: ಸಚಿವ ಕೆ. ಎಸ್. ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ವಿಧಾನ ಮಂಡಲದ ಉಭಯ ಸದನಗಳ ವ್ಯರ್ಥವಾಗುತ್ತಿದೆ. ಜತೆಗೆ ಜನರ ತೆರಿಗೆ ಹಣವೂ ಪೋಲಾಗುತ್ತಿದೆ. ಜನರಿಗೆ ಸಂಬಂಧಪಟ್ಟ ಹಲವಾರು ವಿಷಯಗಳು ಇರುವಾಗ, ಒಬ್ಬ ಸಚಿವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಈ ಪ್ರಮಾಣದಲ್ಲಿ ಧರಣಿ ಮಾಡುವ ಮೂಲಕ ಇಡೀ ಅಧಿವೇಶನವನ್ನೇ ಬರ್ಖಾಸ್ತ್ನತ್ತ ತಳ್ಳುತ್ತಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಅಧಿವೇಶನದಲ್ಲಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಚರ್ಚೆಯಾಗಬೇಕು. ಶಾಸನ ರಚನೆಗೆ ಆದ್ಯತೆ ಕೊಡಬೇಕು. ಆದರೆ, ಈ ಬಾರಿಯ ಅಧಿವೇಶನದಲ್ಲಿ ಇದರ ಲಕ್ಷಣ ಕಂಡು ಬರುತ್ತಿಲ್ಲ. ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸುವ ಬಗ್ಗೆ ಸಚಿವ ಈಶ್ವರಪ್ಪ ನೀಡಿದ್ದಾರೆನ್ನಲಾದ ಹೇಳಿಕೆ ವಿಚಾರವಾಗಿ ಈಗ ಗದ್ದಲ ಉಂಟಾಗಿದೆ. ಸದನದಲ್ಲಿ ಪ್ರತಿಭಟಿಸುವ ಹಕ್ಕು ಸದನದ ಯಾವುದೇ ಸದಸ್ಯರಿಗಿದೆ. ಆದರೆ, ಎಂತಹ ವಿಷಯವನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಗುತ್ತಿದೆ ಎಂಬುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಯಾವುದೇ ಪಕ್ಷಕ್ಕೆ ಈ ಪರಿಜ್ಞಾನ ಇರಬೇಕು. ಈ ನಿಟ್ಟಿನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಗಂಭೀರವಾಗಿ ಯೋಚಿಸಿದಂತೆ ಕಾಣುತ್ತಿಲ್ಲ. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಬುಧವಾರದಿಂದಲೇ ಉಭಯ ಸದನಗಳಲ್ಲಿ ಧರಣಿ ನಡೆಸುತ್ತಿದೆ. ಇದು ಜಂಟಿ . ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಯಾಗಬೇಕು. ಪ್ರಮುಖ ವಿಧೇಯಕಗಳೂ ಇವೆ. ಇನ್ನು ಜ್ವಲಂತ ಸಮಸ್ಯೆಯ ಬಗ್ಗೆಯೂ ಚರ್ಚೆಯಾಗಬೇಕಿದೆ. ಇದರ ಬಗ್ಗೆ ಗಮನ ಹರಿಸಬೇಕಾಗಿತ್ತು. ಅದನ್ನು ಬಿಟ್ಟು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಇಷ್ಟೆಲ್ಲ ಗದ್ದಲ, ಧರಣಿ ಮಾಡುವ ಅಗತ್ಯವೇನಿದೆ ಎಂಬ ಆಕ್ಷೇಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ನಿತ್ಯ 80 ಲಕ್ಷಕ್ಕೂ ಅಧಿಕ ಖರ್ಚು ಪ್ರತಿ ದಿನ ವಿಧಾನ ಮಂಡಲ ಅಧಿವೇಶನ ನಡೆಸಲು 80 ಲಕ್ಷ ರೂ. ಗೂ ಅಧಿಕ ಹಣ ಖರ್ಚಾಗುತ್ತದೆ. ಇದು ಜನರು ಕಟ್ಟಿದ ತೆರಿಗೆಯ ದುಡ್ಡು. ಜನರ ಪರ ವಿಷಯ ಸದನದಲ್ಲಿ ಪ್ರತಿಧ್ವನಿಸಬೇಕು. ರಾಜ್ಯದ ಪ್ರಗತಿಯ ಬಗ್ಗೆ ಮಾತುಕತೆ ನಡೆಯಬೇಕು ಎಂದು ಜನರು ಬಯಸುತ್ತಾರೆ. ಈ ಸಂಬಂಧದಲ್ಲಿ ಸರಕಾರ ಮತ್ತು ಪ್ರತಿಪಕ್ಷಗಳಿಗೆ ಸಮಾನ ಜವಾಬ್ದಾರಿ ಇರುತ್ತದೆ. ಯಾವುದೇ ಪಕ್ಷ ಎಡವಿದರೆ ಇದರಿಂದ ಅನ್ಯಾಯವಾಗುವುದು ರಾಜ್ಯ ಮತ್ತು ರಾಜ್ಯದ ಜನತೆಗೆ ಎನ್ನುವುದನ್ನು