ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ

ಆ್ಯಂಟಿಗುವಾ: ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಶತಕದ ಜತೆಯಾಟದಲ್ಲಿ ಭಾಗಿಯಾಗಿರುವ ಟೀಮ್ ಇಂಡಿಯಾ ನಾಯಕ ಹಾಗೂ ಉಪ ನಾಯಕ ಸ್ಮರಣೀಯ ದಾಖಲೆಯನ್ನು ಬರೆದಿದ್ದಾರೆ. ವಿರಾಟ್ ಕೊಹ್ಲಿ (51*) ಹಾಗೂ ಅಜಿಂಕ್ಯ ರಹಾನೆ (53*) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಮೂರನೇ ದಿನದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ. ಈ ಮೂಲಕ ಒಟ್ಟು ಮುನ್ನಡೆಯನ್ನು 185 ರನ್‌ಗಳಿಗೆ ಏರಿಸಿದೆ. ಮುರಿಯದ ನಾಲ್ಕನೇ ವಿಕೆಟ್‌ಗೆ ಕೊಹ್ಲಿ ಹಾಗೂ ರಹಾನೆ 104 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ವಿಕೆಟ್‌ಗೆ ಕೊಹ್ಲಿ-ರಹಾನೆ ಜೋಡಿಯಿಂದ ದಾಖಲಾದ ಎಂಟನೇ ಶತಕದ ಜತೆಯಾಟವಾಗಿದೆ. ಈ ಮೂಲಕ ಮಾಜಿ ಬ್ಯಾಟಿಂಗ್ ದಿಗ್ಗಜರಾದ ಹಾಗೂ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್-ಗಂಗೂಲಿ ಜೋಡಿಯು ನಾಲ್ಕನೇ ವಿಕೆಟ್‌ಗೆ ಏಳು ಬಾರಿ ಶತಕದ ಜತೆಯಾಟವನ್ನು ನೀಡಿದ್ದಾರೆ. ಸಚಿನ್-ಗಂಗೂಲಿ ನಾಲ್ಕನೇ ವಿಕೆಟ್‌ಗೆ 44 ಇನ್ನಿಂಗ್ಸ್‌ಗಳಲ್ಲಿ ಏಳು ಶತಕಗಳ ಜತೆಯಾಟವನ್ನು ನೀಡಿದ್ದರು. ಇನ್ನೊಂದೆಡೆ ಕೊಹ್ಲಿ-ರಹಾನೆ 39 ಇನ್ನಿಂಗ್ಸ್‌‌ಗಳಲ್ಲೇ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಏತನ್ಮಧ್ಯೆ ಸಚಿನ್-ಗಂಗೂಲಿ ಜೋಡಿಯು ನಾಲ್ಕನೇ ವಿಕೆಟ್‌ಗೆ ಒಟ್ಟು 2695 ರನ್‌ಗಳ ಜತೆಯಾಟವನ್ನು ನೀಡಿದ್ದಾರೆ. ಸದ್ಯ ಕೊಹ್ಲಿ-ರಹಾನೆ ಒಟ್ಟಾಗಿ 2439 ರನ್ ಪೇರಿಸಿದ್ದು, ಮಗದೊಂದು ದಾಖಲೆ ಮುರಿಯುವ ತವಕದಲ್ಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2U1J9OZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...