ಬೆಂಗಳೂರಿನಲ್ಲಿ ಮಳೆ ಅವಾಂತರ, ಬಿಬಿಎಂಪಿ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ!

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಭಾರೀ ಗಾಳಿ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಹಲವು ಕಡೆಗಳಲ್ಲಿ ಅನಾಹುತಗಳು ಸಂಭವಿಸಿದೆ. ಮರಗಳು ಧರೆಗೆ ಉರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಮುಂಜಾರು ಪೂರ್ವ ಕಾಮಗಾರಿಗಳು ಬಿಬಿಎಂಪಿಯಿಂದ ನಡೆದಿಲ್ಲ. ಆದರೆ ಬಿಬಿಎಂಪಿಯ ಈ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ನಗರದಲ್ಲಿ ಮಳೆಯ ಅವಾಂತರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಭಾನುವಾರ ಸುರಿದ ಮಳೆಗೆ ನಗರದ ಕೆ.ಆರ್‌ ಮಾರ್ಕೆಟ್‌, ಮಲ್ಲೇಶ್ವರಂ, ವಿಜಯನಗರ, ರಾಜಾಜಿನಗರ, ಬಸವನಗುಡಿ ಪ್ರದೇಶಗಳಲ್ಲಿ ಮರಗಳು ಧರೆಗೆ ಉರುಳಿವೆ. ಕೆ.ಆರ್‌ ಪೇಟೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ಮಳೆ ನೀರು ಸರಿಯಾಗಿ ಹರಿಯಲು ಸಾಧ್ಯವಾಗದ ಪರಿಣಾಮ ರಸ್ತೆಗಳು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಬೆಂಗಳೂರಿನಲ್ಲಿ ಮುಂಬರುವ ಮಳೆ ಹಾನಿಗೆ ಉಂಟಾಗುವ ಸಾವು- ನೋವು, ನಷ್ಟಗಳಿಗೆ ನೇರ ಹೊಣೆ ಎಂದು ಹಲವರು ಎಚ್ಚರಿಕೆ ನೀಡಿದ್ದರು. ಕೊರೊನಾ ಪರಿಹಾರ ಕಾರ್ಯಗಳಲ್ಲಿ ಮಗ್ನರಾಗಿ ಮುಂಬರುವ ಮುಂಗಾರಿನಿಂದ ಬೆಂಗಳೂರಿನ ಹಲವು ಭಾಗಗಳು ಹಾನಿಯಾಗಿ ಸಾವು ನೋವುಗಳು ಸಂಭವಿಸುವ ಮುನ್ನೆಚ್ಚರಿಕೆ ಗೊತ್ತಿದ್ದರೂ ಬಿಬಿಎಂಪಿ ನಿರ್ಲಕ್ಷ್ಯ ಮಾಡಿಕೊಂಡು ಮುಂಜಾಗ್ರತಾ ಕೆಲಸಗಳ ಕಡೆಗೆ ಗಮನ ಹರಿಸದಿರುವುದನ್ನು ನೋಡಿದರೆ ಈ ಬಾರಿಯ ಮಳೆಗಾಲ ಬೆಂಗಳೂರನ್ನು ನರಕ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಆಮ್‌ ಆದ್ಮಿ ಪಕ್ಷ ಎಚ್ಚರಿಕೆ ನೀಡಿತ್ತು. ಜೂನ್ 4 ರಿಂದ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬಿಬಿಎಂಪಿ ಇನ್ನು ಮುಂಗಾರು ಪೂರ್ವ ತಯಾರಿಗಳನ್ನು ಮಾಡಿಕೊಂಡಿಲ್ಲ. ಕೊರೊನಾ ಲಾಕ್‌ಡೌನ್‌ ಪರಿಣಾಮ ಕೆಲವೊಂದು ಅಗತ್ಯ ಕೆಲಸಗಳಿಗೆ ತಡೆಯಾಗಿವೆ ನಿಜ. ಆದರೆ ಇದೀಗ ಬಿಬಿಎಂಪಿ ಕೂಡಲೇ ಕಾರ್ಯಮಗ್ನವಾಗಬೇಕಾಗಿದೆ. ನಗರದಲ್ಲಿ ಮಳೆಯಿಂದ ಹಾನಿಗೆ ಒಳಗಾಗುವ ಸುಮಾರು 211 ತಗ್ಗು ಪ್ರದೇಶಗಳಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಲೇ ಇವೆ, ಮನೆ ಮುಳುಗಡೆ, ಮನೆ ಕುಸಿತ, ರಸ್ತೆ ಕುಸಿತ, ನೀರು ನುಗ್ಗುವುದು ಹೀಗೆ ನೂರಾರು ತೊಂದರೆಗಳು ಇದ್ದರು ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಮುಳುಗಡೆ ಆದ ವೇಳೆಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಬದಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಮೊದಲೇ ಕೊರೊನಾ ಸಂಕಷ್ಟದಲ್ಲಿರುವ ಜನರು ಮಳೆಯಿಂದ ನಡೆಯುವ ಅನಾಹುತಗಳನ್ನು ಎದುರಿಸುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.


from India & World News in Kannada | VK Polls https://ift.tt/3giDD5d

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...