ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ(ಈದ್ ಮಿಲಾದ್) ಪ್ರಯುಕ್ತ ಪ್ರಧಾನಿ ಮೋದಿ ದೇಶಕ್ಕೆ ಶುಭಾಶಯದ ಸಂದೇಶ ರವಾನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈದ್ ಹಬ್ಬದ ಶುಭ ಸಂದರ್ಭದಲ್ಲಿ ನಾನು ದೇಶವಾಸಿಗಳಿಗೆ ಶುಭಾಶಯದ ಸಂದೇಶ ತಿಳಿಸಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಪವಿತ್ರ ಹಬ್ಬ ವಿಶ್ವ ಭ್ರಾತೃತ್ವ, ಸಾಮರಸ್ಯವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸಿರುವ ಪ್ರಧಾನಿ ಮೋದಿ, ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಇನ್ನು ಈದ್ ಹಬ್ಬದ ಪ್ರಯುಕ್ತ ದೇಶಕ್ಕೆ ಶುಭಾಶಯ ಕೋರಿರುವ ಕಾಂಗ್ರೆಸ್ ನಾಯಕ , ಎಲ್ಲರಿಗೂ ಎಂದು ಟ್ವೀಟ್ ಮಾಡಿದ್ದಾರೆ. ದೇಶ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವುದರಿಂದ, ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಿಂದಲೇ ಹಬ್ಬ ಆಚರಿಸುತ್ತಿದ್ದಾರೆ. ಲಾಕ್‌ಡೌನ್ ಜಾರಿಯಲ್ಲಿರುವದರಿಂದ ದೇಶದಾದ್ಯಂತ ಇಂದು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿಲ್ಲ. ಹೀಗಾಗಿ ಮುಸ್ಲಿಂ ಸಹೋದರರು ತಮ್ಮ ಮನೆಯಿಂದಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ಯಾರೂ ಮನೆಯಿಂದ ಹಿಒರ ಬರೆದೇ ಲಾಕ್‌ಡೌನ್‌ನನ್ನು ಕಟ್ಟುನಿಟ್ಟಾಗಿ ಪಾಲಿಸಿ ಹಬ್ಬ ಆಚರಿಸಬೇಕು ಎಂದು ಮುಸ್ಲಿಂ ಧರ್ಮ ಪಂಡಿತರು ಹಾಗೂ ವಿಚಾರವಾದಿಗಳು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/3gis4er