ಹಕ್ಕು ಪಾಕಿಸ್ತಾನದ ಕರಾಚಿ ಏರ್‌ಪೋರ್ಟ್ ಬಳಿ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನ ಅಪಘಾತದ ಸುದ್ದಿ ಸುದ್ದಿಮಾಧ್ಯಮಗಳಲ್ಲಿ ಬಿತ್ತರವಾದ ಕೆಲವೇ ನಿಮಿಷಗಳಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪಿಐಎ ವಿಮಾನವು ಲ್ಯಾಂಡ್ ಆಗುವ ಚಿತ್ರವೊಂದನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ಇದರಲ್ಲಿ ವಿಮಾನದ ಎರಡೂ ಎಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡಿವೆ. ಕೆಲವರು ಇದನ್ನು ಸಾಂದರ್ಭಿಕ ಚಿತ್ರವಾಗಿ ಬಳಸಿದರೆ, ಇನ್ನೂ ಹಲವರು ವಿಮಾನ ಲ್ಯಾಂಡ್ ಆಗುವ ಮುನ್ನ ಬೆಂಕಿ ಹೊತ್ತಿಕೊಂಡ ಕೊನೆಯ ಕ್ಷಣದ ಚಿತ್ರ ಎಂದು ಹಂಚಿಕೊಂಡಿದ್ದಾರೆ. ಪ್ರಮುಖ ಸುದ್ದಿ ಚಾನೆಲ್‌ಗಳು ಸಹ ಅದೇ ಚಿತ್ರವನ್ನು ವಿವಿಧ ಸುದ್ದಿ ವಿಭಾಗಗಳಲ್ಲಿ ಪ್ರಸಾರ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುವ ಕೆಲವೇ ಕ್ಷಣಗಳ ಮುನ್ನ ಅದರ ಎಂಜಿನ್‌ಗಳು ಬೆಂಕಿಗೆ ಆಹುತಿಯಾದವು. ಆ ವಿಮಾನದ ಎಕ್ಸ್‌ಕ್ಲ್ಯೂಸಿವ್ ಚಿತ್ರವೆಂದು ಹೇಳಿಕೊಂಡಿವೆ. ಸತ್ಯ ಈ ಚಿತ್ರವನ್ನು ಹಳೆಯ ಸಿಮ್ಯುಲೇಶನ್ ವಿಡಿಯೋದಿಂದ ತೆಗೆದುಕೊಳ್ಳಲಾಗಿದೆ. ಕರಾಚಿಯಲ್ಲಿ ಶುಕ್ರವಾರ ಅಪಘಾತಕ್ಕೀಡಾದ ವಿಮಾನ ಇದು ಅಲ್ಲ. ಪರಿಶೀಲನೆ ಮತ್ತು ವಿಧಾನ ಗೂಗಲ್ ಸರ್ಚ್ ಎಂಜಿನ್‌ನ ಸರಳ ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿಕೊಂಡು, ಸಿಮ್ಯುಲೇಟೆಡ್ ಫ್ಲೈಟ್ ಕ್ರ್ಯಾಶ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಹೆಸರುವಾಸಿಯಾದ ಯೂಟ್ಯೂಬ್ ಚಾನೆಲ್ 'ರನ್‌ಸೇಮ್'ಗೆ ಅಪ್‌ಲೋಡ್ ಮಾಡಿದ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವಿಡಿಯೋವನ್ನು ಜೂನ್ 28, 2019 ರಂದು ಅಪ್‌ಲೋಡ್ ಮಾಡಲಾಗಿದೆ. 'ಪಿಐಎ 777-200 [ಎಂಜಿನ್ ಫೈರ್] ಕ್ರ್ಯಾಶ್ ಲ್ಯಾಂಡಿಂಗ್ ಲಾಹೋರ್ ಪಾಕಿಸ್ತಾನ' ಎಂಬ ಶೀರ್ಷಿಕೆಯೊಂದಿಗೆ, 0:46 ಸೆಕೆಂಡ್‌ನಲ್ಲಿ ಮೇಲಿನ ಸುಳ್ಳು ಹಕ್ಕಿನೊಂದಿಗೆ ಹಂಚಿಕೊಂಡ ದೃಶ್ಯದ ಫೋಟೋವನ್ನು ಹೊಂದಿದೆ. ನನ್ನ ಎಲ್ಲಾ ವಿಮಾನ ಕ್ರ್ಯಾಶ್ ವಿಡಿಯೋಗಳು ಕೇವಲ ಸಿಮ್ಯುಲೇಟೆಡ್ ಕ್ರ್ಯಾಶ್‌ಗಳಾಗಿವೆ. ಹೆಚ್ಚಿನ ವಿಡಿಯೋಗಳಲ್ಲಿ ತೋರಿಸಿದ ಹೆಚ್ಚಿನ ಕ್ರ್ಯಾಶ್‌ಗಳಿಗೆ ನಿಜವಾದ ಬ್ಯಾಕ್‌ಗ್ರೌಂಡ್ ಇಲ್ಲ. ಸುಲಭ ಪದಗಳು: ಅವುಗಳು ಕೇವಲ ಫ್ಯಾಂಟಸಿ ಕ್ರ್ಯಾಶ್‌ಗಳು ಎಂದು ವಿಡಿಯೋಗೆ ನೀಡಿದ ವಿವರಣೆಯನ್ನು ನೋಡಬಹುದು. ತೀರ್ಮಾನ ಹಳೆಯ ಫ್ಲೈಟ್ ಕ್ರ್ಯಾಶ್ ಸಿಮ್ಯುಲೇಶನ್ ವಿಡಿಯೋದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಕರಾಚಿಯಲ್ಲಿ ಇತ್ತೀಚೆಗೆ ಅಪಘಾತಕ್ಕೀಡಾದ ಪಿಐಎ ವಿಮಾನ ಹಾರಾಟದ ದೃಶ್ಯವಾಗಿ ತಪ್ಪಾಗಿ ಬಳಸಿಕೊಂಡಿದ್ದಾರೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಕೊಂಡಿದೆ.
from India & World News in Kannada | VK Polls https://ift.tt/2B5WBMp