ಕಾಂಗ್ರೆಸ್ ಅಹೋರಾತ್ರಿ ಧರಣಿಯಿಂದ ಅಧಿವೇಶನ ಮೊಟಕು..? ಫೆಬ್ರುವರಿ 25ರವರೆಗೆ ನಡೆಯೋದೇ ಡೌಟ್..!

: ಸಚಿವ ಕೆ. ಎಸ್‌. ರಾಜೀನಾಮೆಗೆ ಬಿಗಿಪಟ್ಟು ಹಾಕಿರುವ ಪ್ರತಿಪಕ್ಷ , ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಇದರೊಂದಿಗೆ ಜಂಟಿ ಅಧಿವೇಶನವು ಬರಖಾಸ್ತುಗೊಳ್ಳುವ ಹಾದಿಯತ್ತ ಸಾಗಿದೆ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಸಂಬಂಧ ಸಚಿವ ಈಶ್ವರಪ್ಪ ನೀಡಿದ ಹೇಳಿಕೆ ವಿರೋಧಿಸಿ, ಕಾಂಗ್ರೆಸ್‌ ಸದಸ್ಯರು ಉಭಯ ಸದನಗಳಲ್ಲಿ ಬುಧವಾರವೇ ಧರಣಿ ಪ್ರಾರಂಭಿಸಿದ್ದರು. ಇದು ಗುರುವಾರವೂ ಮುಂದುವರಿಯಿತು. ಬಹುತೇಕ ಗದ್ದಲದಲ್ಲೇ ದಿನದ ಅಂತ್ಯಗೊಂಡಿತು. ಈ ಗಲಾಟೆ ಮಧ್ಯೆಯೇ ಪ್ರಶ್ನೋತ್ತರ ಕಲಾಪ ನಡೆಸಲಾಯಿತು. ವಿಧೇಯಕಗಳನ್ನು ಮಂಡಿಸಲಾಯಿತು. ಆಡಳಿತ ಪಕ್ಷ ಸಂಪೂರ್ಣವಾಗಿ ಈಶ್ವರಪ್ಪ ಬೆನ್ನಿಗೆ ನಿಂತಿದೆ. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿದರೆ ಮಾತ್ರ ಕಲಾಪದಲ್ಲಿ ಭಾಗಿಯಾಗುವುದಾಗಿ ಕಾಂಗ್ರೆಸ್‌ ಷರತ್ತು ವಿಧಿಸಿತ್ತು. ಸರಕಾರ ನಿರಾಕರಿಸಿದಾಗ ಅಹೋರಾತ್ರಿ ಧರಣಿಯ ತೀರ್ಮಾನವನ್ನು ಕಾಂಗ್ರೆಸ್‌ ಕೈಗೊಂಡಿದೆ. ಸಂಧಾನ ವಿಫಲ ಗುರುವಾರ ಬೆಳಗ್ಗೆ ಕಲಾಪ ಆರಂಭಕ್ಕೆ ಮುನ್ನ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡು ಬಾರಿ ಸಂಧಾನ ನಡೆಸಿದರೂ ಫಲ ಕೊಡಲಿಲ್ಲ. ಪರಿಷತ್‌ನಲ್ಲೂ ಸಭಾಪತಿ ಬಸವರಾಜ ಹೊರಟ್ಟಿ ಸಂಧಾನ ಯತ್ನಕ್ಕೆ ಯಶ ಸಿಗಲಿಲ್ಲ. ಕಲಾಪ ಪ್ರಾರಂಭಗೊಂಡಾಗಲೂ ಧರಣಿ ಕೈ ಬಿಡುವಂತೆ ಸ್ಪೀಕರ್‌ ಮನವಿ ಮಾಡಿಕೊಂಡರು. ಕಾಂಗ್ರೆಸ್‌ ಸದಸ್ಯರು ಧರಣಿಯ ಸ್ಥಳದಿಂದ ಕದಲಲಿಲ್ಲ. ಪ್ರಶ್ನೋತ್ತರ ಕಲಾಪದ ಬಳಿಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸ್ಪೀಕರ್‌ ಆಹ್ವಾನಿಸಿದರು. ಅವರು ಮಾತನಾಡಲು ಬರಲಿಲ್ಲ. ಹಾಗಾಗಿ ಭೋಜನ ವಿರಾಮ ಘೋಷಿಸಿದರು. ಭೋಜನದ ಬಳಿಕ ಪ್ರಾರಂಭವಾದ ಕಲಾಪ ಗದ್ದಲ, ಕೋಲಾಹಲದ ನಡುವೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯ ಕಂಡಿತು. ಪರಿಷತ್‌ನಲ್ಲಿ ಮಾತ್ರ ಭೋಜನದ ಬಳಿಕವೂ ಕೇಸರಿ ಧ್ವಜ ವಿಚಾರವಾಗಿಯೇ ಭಾರಿ ಮಾತಿನ ಚಕಮಕಿಯ ಚರ್ಚೆಯಾಯಿತು. ಅಹೋರಾತ್ರಿ ಧರಣಿ ಸಂಬಂಧ ಸದನದಲ್ಲೇ ಸಿದ್ದರಾಮಯ್ಯ ಘೋಷಿಸಿದರು. ಪ್ರತಿಷ್ಠೆಯ ಮೇಲಾಟ ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ನಡುವೆ ಉಂಟಾದ ಸಂಘರ್ಷ ತಕ್ಷಣಕ್ಕೆ ತಣ್ಣಗಾಗುವ ಲಕ್ಷಣವಿಲ್ಲ. ಎರಡೂ ಪಕ್ಷಗಳು ಈ ವಿಷಯದಲ್ಲಿ ಪ್ರತಿಷ್ಠೆಗೆ ಬಿದ್ದಿವೆ. ಇದರಲ್ಲಿ ರಾಜಕೀಯ ಲೆಕ್ಕಾಚಾರವೂ ಇದ್ದಂತಿದೆ. ಹಾಗಾಗಿ ಮತ್ತು ಕಾಂಗ್ರೆಸ್‌ನವರು ಒಂದು ಹೆಜ್ಜೆ ಮುಂದೆ ಬಂದು ಸಂಧಾನ ಮಾಡಿಕೊಳ್ಳಲು ಸಿದ್ಧರಿಲ್ಲ. ಇದರಿಂದಾಗಿ ನಿಗದಿಯಂತೆ ಈ ತಿಂಗಳ 25ರವರೆಗೆ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗುವಂತಾಗಿದೆ. ಈಶ್ವರಪ್ಪಗೆ ಸ್ವಪಕ್ಷೀಯರ ಸಾಥ್‌ ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪರನ್ನು ಸಮರ್ಥಿಸಿಕೊಂಡು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ರಾಷ್ಟ್ರ ಧ್ವಜದ ಕೆಳಗೆ ಭಗವಾಧ್ವಜ ಹಾರಿಸಿದರೆ ತಪ್ಪಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿಕೆ ನೀಡಿರುವುದೂ ಗಮನ ಸೆಳೆದಿದೆ. ಕಾಂಗ್ರೆಸ್‌ ನಡೆಯೇನು? ಬಳ್ಳಾರಿ ಪಾದಯಾತ್ರೆಗೆ ಮೊದಲೂ ಸದನದಲ್ಲಿ ಕಾಂಗ್ರೆಸ್‌ ಅಹೋರಾತ್ರಿ ಧರಣಿ ನಡೆಸಿತ್ತು. ಅದೇ ರೀತಿ ಈಗಲೂ ಧರಣಿ ಮುಂದುವರಿಸಿ ಜನರ ಬಳಿಗೆ ಹೋಗಬೇಕು ಎನ್ನುವುದು ಕಾಂಗ್ರೆಸ್‌ ಯೋಚನೆ. ಬಿಜೆಪಿ ನಡೆಯೇನು? ಜನಪರ ವಿಚಾರಗಳ ಚರ್ಚೆಗೆ ಕಾಂಗ್ರೆಸ್‌ ಅಡ್ಡಿ ಮಾಡಿದೆ, ರಾಜಕೀಯವಾಗಿ ರಾಷ್ಟ್ರಧ್ವಜದ ದುರ್ಬಳಕೆ ಮಾಡುತ್ತಿದೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುವುದು ಬಿಜೆಪಿ ಪ್ಲ್ಯಾನ್‌ ಆಗಿದೆ.


from India & World News in Kannada | VK Polls https://ift.tt/mAt6gry

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...