ಜೈಪುರ: ಸಾರಿಸ್ಕಾ ಟೈಗರ್ ರಿಸರ್ವ್‌ನಲ್ಲಿರುವ (ಎಸ್‌ಟಿಆರ್) ಆರು ವರ್ಷದ 'ಎಸ್‌ಟಿ-12' ಎರಡನೇ ಬಾರಿಗೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರೊಂದಿಗೆ ಕಳೆದೆರಡು ವರ್ಷಗಳಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. ಅಲ್ಲದೆ ಕೇಂದ್ರದಲ್ಲಿ ಆರು ಮರಿಗಳನ್ನು ಹೊಂದಿರುವ ಹೆಣ್ಣು ಹುಲಿ ಎಂಬ ಮೂಲಕ ದಾಖಲೆಗೆ ಪಾತ್ರವಾಗಿದೆ. ಈ ಹಿಂದೆ ಎಸ್‌ಟಿಆರ್ ಇತಿಹಾಸದಲ್ಲೇ 2018ನೇ ಇಸವಿಯಲ್ಲಿ ತ್ರಿವಳಿ ಮರಿಗಳಿಗೆ ಜನ್ಮ ನೀಡಿ ಹೆಣ್ಣು ಹುಲಿ ದಾಖಲೆಯನ್ನು ನಿರ್ಮಿಸಿತ್ತು. 2014ನೇ ಇಸವಿಯಲ್ಲಿ ಜನಿಸಿರುವ ಈ ಹೆಣ್ಣು ಹುಲಿ ಇದು ಎರಡನೇ ಬಾರಿಗೆ ತ್ರಿವಳಿ ಮರಿಗಳಿಗೆ ಜನ್ಮ ನೀಡುತ್ತಿದೆ ಎಂದು ಹಿರಿಯ ಅರಣ್ಯಧಿಕಾರಿಯೊಬ್ಬರು ವಿವರಣೆ ನೀಡಿದ್ದಾರೆ. ಇದರೊಂದಿಗೆ ಸಾರಿಸ್ಕಾ ಮೀಸಲು ಅರಣ್ಯ ಪ್ರದೇಶದಲ್ಲಿ ಒಟ್ಟು ಹುಲಿಗಳ ಸಂಖ್ಯೆ ಈಗ 20ಕ್ಕೆ ಏರಿಕೆಯಾಗಿದೆ. ಎಸ್‌ಟಿಆರ್‌ನಲ್ಲಿರುವ ಒಟ್ಟು ಹುಲಿಗಳ ಕಾಲು ಭಾಗಕ್ಕಿಂತಲೂ ಹೆಚ್ಚು ಎಸ್‌ಟಿ-12 ಸಂತತಿಗೆ ಸೇರಿದ್ದಾಗಿದೆ. ಹುಲಿ ಮರಿಗಳೊಂದಿಗೆ ತಾಯಿ ಹುಲಿ ತೆರಳುವ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ಸಂತಸದ ಸುದ್ದಿಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಹಂಚಿದ್ದಾರೆ. ಕೊರೊನಾ ವೈರಸ್ ಆತಂಕದ ನಡುವೆ ಹೆಣ್ಣು ಹುಲಿ ಸಂತಸದ ಸುದ್ದಿ ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ರಾಜಸ್ಥಾನದ ವನ್ಯಜೀವಿ ಸಂಪತ್ತು ಮತ್ತಷ್ಟು ಅಭಿವೃದ್ಧಿ ಹೊಂದಲು ಶುಭ ಹಾರೈಸಿದ್ದಾರೆ.
from India & World News in Kannada | VK Polls https://ift.tt/2ZEnFwl