರೂ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ಟ್ವೀಟ್‌ ಅನ್ನು ನೈಜವೆಂದು ತಿಳಿದುಕೊಂಡು ಹಲವರು ವೈರಲ್‌ ಮಾಡಿದ್ದಾರೆ. ಪರಿಶೀಲನೆ ಮತ್ತು ವಿಧಾನ ಈ ಟ್ವೀಟ್ ಮೇ 22, 2020ರ ದಿನಾಂಕವನ್ನು ಹೊಂದಿದೆ. ನಾವು ರಾಹುಲ್‌ ಗಾಂಧಿಯವರ ಪರಿಶೀಲಿಸಿದ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹುಡುಕಿದೆವು ಮತ್ತು ಆ ದಿನಾಂಕದಂದು ಅವರಿಂದ ಅಂತಹ ಯಾವುದೇ ಟ್ವೀಟ್ ಕಂಡುಬಂದಿಲ್ಲ. ಅಲ್ಲದೆ, ಕೊರೊನಾ ವೈರಸ್ ವಿಷಯದ ಬಗ್ಗೆ ಮತ್ತು ಅದು ಭಾರತದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಕಾಂಗ್ರೆಸ್‌ ಮುಖಂಡ ಆನ್‌ಲೈನ್‌ ಮೂಲಕ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಆ ಸಂವಾದಗಳಲ್ಲಿ ಸಹ ಸಮ - ಬೆಸ ಯೋಜನೆಯಂತೆ ಶಾಲೆಗಳನ್ನು ಪುನ: ತೆರೆಯಲು ರಾಹುಲ್‌ ಗಾಂಧಿ ಸೂಚಿಸಿರುವುದು ಕಂಡುಬಂದಿಲ್ಲ. ತೀರ್ಮಾನ ಶಾಲೆಗಳನ್ನು ಪುನಃ ತೆರೆಯಲು ಸಮ - ಬೆಸ ಸ್ಕೀಮ್‌ ಅನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ ಎನ್ನಲಾದ ಟ್ವೀಟ್‌ ನಕಲಿ ಎಂಬುದನ್ನು ಟೈಮ್ಸ್ ಫ್ಯಾಕ್ಟ್‌ ಚೆಕ್‌ ಕಂಡುಕೊಂಡಿದೆ.


from India & World News in Kannada | VK Polls https://ift.tt/3erGHdz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...