ಶಾಸನಸಭೆಯ ಸದಸ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಜ್ಯ ವಿಧಾನಮಂಡಲದ ಸಿಬ್ಬಂದಿ ಮತ್ತು ಶಾಸಕರ ಭತ್ಯೆಯೇ ದಿನಕ್ಕೆ ಸುಮಾರು 18 ಲಕ್ಷ ರೂ. ಆಗುತ್ತದೆ. ಇದರ ಹೊರತಾಗಿ ವಿದ್ಯುತ್, ನೀರಿನ ವೆಚ್ಚ ಪ್ರತ್ಯೇಕ. ಹಾಗೆಯೇ ಹವಾ ನಿಯಂತ್ರಣ ವ್ಯವಸ್ಥೆ ಇನ್ನಿತರ ಸೌಕರ್ಯಗಳಿಗಾಗಿ ಖರ್ಚು ಮಾಡಲಾಗುತ್ತದೆ. ಸ್ವಚ್ಛತಾ ಕಾರ್ಯ, ಸ್ಯಾನಿಟೈಸೇಷನ್, ಸದಸ್ಯರಿಗೆ ಸ್ಯಾನಿಟೈಸರ್, ಮಾಸ್ಕ್ ಇನ್ನಿತರ ಕೋವಿಡ್ ಸುರಕ್ಷತಾ ಸಾಧನ ನೀಡಲು ವೆಚ್ಚ ಮಾಡಲಾಗುತ್ತದೆ. ಕೇಳುವ ವ್ಯವಧಾನವಿಲ್ಲ ಉಭಯ ಸದನಗಳ ಅಧ್ಯಕ್ಷರು ಕಲಾಪ ಸುಗಮಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಪರಿಪರಿಯಾಗಿ ವಿನಂತಿಸಿಕೊಂಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸತತ ಸಂಧಾನ ಸಭೆ ನಡೆಸಿದ್ದಾರೆ. ಆದರೆ, ಈ ಯಾವುದಕ್ಕೂ ಪ್ರತಿಪಕ್ಷ ಬಗ್ಗಿಲ್ಲ. ಸರಕಾರವೂ ಕಲಾಪ ಮುಂದುವರಿಸಲು ಕೋರಿ ಮನವಿ ಮಾಡಿಕೊಂಡಿದೆ. ಪ್ರತಿಪಕ್ಷದ ನಾಯಕರ ಮನವೊಲಿಸಲು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಒಂದು ಹೆಜ್ಜೆ ಮುಂದೆ ಬಂದು ಮಾತುಕತೆ ನಡೆಸಿದ್ದಾರೆ. ಇನ್ನು ತಮಗೆ ಮಾತನಾಡಲು ಸದನದಲ್ಲಿ ಅವಕಾಶ ದೊರಕದೆ ಇರುವುದಕ್ಕೆ ಜೆಡಿಎಸ್ ಸದಸ್ಯರು ಬೇಸರ ಮಾಡಿಕೊಂಡಿದ್ದಾರೆ. ಆಡಳಿತ ಪಕ್ಷದವರಿಗೂ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಧರಣಿಯಿಂದ ಸದನದ ಅಮೂಲ್ಯ ಸಮಯ ವ್ಯರ್ಥವಾಗುತ್ತಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಸಭಾಪತಿ ನೋವಿನ ನುಡಿ ರಾಜ್ಯ ವಿಧಾನಮಂಡಲದ ಅತ್ಯಂತ ಹಿರಿಯರಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಒಬ್ಬರು. ಹಾಗೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಸುಗಮ ಕಲಾಪಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಈ ಇಬ್ಬರೂ ತಮ್ಮ ಅನುಭವದ ಆಧಾರದಲ್ಲಿ ವಿಧಾನಮಂಡಲ ಕಲಾಪವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಶ್ರಮ ಹಾಕುತ್ತಿದ್ದಾರೆ. ಈ ನಡುವೆಯೂ ಕಲಾಪ ವ್ಯರ್ಥವಾಗುತ್ತಿರುವುದಕ್ಕೆ ಸಭಾಧ್ಯಕ್ಷರುಗಳು ಬೇಸರ ತೋಡಿಕೊಂಡಿದ್ದಾರೆ. ಹೊರಟ್ಟಿಯವರು ಶುಕ್ರವಾರ ಕಲಾಪವನ್ನು ಮುಂದೂಡುವಾಗ ನೋವು ತೋಡಿಕೊಂಡಿದ್ದು ಇದರ ದ್ಯೋತಕದಂತಿತ್ತು. ಸಿಬ್ಬಂದಿಯ ದಿನದ ಭತ್ಯೆ ವಿಧಾನಸಭೆ 950 ಮಂದಿ 7.12 ಲಕ್ಷ ರೂ. ಪರಿಷತ್ 350 ಮಂದಿ 2.62 ಲಕ್ಷ ರೂ. ಮಾರ್ಷಲ್ಸ್ 220 ಮಂದಿ 1.65 ಲಕ್ಷ ರೂ. ಒಟ್ಟು ಶಾಸಕರು 301 6.02 ಲಕ್ಷ ರೂ. ಒಟ್ಟು ಭತ್ಯೆಯ ಮೊತ್ತ 17,41000 ರೂ.
from India & World News in Kannada | VK Polls https://ift.tt/sutacvW