ಸಿಎಂ ಬೊಮ್ಮಾಯಿ ದಿಲ್ಲಿ ಭೇಟಿಗೆ ಮುಹೂರ್ತ: ಸಚಿವಾಕಾಂಕ್ಷಿಗಳಲ್ಲಿ ಗರಿಗೆದರಿದ ನಿರೀಕ್ಷೆ!

ಬೆಂಗಳೂರು: ಮುಖ್ಯಮಂತ್ರಿ ಅವರು ದಿಲ್ಲಿ ಪ್ರವಾಸ ಕೈಗೊಳ್ಳಲು ಮುಹೂರ್ತ ನಿಗದಿಯಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಮುಖ್ಯಮಂತ್ರಿಯವರು ಬರುವ ಸೋಮವಾರ(ಫೆ. 7) ದಿಲ್ಲಿಗೆ ತೆರಳುವುದಾಗಿ ಹೇಳಿದ್ದಾರೆ. ರಾಜ್ಯದ ಸಂಸದರೊಂದಿಗೆ ಮತ್ತು ಕುರಿತ ಕಾನೂನು ತಜ್ಞರೊಂದಿಗೆ ಸಭೆ ನಡೆಸುವುದು ಈ ಭೇಟಿಯ ಉದ್ದೇಶ ಎಂದು ಮಾಧ್ಯಮಕ್ಕೆ ಸಿಎಂ ತಿಳಿಸಿದ್ದಾರೆ. ಈ ನಡುವೆಯೂ ಅಥವಾ ಪುನರ್‌ರಚನೆ ವಿಚಾರ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಸಂಪುಟಕ್ಕೆ ಮೇಜರ್‌ ಸರ್ಜರಿ ಕೈಗೊಳ್ಳಲಾಗುತ್ತದೆ ಎಂಬ ಚರ್ಚೆ ಬಹಳ ದಿನದಿಂದ ನಡೆಯುತ್ತಿದೆ. ಸಂಪುಟ ಪುನರ್‌ರಚನೆಗೆ ಹೈಕಮಾಂಡ್‌ ಸಿದ್ಧವಿದೆಯೊ ಇಲ್ಲವೊ ಎಂಬುದು ಖಾತರಿಯಿಲ್ಲ. ಸಂಪುಟ ವಿಸ್ತರಣೆಗೆ ಸೀಮಿತವಾದರೆ ಖಾಲಿಯಿರುವ 4 ಸ್ಥಾನ ಭರ್ತಿ ಮಾಡಲಾಗುತ್ತದೆ. ಅದೇನೇ ಇದ್ದರೂ ಈ ವಿಚಾರದಲ್ಲಿ ಇನ್ನೂ ಸ್ಪಷ್ಟತೆಯಿಲ್ಲ. ಆದರೆ, ಮಂತ್ರಿಮಂಡಲ ಸೇರಲು ಎರಡು ಡಜನ್‌ಗೂ ಹೆಚ್ಚು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಇವರಲ್ಲಿ ಬಹುತೇಕರು ಹಿರಿಯ ಶಾಸಕರು. ಜಾತಿ, ಪ್ರಾದೇಶಿಕತೆ ಆಧಾರದಲ್ಲಿ ಕಿರಿಯ ಶಾಸಕರೂ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಯಾವುದು ಉತ್ತಮ? ಸಂಪುಟ ವಿಸ್ತರಣೆ ಮಾಡಿದರೆ ಹೆಚ್ಚಿನ ಅಸಮಾಧಾನ ಇರುವುದಿಲ್ಲ. ಸಂಪುಟ ಪುನರ್‌ ರಚಿಸಲು ಹೊರಟರೆ ಹಾಲಿ ಸಚಿವರಲ್ಲಿ ಯಾರನ್ನು ಕೈಬಿಡುವುದು ಎಂಬುದೇ ಸಂಕೀರ್ಣ ಸಂಗತಿ. ಬಿಜೆಪಿ ಸರಕಾರ ಇದ್ದಾಗಲೆಲ್ಲ ಮಂತ್ರಿಗಳಾದ ಹಿರಿಯರನ್ನು ಪಕ್ಷದ ಸಂಘಟನೆಗೆ ನಿಯೋಜಿಸಬೇಕು ಎಂಬ ಒತ್ತಡವಿದೆ. ಆದರೆ, ಇಂತಹ ಸಚಿವರು ಪ್ರಬಲ ಸಮುದಾಯದವರು. ಪಕ್ಷದ ವೋಟ್‌ ಬ್ಯಾಂಕ್‌ಗೆ ಬೇಕಾದವರು. ಹಾಗಾಗಿ ಇವರನ್ನು ಮಂತ್ರಿಮಂಡಲದಿಂದ ಕೈಬಿಡುವುದು ಕಷ್ಟಕರ. 4 ಸ್ಥಾನ ಭರ್ತಿ ಮಾಡಿ ಕೈತೊಳೆದುಕೊಳ್ಳೋಣ ಎಂದರೂ ಇದು ಸುಲಭವಲ್ಲ. ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ಹೈಕಮಾಂಡ್‌ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬ ಕುತೂಹಲವಿದೆ. ಬೊಮ್ಮಾಯಿ ದಿಲ್ಲಿ ಭೇಟಿಸಿಎಂ ಬಸವರಾಜ ಬೊಮ್ಮಾಯಿ ಬರುವ ಸೋಮವಾರ(ಫೆ.7) ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿ ಕೇಂದ್ರದ ನಾನಾ ಸಚಿವರನ್ನು ಭೇಟಿ ಮಾಡಲಿದ್ದಾರೆ. ಜತೆಗೆ ರಾಜ್ಯದ ಸಂಸದರೊಂದಿಗೂ ಸಭೆ ನಡೆಸಲಿದ್ದಾರೆ. ಸುದ್ದಿಗಾರರೊಂದಿಗೆ ಬಿಜೆಪಿ ಕಚೇರಿ ಆವರಣದಲ್ಲಿ ಮಾತನಾಡಿದ ಅವರು, ‘‘ರಾಜ್ಯದ ಸಂಸದರು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಬೇಕಾಗಿದೆ. ಅದಕ್ಕಾಗಿ ಸೋಮವಾರ ದಿಲ್ಲಿಗೆ ಹೋಗುತ್ತೇನೆ,’’ ಎಂದಿದ್ದಾರೆ. ಇದಕ್ಕೂ ಮೊದಲು ತಮ್ಮ ನಿವಾಸದ ಬಳಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಗುರುವಾರವೇ ದಿಲ್ಲಿಗೆ ತೆರಳುವುದಾಗಿ ಹೇಳಿದ್ದರು. ಬಳಿಕ ಈ ಪ್ರವಾಸವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಹಾಗೂ ವಿಸ್ತರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಏಳನೇ ತಾರೀಖಿನಿಂದ ಬಜೆಟ್‌ ಪಕ್ರಿಯೆಗೆ ಚಾಲನೆ ನೀಡಲಿದ್ದೇನೆ. ಬೇರೆ ಬೇರೆ ಇಲಾಖೆಯ ಜೊತೆ ಸಭೆ ನಡೆಸಲಿದ್ದೇನೆ. ಅವರ ಅಭಿಪ್ರಾಯ ಪಡೆದುಕೊಂಡು ಬಜೆಟ್‌ ಬಗ್ಗೆ ತೀರ್ಮಾನ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/M1hj3Ynxq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...