ಸಹಾಯಧನ ಚಾಲಕರಿಗೋ, ಮಾಲೀಕರಿಗೋ? ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಯೇ ಇಲ್ಲ!

- ಎನ್‌. ಪ್ರಸನ್ನಕುಮಾರ್‌, ಬೆಂಗಳೂರು ಗ್ರಾಮಾಂತರ ಲಾಕ್‌‍ಡೌನ್‌ನಿಂದ ಸಂಕಷ್ಟದಲ್ಲಿರುವ ಆಟೊ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ಚಾಲಕರಿಗೆ ನೆರವು ನೀಡುವುದಾಗಿ ರಾಜ್ಯ ಸರಕಾರ ತಲಾ ಐದು ಸಾವಿರ ರೂ. ಪರಿಹಾರ ಘೋಷಿಸಿದೆ. ಸರಕಾರದ ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಸಹಾಯಧನದ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವುದರಿಂದ ಅರ್ಹರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಸರಕಾರದ ನಿಬಂಧನೆಗಳಿಂದ ಎಲ್ಲಚಾಲಕರಿಗೆ ಸಹಾಯಧನ ಸಿಗದಂತಾಗಿದೆ. ವೆಬ್‌ಸೈಟ್‌ನಲ್ಲಿ ವಾಹನಗಳ ಮಾಹಿತಿ ಕೇಳಲಾಗುತ್ತಿದೆ. ಚಾಸಿಸ್‌ ನಂಬರ್‌ ಕೇಳಲಾಗಿದೆ. ಆದರೆ ಒಂದು ಕಾರನ್ನು ಮೂವರು ಪಾಳಿ ಆಧಾರದಲ್ಲಿ ಚಲಾಯಿಸುತ್ತಾರೆ. ಎಲ್ಲರೂ ಒಂದೇ ವಾಹನದ ಮಾಹಿತಿ ಒದಗಿಸಬಹುದೇ? ಇಲ್ಲವೇ, ಟ್ಯಾಕ್ಸಿ ಮಾಲೀಕರಿಗೆ ಮಾತ್ರ ನೆರವು ಸಿಗಲಿದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ. ತಮ್ಮ ಹೆಸರಿನಲ್ಲಿ ಸಾಲ ಪಡೆಯಲಾಗದವರು ಕುಟುಂಬದವರ ಹೆಸರಿನಲ್ಲಿ ಕಾರು ಖರೀದಿಸಿ ಓಡಿಸುತ್ತಿದ್ದಾರೆ. ಇಂಥವರಿಗೆ ಪರಿಹಾರ ಸಿಗಲಿದೆಯೇ ಎಂಬ ಬಗ್ಗೆಯೂ ಸರಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಿಲ್ಲ ಎನ್ನುತ್ತಾರೆ ಟ್ಯಾಕ್ಸಿ . ಚಾಲಕರ ಹೆಸರು, ವಾಹನ ಮಾಲೀಕರ ಹೆಸರು ಬದಲಾದಾಗ, ಇಬ್ಬರು ಒಂದೇ ಚಾಸಿಸ್‌ ಸಂಖ್ಯೆ ನಮೂದಿಸಿದಾಗ ಹೀಗೆ ನಾನಾ ಸಂದರ್ಭಗಳಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತಿಲ್ಲ. ಇದರಿಂದಾಗಿ ನೆರವು ಪಡೆಯಲು ಯಾರು ಅರ್ಹರು ಎಂಬುದು ಪ್ರಶ್ನೆಯಾಗಿ ಉಳಿದಿದೆ. 338 ಕೋಟಿ ರೂ.ಗೆ 20 ಕೋಟಿ ಬಿಡುಗಡೆ ರಾಜ್ಯದಲ್ಲಿ 7.75 ಲಕ್ಷ ಟ್ಯಾಕ್ಸಿ ಚಾಲಕರಿದ್ದಾರೆ. ಸಹಾಯಧನವಾಗಿ ಒಬ್ಬರಿಗೆ ಐದು ಸಾವಿರ ರೂ. ನೀಡುವುದಾಗಿ ಸರಕಾರ 338 ಕೋಟಿ ರೂ. ಪ್ಯಾಕೇಜ್‌ ಘೋಷಿಸಿದ್ದು, ಕೇವಲ 20 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ ಎನ್ನುತ್ತಾರೆ ಚಾಲಕರ ಸಂಘದವರು. ಬೆಂಗಳೂರಿನಲ್ಲಿ 1.20 ಲಕ್ಷ ಟ್ಯಾಕ್ಸಿ ಚಾಲಕರಿದ್ದಾರೆ. ಕೆಂಪೇಗೌಡ ಏರ್‌ಪೋರ್ಟ್‌ನಲ್ಲೇ 12 ಸಾವಿರಕ್ಕೂ ಅಧಿಕ ಟ್ಯಾಕ್ಸಿ ಚಾಲಕರಿದ್ದಾರೆ. ಇಷ್ಟು ಮಂದಿಯಲ್ಲಿಎಷ್ಟು ಜನರಿಗೆ ಸಹಾಯಧನ ಸಿಗಲಿದೆ ಎಂಬುದೇ ಅಸ್ಪಷ್ಟ. ಆರ್ಥಿಕ ನೆರವು ಕಾರಿನ ಮಾಲೀಕರಿಗೆ ಅಥವಾ ಚಾಲಕರಿಗೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಮ್ಯಾಕ್ಸಿ ಕ್ಯಾಬ್‌ನವರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೊಟ್ಟಂತಿರಬೇಕು, ತೆಗೆದುಕೊಳ್ಳಲಾಗದಂತಿರಬೇಕು ಎಂಬಂತಿದೆ ಸರಕಾರದ ನೀತಿ. - ರಮೇಶ್‌ ಹೊಳ್ಳ, ಅಧ್ಯಕ್ಷ, ಬೃಹತ್‌ ಬೆಂಗಳೂರು ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌


from India & World News in Kannada | VK Polls https://ift.tt/2zyflnl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...