ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರೂ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ಒಂದೇ ದಿನ ಕರಾವಳಿಯ ನಾಲ್ವರು ಮತ್ತು ಹಾಸನದ ಒಬ್ಬ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜತೆಗೆ 150ಕ್ಕೂ ಅಧಿಕ ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೊರೊನಾ ವಾರಿಯರ್ಸ್‌ಗಳಾಗಿ ಬೀದಿ ಬೀದಿಗಳಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್ ಸಿಬ್ಬಂದಿ ಎಷ್ಟೊಂದು ಅಪಾಯವನ್ನು ಎದುರಿಸುತ್ತಿದ್ದಾರೆ ಎನ್ನುವುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ. ಕರಾವಳಿಯ ನಾಲ್ಕೂ ಸೋಂಕುಗಳಿಗೆ ಮುಂಬಯಿಯಿಂದ ವಲಸೆ ಬಂದವರ ಸಂಪರ್ಕವೇ ಕಾರಣವಾಗಿದೆ. ಅವರ ದಾಖಲೆ ಪರಿಶೀಲನೆ, ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುವ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ. 16 ಪೊಲೀಸರಿಗೆ ಸೋಂಕು ಬಾಗಲಕೋಟೆ - 04 ಉಡುಪಿ - 03 ಬೆಂಗಳೂರು ನಗರ - 02 ಬೆಂಗಳೂರು ಗ್ರಾಮಾಂತರ, ಮಂಡ್ಯ, ಕಲಬುರಗಿ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ದಾವಣಗೆರೆ ತಲಾ ಒಂದು ಅಪಾಯದಲ್ಲಿದ್ದಾರೆ ರಕ್ಷಕರು - ಚೆಕ್‌ಪೋಸ್ಟ್‌ಗಳಲ್ಲಿ, ಠಾಣೆಗಳಲ್ಲಿ ದಾಖವೆ ಪರಿಶೀಲನೆ ವೇಳೆ ಸುರಕ್ಷತಾ ಕ್ರಮಗಳಿಲ್ಲ. - ಆಧಾರ್ ಕಾರ್ಡ್‌ಗಳನ್ನು ನೇರವಾಗಿ ಕೈಯಲ್ಲೇ ಸ್ವೀಕರಿಸಲಾಗುತ್ತಿದೆ. - ಕ್ವಾರಂಟೈನ್ ಕೇಂದ್ರಗಳಿಗೆ ಪದೇಪದೆ ಭೇಟಿ ಅನಿವಾರ್ಯತೆಯಿಂದ ಆತಂಕ ಉಂಟಾಗಿದೆ. - ಕಳ್ಳರು, ಸಮಾಜಘಾತುಕರನ್ನು ಹಿಡಿಯುವಾಗಲೇ ಕೆಲವರಿಗೆ ಸೋಂಕು ತಗುಲಿದೆ. - ಕೆಲವು ವಿಷಯಗಳ ಬಗ್ಗೆ ಬೆಂಗಳೂರಿನಲ್ಲಿ ತರಬೇತಿ ನೀಡಿದ್ದರೂ ಎಲ್ಲರಿಗೂ ತಲುಪಿಲ್ಲ ಪೊಲೀಸರ ರಕ್ಷಣೆ ಹೇಗೆ? - ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಸುರಕ್ಷತೆಗಾಗಿ ಪಿಪಿಇ ಕಿಟ್ ಧರಿಸುವುದು ಕಷ್ಟ. ಆದರೆ, ಚೆಕ್ ಪೋಸ್ಟ್, ಠಾಣೆಗಳಲ್ಲಿ ದಾಖಲೆ ಪರಿಶೀಲನೆ ಮಾಡುವವರು ಧರಿಸಬಹುದು. - ಪೊಲೀಸರಾದರೂ ಆಗಾಗ ಸ್ಯಾನಿಟೈಸರ್‌ಗಳನ್ನು ಬಳಸಿದರೆ ಸೋಂಕು ತಡೆಯಬಹುಹು. - ದಾಖಲೆ ಪರಿಶೀಲನೆಗೆ ಡಿಜಿಟಲ್ ವ್ಯವಸ್ಥೆ
from India & World News in Kannada | VK Polls https://ift.tt/3glqusg