ಕೋವಿಡ್ 19 ನಂತರ ಹೊಸ ಜಗತ್ತನ್ನು ಹೊಂದಲಿದ್ದೇವೆ: ರಾಹುಲ್ ಗಾಂಧಿ

ಹೊಸದಿಲ್ಲಿ: ಮಹಾಮಾರಿ ಸಾಂಕ್ರಾಮಿಕ ರೋಗದ ಬಳಿಕ ಹೊಸ ಜಗತ್ತನ್ನು ಹೊಂದಲಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಅಭಿಪ್ರಾಯಪಟ್ಟಿದ್ದಾರೆ. ಅದೇ ಹೊತ್ತಿಗೆ ಬಳಿಕ ಚೀನಾ ಹಾಗೂ ಅಮೆರಿಕ ನಡುವಣ ಅಧಿಕಾರ ಸಮತೋಲನವು ಬದಲಾಗಲಿದೆ ಎಂದು ತಿಳಿಸಿದ್ದಾರೆ. ಹಾರ್ವರ್ಡ್ ಗ್ಲೋಬಲ್ ಆರೋಗ್ಯ ಸಂಸ್ಥೆಯ ನಿರ್ದೇಶಕ ಆಶಿಶ್ ಜಾ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದ ವೇಳೆಯಲ್ಲಿ ಕೊರೊನಾ ವೈರಸ್ ಎರಡು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. ಆರೋಗ್ಯ ರಕ್ಷಣೆ ಹಾಗೂ ಜಾಗತಿಕ ರಚನೆಯ ಮೇಲೆ ಕೊರೊನಾ ವೈರಸ್ ಆಕ್ರಮಣ ಮಾಡುತ್ತಿದೆ ಎಂದು ಹೇಳಿದರು. 'ಕೋವಿಡ್ 19 ಅತ್ಯಂತ ದುರ್ಬಲ ಸ್ಥಳಗಳು ಜಾಗತೀಕರಣದ ಕೇಂದ್ರಗಳಾಗಿದೆ. ಈ ವೈರಸ್‌ನೊಂದಿಗೆ ನಾವು ಹೊಸ ಜಗತ್ತನ್ನು ತೆರೆದುಕೊಳ್ಳುತ್ತಿದ್ದೇವೆ. ಇದು ಯುರೋಪ್ ಖಂಡವನ್ನು ಮರುರೂಪಿಸಲಿದೆ. ಚೀನಾ ಹಾಗೂ ಅಮೆರಿಕ ನಡುವಣ ಸಮತೋಲನವು ಬದಲಾಗಲಿದೆ. 9/11 ದಾಳಿ ಹೇಗೆ ಹೊಸ ಅಧ್ಯಾಯವಾಗಿತ್ತೋ ಅದೇ ರೀತಿ ಇದು ಕೂಡಾ ಹೊಸ ಪುಸ್ತಕವಾಗಲಿದೆ' ಎಂದರು. ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಆಶಿಶ್ ಜಾ, 'ಮುಂದಿನ ವರ್ಷ ಕೊರೊನಾ ವೈರಸ್ ಲಸಿಕೆ ಸಿದ್ಧವಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಔಷಧಿಗಳು ಕೋವಿಡ್ ವಿರುದ್ಧ ಭರವಸೆಯ ಫಲಿತಾಂಶವನ್ನು ನೀಡುತ್ತಿದೆ' ಎಂದರು.


from India & World News in Kannada | VK Polls https://ift.tt/3dihWAc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...