ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ರೈತರು, ಆಟೋ, ಟ್ಯಾಕ್ಸಿ ಚಾಲಕರು ಮತ್ತಿತರರಿಗಾಗಿ ಘೋಷಿಸಿದ ವೃತ್ತಿ ಆಧರಿತ ಪ್ಯಾಕೇಜ್ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಕೆಲವರಿಗೆ ಪರಿಹಾರ ಪಡೆಯಲು ಸಮಸ್ಯೆಯಾದ ಹಿನ್ನೆಲೆಯಲ್ಲಿ ಈ ಸರಳೀಕರಣ ನಡೆದಿದೆ. ಆಟೋ, ಟ್ಯಾಕ್ಸಿ ಚಾಲಕರಿಗೆ ಬ್ಯಾಡ್ಜ್ ಸೇರಿ ಇನ್ನಿತರ ದಾಖಲೆಗಳನ್ನು ನೀಡುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ಒಂದು ಆಟೋ, ಟ್ಯಾಕ್ಸಿಗಳಿಗೆ ಶಿಫ್ಟ್ ಆಧಾರದ ಮೇಲೆ ಇಬ್ಬರು ಚಾಲಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಂದು ವಾಹನಕ್ಕೆ ಒಬ್ಬರು ಎಂಬ ನಿಯಮ ಸಡಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಈ ಹಿಂದಿನ ಘೋಷಣೆ ಪ್ರಕಾರ ಮೆಕ್ಕೆ ಜೋಳ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 5 ಸಾವಿರ ರೂ. ನೀಡಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆ ನಿಯಮ ಹೊರಡಿಸುವ ಸಂದರ್ಭದಲ್ಲಿ ಹಿಂಗಾರು ಎಂಬ ಶಬ್ದ ಸೇರಿಸಲಾಗಿತ್ತು. ಇದರಿಂದ ಎಲ್ಲರಿಗೂ ಅನುಕೂಲವಾಗುವುದಿಲ್ಲ ಎಂಬ ಕಾರಣಕ್ಕೆ ಹಿಂಗಾರು, ಮುಂಗಾರು ಬೆಳೆ ಬೆಳೆದ ಎಲ್ಲ ರೈತರಿಗೂ ಎಕರೆಗೆ 5 ಸಾವಿರ ರೂ. ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.
from India & World News in Kannada | VK Polls https://ift.tt/3ceHyN4