ಕೊರೊನಾ ಕಾಲದಲ್ಲಿ ರಾಜಕಾರಣಿ ಪುತ್ರನ ಅದ್ದೂರಿ ಮದುವೆ: ನೂರಾರು ಜನರನ್ನು ರಂಜಿಸಿದ ನರ್ತಕಿ..!

(ಉತ್ತರ ಪ್ರದೇಶ): ಇಡೀ ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಕೊರೊನಾ ವೈರಸ್‌ನಿಂದ ಬಾಧಿತವಾಗಿದೆ. ಸಾಮಾಜಿಕ ಅಂತರ ಪಾಲನೆ ಮಾಡಿ, ಮಾಸ್ಕ್ ಧರಿಸಿ ಎಂದು ಪದೇ ಪದೇ ಮಾಧ್ಯಮಗಳಲ್ಲಿ ಸಂದೇಶ ಪ್ರಕಟವಾಗುತ್ತಲೇ ಇದೆ. ಆದ್ರೆ, ಜನರಿಗೆ ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳೇ, ಬೇಜವಾಬ್ದಾರಿ ವರ್ತನೆ ತೋರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಅಲಿಗಢದಲ್ಲಿ ಮೊಹಮ್ಮದ್ ಜುಹೈದ್ ಎಂಬಾತ ತನ್ನ ಪುತ್ರನ ಮದುವೆಗೆ ನೂರಾರು ಜನರನ್ನು ಸೇರಿಸಿದ್ದ. ಅಷ್ಟೇ ಅಲ್ಲ, ಈತನ ಮಗನ ಮದುವೆಗೆ ಡ್ಯಾನ್ಸರ್‌ಗಳು ಬೇರೆ ವಿಶೇಷ ಆಕರ್ಷಣೆಯಾಗಿ ಬಂದಿದ್ದರು. ನೂರಾರು ಜನರ ಸಮ್ಮುಖದಲ್ಲಿ ಡ್ಯಾನ್ಸರ್ ಕುಣಿಯುತ್ತಿದ್ದರೆ ಜನರು ಮಾಸ್ಕ್‌ ಕೂಡಾ ಧರಿಸದೆ ಕಣ್ಣು, ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು. ಸಮಾರಂಭಗಳಲ್ಲಿ ಡ್ಯಾನ್ಸರ್‌ಗಳನ್ನು ಕರೆಸೋದು, ಹಾಡುಗಾರರನ್ನು ಕರೆಸುವ ಪ್ರತೀತಿ ಹಲವೆಡೆ ಇದೆ. ಆದ್ರೆ, ಕೊರೊನಾ ಕಾಲದಲ್ಲಿ ಮೂವರಿಗಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ. ಮದುವೆ ಸಮಾರಂಭಗಳಲ್ಲೂ ಅತ್ಯಲ್ಪ ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗಿಯಾಗಬೇಕೆಂಬ ನಿಯಮವಿದೆ. ಆದ್ರೆ, ಈ ಮಹಾಶಯ ಆ ಎಲ್ಲಾ ಕಾನೂನುಗಳನ್ನೂ ಗಾಳಿಗೆ ತೂರಿದ್ದ. ಅಲಿಗಢದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ರಾಜಕಾರಣಿ ಸ್ಪರ್ಧಿಸಿದ್ದ ಎಂದು ತಿಳಿದುಬಂದಿದೆ. ಇದೀಗ ಆತನೂ ಸೇರಿದಂತೆ 20 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮದುವೆಯ ವಿಡಿಯೋ, ಡ್ಯಾನ್ಸ್‌ನ ವಿಡಿಯೋ ವೈರಲ್ ಆದ ಕೂಡಲೇ ಪೊಲೀಸರು ಎಚ್ಚೆತ್ತಿದ್ದಾರೆ.


from India & World News in Kannada | VK Polls https://ift.tt/2XDcgKD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...