ಉತ್ತರ ಭಾರತದಲ್ಲಿ ಸುಡುವ ಬಿಸಿಲು; ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್!

ಹೊಸದಿಲ್ಲಿ: ಒಂದೆಡೆ ಕೊರೊನಾ ವೈರಸ್ ಸೋಂಕಿನ ಅಲೆ. ಇನ್ನೊಂದೆಡೆ ಸುಡುವ ಬಿಸಿಲು. ಹೌದು, 2020 ಮೇ ಅಂತ್ಯದ ವೇಳೆಗೆ ಉತ್ತರ ಭಾರತದಲ್ಲಿ ಭಾರಿ ಉಷ್ಣಾಂಶ ದಾಖಲಾಗುತ್ತಿದೆ. ಅತ್ತ ಬಂಗಾಳ ಕೊಲ್ಲಿಯಿಂದ ಉದ್ಭವಗೊಂಡ ಅಂಫಾನ್ ಚಂಡಮಾರುತವು ಪೂರ್ವ ಕರಾವಳಿ ಭಾಗವಾದ ಪಶ್ಚಿಮ ಬಂಗಾಳ ಹಾಗೂ ಒಡಿಶಾವನ್ನು ಅಪ್ಪಳಿಸಿದ್ದರೆ ಇತ್ತ ಉತ್ತರ ಭಾರದಲ್ಲಿ ಬಿಸಿ ಗಾಳಿಯು ಭಯಂಕರವಾಗಿ ಬೀಸುತ್ತಿದೆ. ತಾಪಮಾನದಲ್ಲಿ ಉಂಟಾಗುತ್ತಿರುವ ಏರುಪೇರಿನಿಂದಾಗಿ ಉತ್ತರ ಭಾರತದ ಜನರು ತತ್ತರಿಸಿ ಹೋಗಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರಿಗೆ ಜೀವನ ಮತ್ತಷ್ಟು ಕಷ್ಟಕರವೆನಿಸಿದೆ.

ಕಳೆದ 18 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಿನವೊಂದರಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ದಿಲ್ಲಿಯ ಸರ್ಫ್‌ದುರ್‌ಜಂಗ್ ಗರಿಷ್ಠ 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು 2002ನೇ ಇಸವಿಯಲ್ಲಿ ದಾಖಲಾದ ಉಷ್ಣಾಂಶಗಿಂತಲೂ ಹೆಚ್ಚಾಗಿದೆ. ಇದಕ್ಕೂ ಮೊದಲು 1998 ಮೇ 29ರಂದು 46.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅಂದ ಹಾಗೆ 1944ನೇ ಇಸವಿಯ ಮೇ 29ರಂದು ಸರ್ಫ್‌ದುರ್‌ಜಂಗ್‌ನಲ್ಲಿ 47.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಗರಿಷ್ಠ ಉಷ್ಣಾಂಶ ದಾಖಲೆಯಾಗಿದೆ.

ಉತ್ತರ ಭಾರತದಲ್ಲಿ ಈಗ ರಕ್ಕಸ ಗಾತ್ರದ ಮಿಡತೆ ಚಂಡಮಾರುತ! ರೈತ ಕಂಗಾಲು

ಇಡೀ ಜಗತ್ತಲ್ಲೇ ಉತ್ತರ ಭಾರತ ಹಾಗೂ ಆಗ್ನೇಯ ಪಾಕಿಸ್ತಾನದಲ್ಲಿ ಮಂಗಳವಾರದಂದು ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಚುರು ಪ್ರದೇಶದಲ್ಲಿ ದಾಖಲೆಯ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ಮೂಲಕ ಜಗತ್ತಿನಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಪ್ರದೇಶ ಎಂದೆನಿಸಿದೆ. ಇದಕ್ಕೆ ಸಮಾನವಾಗಿ ಪಾಕಿಸ್ತಾನದ ಜಾಕೊದಾಬಾದ್‌ನಲ್ಲೂ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪಾಲಂನಲ್ಲೂ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, 47.6 ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ದಶಕದಲ್ಲೇ ದಾಖಲಾದ ಗರಿಷ್ಠ ತಾಪಮಾನವಾಗಿದೆ.

ರಾಜಸ್ಥಾನ ಹಾಗೂ ಪಾಕಿಸ್ತಾನ ಕಡೆಯಿಂದ ಬಲವಾದ ಬಿಸಿ ಗಾಳಿಯು ಉತ್ತರ ಭಾರತದತ್ತ ಬೀಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ಮಾರುತವು ಉತ್ತರ ಭಾರತ, ಕೇಂದ್ರ ಭಾರತ ಹಾಗೂ ಪೂರ್ವ ಭಾರತದತ್ತ ಬೀಸುತ್ತಿದೆ.

ಬೆಂಗಳೂರಿನಲ್ಲಿ ಸಂಜೆ ಮಳೆ ಅಬ್ಬರ..! ಹಲವೆಡೆ ಧರೆಗುರುಳಿದ ಮರ, ಕಾರುಗಳು ಜಖಂ

ವಿದರ್ಭ, ಹರಿಯಾಣ, ಚಂಡೀಗಡ, ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಬಿಸಿ ಗಾಳಿ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ. ಅದೇ ಹೊತ್ತಿಗೆ ಮೇ 28ರ ಬಳಿಕ ಉಷ್ಣಾಂಶದಲ್ಲಿ ಅಲ್ಪ ಇಳಿಕೆಯಾಗಲಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.



from India & World News in Kannada | VK Polls https://ift.tt/3enBcMZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...