ಅಹ್ಮದಾಬಾದ್: ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಮಾತನಾಡಿದ ಕಪ್ತಾನ , ಭಾರತ ತಂಡ ಈ ಸರಣಿಯಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಶುಕ್ರವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಟೀಮ್ ಇಂಡಿಯಾ 96 ರನ್‌ಗಳ ಜಯ ದಾಖಲಿಸಿತು. ರೋಹಿತ್ ಶರ್ಮಾ ಭಾರತ ಒಡಿಐ ತಂಡದ ಪೂರ್ಣ ಪ್ರಮಾಣದ ಕ್ಯಾಪ್ಟನ್ ಆದ ಬಳಿಕ ಗೆದ್ದ ಮೊದಲ ಸರಣಿ ಇದಾಗಿದೆ. ಇದಕ್ಕೂ ಮುನ್ನ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲೀ ಕ್ಲೀನ್ ಸ್ವೀಪ್ ಜಯ ತಂದಿದ್ದರು. "ಈ ಸರಣಿಯಲ್ಲಿ ಎಲ್ಲವೂ ಸರಿಯಾಗಿ ಯೋಜನೆಯಂತೆ ನಡೆದಿದೆ. ನಾವು ಈ ಸರಣಿಯಲ್ಲಿ ಅಂದುಕೊಂಡಿದ್ದನ್ನೆಲ್ಲಾ ಸಾಧಿಸಿದ್ದೇವೆ. ಅದಕ್ಕೆ ತಕ್ಕ ಫಲಿತಾಂಶ ಕೂಡ ಸಿಕ್ಕಿದೆ. ಭಾರತದ ಅತ್ಯಂತ ಜನ ಪ್ರಿಯ ಕ್ರೀಡೆಯನ್ನು ನಾವು ಆಡುತ್ತಿದ್ದೇವೆ. ಹೀಗಾಗಿ ಈ ಬಗ್ಗೆ ಹೆಚ್ಚು ಚರ್ಚೆಯಾಗುವುದು ಸಹಜ. ಆದರೆ, ಆಟಗಾರರಾಗಿ ನಾವು ತಂಡದ ಕಡೆಗೆ ಮಾತ್ರವೇ ಗಮನ ಕೊಡುವುದು ಬಹಳಾ ಮುಖ್ಯವಾಗುತ್ತದೆ. ಹೊರಗಿನ ಮಾತುಗಳು ತಂಡದ ಮೇಲೆ ಪರಿಣಾಮ ಬೀಳುವುದಿಲ್ಲ. ನಾವು ಅಂದುಕೊಂಡಿರುವುದನ್ನು ಸಾಧಿಸುತ್ತಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ," ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಇದೇ ವೇಳೆ ಸರಣಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದು ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಟ ಸಾಧನೆಯನ್ನು ರೋಹಿತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಪಿಚ್‌ನಲ್ಲಿ ಲಭ್ಯವಿದ್ದ ಹೆಚ್ಚುವರಿ ಬೌನ್ಸ್‌ನ ನಮ್ಮ ಬೌಲರ್‌ಗಳು ಬಳಕೆ ಮಾಡಿಕೊಳ್ಳಬೇಕು ಎಂದು ಬಯಸಿದ್ದೆವು. ಪ್ರಸಿಧ್ ಇದರ ಲಾಭ ಪಡೆದು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾದರು. ನಮ್ಮ ತಂಡದ ವೇಗಿಯಿಂದ ಇಂಥದ್ದೊಂದು ಪ್ರದರ್ಶನ ಬಹಳಾ ಸಂತಸ ನೀಡಿದೆ. ಸಿರಾಜ್ ಪ್ರದರ್ಶನ ಕೂಡ ಉತ್ತಮವಾಗಿತ್ತು. ಶಾರ್ದುಲ್ ಮತ್ತು ದೀಪಕ್ ಕೂಡ ಅವಕಾಶ ಬಳಸಿಕೊಂಡಿದ್ದಾರೆ," ಎಂದಿದ್ದಾರೆ. ಇತ್ತಂಡಗಳು ಈಗ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಪೈಪೋಟಿ ನಡೆಸಲಿವೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟೀ20 ಸರಣಿಯ ಎಲ್ಲ ಪಂದ್ಯಗಳು ಆಯೋಜನೆ ಆಗಲಿವೆ. 3ನೇ ಒಡಿಐ ಸಂಕ್ಷಿಪ್ತ ಸ್ಕೋರ್ ಭಾರತ: 50 ಓವರ್‌ಗಳಲ್ಲಿ 265/10 (ಶ್ರೇಯಸ್ ಅಯ್ಯರ್ 80, ರಿಷಭ್ ಪಂತ್ 56, ದೀಪಕ್ ಚಹರ್ 38, ವಾಷಿಂಗ್ಟನ್ ಸುಂದರ್ 33; ಜೇಸನ್ ಹೋಲ್ಡರ್ 34 ಕ್ಕೆ 4, ಅಲ್ಝಾರಿ ಜೋಸೆಫ್ 54 ಕ್ಕೆ 2, ಓಡಿಯನ್ ಸ್ಮಿತ್ 36 ಕ್ಕೆ 1, ಹೇಡನ್ ವಾಲ್ಷ್ 59 ಕ್ಕೆ 2). ವೆಸ್ಟ್ ಇಂಡೀಸ್: 37.1 ಓವರ್‌ಗಳಿಗೆ 169/10 (ಓಡಿಯನ್ ಸ್ಮಿತ್ 36, ನಿಕೋಲಸ್ ಪೂರನ್ 34, ಅಲ್ಝಾರಿ ಜೋಸೆಫ್ 29; ಮೊಹಮ್ಮದ್ ಸಿರಾಜ್ 29 ಕ್ಕೆ 3, 27 ಕ್ಕೆ 3, ದೀಪಕ್ ಚಹರ್ 41 ಕ್ಕೆ 2, ಕುಲ್ದೀಪ್ ಯಾದವ್ 51 ಕ್ಕೆ 2) ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್ ಸರಣಿ ಶ್ರೇಷ್ಠ: ಪ್ರಸಿಧ್ ಕೃಷ್ಣ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CWJlVL9