ಆಪತ್ತಿನ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಚೀನಾ ಸೇನೆಗೆ ಕ್ಸಿ ಜಿನ್‌ಪಿಂಗ್ ಕರೆ!

ಬಿಜಿಂಗ್: ಭಾರತದೊಂದಿಗೆ ಗಡಿ ತಂಟೆ ತೆಗೆದಿರುವ ಚೀನಾ, ಲಡಾಖ್ ಗಡಿಯಲ್ಲಿ ತನ್ನ ಉಪಟಳವನ್ನು ಮುಂದುವರೆಸಿದೆ. ಗಡಿಯಲ್ಲಿ ದಿನದಿಂದ ದಿನಕ್ಕೆ ಸೈನ್ಯ ಬಲವರ್ಧನೆ ಮಾಡಿಕೊಳ್ಳುತ್ತಿರುವ ಚೀನಾ, ಭಾರತದೊಂದಿಗೆ ಬೃಹತ್ ಮಿಲಿಟರಿ ಮುಖಾಮುಖಿ ನಡೆಸಲು ಸಿದ್ಧತೆ ನಡೆಸಿದೆ ಎಂದೇ ಅನುಮಾನಿಸಲಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಗಡಿಯಲ್ಲಿ ಎದುರಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಜ್ಜಾಗುವಂತೆ ಕ್ಸಿ ಜಿನ್‌ಪಿಂಗ್ ತಮ್ಮ ಸೇನೆಗೆ ಕರೆ ನೀಡಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಸಭೆಯಲ್ಲಿ ಮಾತನಾಡಿದ ಕ್ಸಿ ಜಿನ್‌ಪಿಂಗ್, ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಯಾವುದೇ ಸಂಭಾವ್ಯ ದಾಳಿಯನ್ನು ಹಿಮ್ಮೆಟ್ಟಿಸಲು ಸಜ್ಜಾಗುವಂತೆ ಸೇನೆಗೆ ಕರೆ ನೀಡಿದ್ದಾರೆ. ಆದರೆ ತಮ್ಮ ಭಾಷಣದಲ್ಲಿ ಯಾವ ದೇಶದ ಹೆಸರನ್ನೂ ಉಲ್ಲೇಖಿಸದ ಕ್ಸಿ ಜಿನ್‌ಪಿಂಗ್, ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಸೇನೆ ಸಶಕ್ತವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಕ್ಸಿ ಜಿನ್‌ಪಿಂಗ್ ಅವರ ಈ ಕರೆ ಭಾರೀ ಮಹತ್ವ ಪಡೆದುಕೊಂಡಿದ್ದು, ಭಾರತದೊಂದಿಗೆ ಗಡಿಯಲ್ಲಿ ವಿನಾಕಾರಣ ತಗಾದೆ ತೆಗೆದಿರುವ ಚೀನಾ ಮತ್ತಷ್ಟು ಆಕ್ರಮಣಕಾರಿ ನೀತಿ ಅನುಸರಿಸಲಿದೆ ಎಂಬ ಅನುಮಾನ ಮೂಡಿದೆ. ಸಿಕ್ಕಿಂ ಗಡಿ ಸಂಘರ್ಷದ ಬಳಿಕ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಹೆಚ್ಚಿನ ಸೈನಿಕರನ್ನು ಜಮಾವಣೆಗೊಳಿಸಿರುವ ಚೀನಾ, ಪ್ರಮುಖವಾಗಿ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ತನ್ನ ಉಪಟಳವನ್ನು ಹೆಚ್ಚಿಸಿದೆ.


from India & World News in Kannada | VK Polls https://ift.tt/2AevRZr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...