ಗಡಿಯಲ್ಲಿ ಚೀನಾದಿಂದ 5 ಸಾವಿರ ಸೈನಿಕರ ನಿಯೋಜನೆ: ಭಾರತದಿಂದಲೂ ಸೈನ್ಯ ಬಲವರ್ಧನೆ!

ಲಡಾಖ್: ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ)ಬಳಿ ಭಾರೀ ಸಂಖ್ಯೆಲ್ಲಿ ಸೈನ್ಯವನ್ನು ಜಮಾವಣೆಗೊಳಿಸುತ್ತಿರುವ , ಇದುವರೆಗೂ ಒಟ್ಟು 5 ಸಾವಿರ ಸೈನಿಕರನ್ನು ನಿಯೋಜಿಸಿದೆ. ಭಾರತೀಯ ಸೇನೆಯ 81 ಮನತ್ತು 114 ಬ್ರಿಗೆಡ್‌ಗಳ ಅಡಿಯಲ್ಲಿರುವ ಕೆಲವು ಪ್ರದೇಶಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಜಮಾವಣೆಗೊಳ್ಳುತ್ತಿದ್ದಾರೆ. ಅಲ್ಲದೇ ಓಲ್ಡಿ ಹಾಗೂ ಪ್ಯಾಂಗ್ಯಾಂಗ್ ತ್ಸೋ ಸರೋವರದ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಸುರಕ್ಷತೆಯ ಕಾರಣಕ್ಕೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಜಮಾವಣೆ ಮಾಡಲು ನಿರ್ಧರಿಸಿದೆ. ಗಡಿಯಲ್ಲಿ ಚೀನಾದ ಉಪಟಳವನ್ನು ಸಹಿಸಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಈಗಾಗಲೇ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಉಪಟಳ ಆರಂಭಿಸಿರುವ ಚೀನಾ, ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆಗೊಳಿಸುವ ಮೂಲಕ ವಿನಾಕಾರಣ ಸಮಸ್ಯೆಯನ್ನು ಮತ್ತಷ್ಟು ಜಠಿಲಗೊಳಿಸುತ್ತಿದೆ. ಆದರೆ ಚೀನಾದ ಕುತಂತ್ರವನ್ನು ಅರಿತಿರುವ ಭಾರತ, ಇದೀಗ ಗಡಿಯಲ್ಲಿ ತಾನೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಜಮಾವಣೆ ಮಾಡಲು ನಿರ್ಧರಿಸಿದೆ.


from India & World News in Kannada | VK Polls https://ift.tt/2B0tha7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...