ಮೇಕೆದಾಟು ಜಲಾಶಯ ನಿರ್ಮಾಣ ಜೀವಂತ: ರಮೇಶ್‌ ಜಾರಕಿಹೊಳಿ

ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿರುವ ಶೇಖರಣಾ ಜಲಾಶಯ ಯೋಜನೆ ಜೀವಂತವಾಗಿದ್ದು, ಕಾರ್ಯಗತಗೊಳಿಸಲು ಬದ್ಧವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಸ್ಪಷ್ಟಪಡಿಸಿದ್ದಾರೆ. '' ಮತ್ತು ಕಬಿನಿ ಜಲಾಶಯಗಳ ಕೆಳಭಾಗದಲ್ಲಿ ಬಿಳಿ ಗುಂಡ್ಲುವರೆಗೆ ನೀರನ್ನು ಸಂಗ್ರಸಲು ಯಾವುದೇ ಅಣೆಕಟ್ಟು ಇಲ್ಲ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಶೇಖರಣಾ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯು ಕೇಂದ್ರ ಜಲ ಆಯೋಗ 2018ರ ನ. 22ರಂದು ಯೋಜನಾ ವರದಿ ತಯಾರಿಸಲು ತಾತ್ವಿಕ ಅನುಮೋದನೆ ನೀಡಿದೆ. ಬಳಿಕ 9 ಸಾವಿರ ಕೋಟಿ ರೂ.ಗಳ ಮೊತ್ತದ ಯೋಜನಾ ವರದಿಯನ್ನು ತಯಾರಿಸಿ 2019ರ ಜ. 18ರಂದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ,'' ಎಂದರು. ''ಕಾವೇರಿ ನ್ಯಾಯಾಧಿಕರಣದ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ನಾವು ತಮಿಳುನಾಡು ರಾಜ್ಯಕ್ಕೆ ಮಾಸಿಕವಾಗಿ ನಿಗದಿಪಡಿಸಿದ ವಾರ್ಷಿಕ ನೀರಿನ ಪ್ರಮಾಣ 177.25 ಟಿ.ಎಂ.ಸಿ ಹರಿಸಲು ಹಾಗೂ 400 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದಿಸಲು, ಬೆಂಗಳೂರು ನಗರಕ್ಕೆ 4.75 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸಲು ಉದ್ದೇಶಿಸಿದ್ದೇವೆ,'' ಎಂದರು.


from India & World News in Kannada | VK Polls https://ift.tt/2TQed5s

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...