6 ವರ್ಷದ‌ ಮಗುವಿನವರೆಗೂ ಆನ್‌ಲೈನ್ ಶಿಕ್ಷಣ ಸೂಕ್ತವಲ್ಲ: ಎಸ್‌. ಸುರೇಶ್ ಕುಮಾರ್

ಕೋಲಾರ: ಇತ್ತೀಚೆಗೆ ಗೀಳಾಗಿದೆ. ಖಾಸಗಿ ಶಾಲೆಗಳು ಹಣದ ಆಸೆಗೆ ಇದನ್ನೊಂದು ದಂದೆಯಾಗಿ ಮಾಡಿಕೊಂಡಿವೆ. ನಿಮ್ಹಾನ್ಸ್ ವೈದ್ಯರ ಸ್ಪಷ್ಟನೆ ಪ್ರಕಾರ 6 ವರ್ಷದ‌ ಮಗುವಿನ ವರೆಗೂ ಆನ್ ಲೈನ್ ಶಿಕ್ಷಣ ಸೂಕ್ತವಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಹೇಳಿದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾದಿಂದ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಆನ್ ಲೈನ್ ಶಿಕ್ಷಣ ಗೀಳಾಗಿದೆ, ಹಾಗಾಗಿ ಇದು ಅರ್ಥ ಆಗದ ವಿಚಾರ. ನಿಮ್ಹಾನ್ಸ್ ವೈದ್ಯರ ಸ್ಪಷ್ಟನೆ ಪ್ರಕಾರ 6 ವರ್ಷದ‌ ಮಗುವಿನ ವರೆಗೂ ಆನ್ ಲೈನ್ ಶಿಕ್ಷಣ ಸೂಕ್ತವಲ್ಲ. ಆನ್ ಲೈನ್ ಶಿಕ್ಷಣದ ಬಗ್ಗೆ ಮುಂದಿನ ವಾರ ರಾಜ್ಯ ಸರ್ಕಾರ ಖಚಿತ ನಿರ್ಧಾರ ತಿಳಿಸಲಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಹೊಸ ನಿರ್ದೇಶನ ಬಂದರೆ ದೇವಸ್ಥಾನ, ಮಾಲ್, ಎಲ್ಲವೂ ಪ್ರಾರಂಭವಾಗಲಿದೆ. ಕೊರೊನಾ ಹೇಳಿಕೇಳಿ ಬಂದಿಲ್ಲ, ಮಾರ್ಚ್‌ನಲ್ಲಿ ನಮ್ಮ ದೇಶದಲ್ಲಿ ಕಾಣಿಸಿಕೊಂಡಿದೆ. ಮಾಸ್ಕ್, ಸಾಮಾಜಿಕ‌ ಅಂತರ, ಗುಂಪು ಸೇರದೆ ಇರುವುದೇ ಇದಕ್ಕೆ ಔಷಧ. ಎಚ್ ಐವಿ, ಚಿಕನ್ ಗುನ್ಯಾ, ಎಚ್ 1 ಎನ್ 1 ಜೊತೆ ಬೆರೆತ ಹಾಗೆ ಕೊರೊನಾ ಜೊತೆ ಬದುಕು ಸಹ ಸಾಧ್ಯ.


from India & World News in Kannada | VK Polls https://ift.tt/2TT6Muf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...