ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ () 'ಇಒಎಸ್ - 04' ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ' - ಸಿ52' ಉಡ್ಡಯನ ವಾಹನವು ಒಟ್ಟು ಮೂರು ಉಪಗ್ರಹಗಳನ್ನು ಹೊತ್ತು ಸೋಮವಾರ ಬೆಳಗ್ಗೆ 5.59ಕ್ಕೆ ನಭಕ್ಕೆ ಜಿಗಿಯಲಿದೆ. ಈ ಸಂಬಂಧ ಅಗತ್ಯ ಸಿದ್ಧತೆಗಳು ಭಾನುವಾರ ಬೆಳಗ್ಗೆ 4.29ರಿಂದಲೇ ಆರಂಭವಾಗಿವೆ. 'ಇಒಎಸ್ - 04' ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, ಕೃಷಿ ಚಟುವಟಿಕೆಗಳಿಗೆ ನೆರವು ನೀಡಲಿದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಕೊಲೊರಾಡೊ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಿರ್ಮಿಸಿರುವ 'ಇನ್ಸ್ಪಾಯರ್ ಸ್ಯಾಟ್ - 1' ಹಾಗೂ ಇಸ್ರೋದ ಲಘು 'ಐಎನ್ಸ್ - 2ಟಿಡಿ' ಸೋಮವಾರ ಉಡಾವಣೆಯಾಗಲಿರುವ ಇತರ ಎರಡು ಉಪಗ್ರಹಗಳಾಗಿವೆ. ಕೋವಿಡ್ ಮತ್ತು ಲಾಕ್ಡೌನ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಇಸ್ರೋ ಯಾವುದೇ ಉಡಾವಣಾ ಚಟುವಟಿಕೆ ನಡೆಸಿರಲಿಲ್ಲ. ಕೋವಿಡ್ ಮೂರನೇ ಅಲೆ ತಗ್ಗಿದ್ದು ದೇಶದಲ್ಲಿ ಸಹಜ ಸ್ಥಿತಿ ನೆಲೆಸಿರುವುದರಿಂದ ಈ ವರ್ಷ ಉಪಗ್ರಹಗಳ ಉಡಾವಣೆಯನ್ನು ಪ್ರಾರಂಭಿಸಲಾಗುತ್ತಿದೆ. ಭೂ ಸರ್ವೇಕ್ಷಣಾ ಉಪಗ್ರಹದ ವಿಶೇಷತೆ ಏನು..? ಭೂ ಸರ್ವೇಕ್ಷಣಾ ಉಪಗ್ರಹ - 04 ರಾಡಾರ್ ಇಮೇಜಿಂಗ್ ಉಪಗ್ರಹ ಆಗಿದ್ದು, ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲ ವಿಜ್ಞಾನ ಹಾಗೂ ಪ್ರವಾಹ ಮ್ಯಾಪಿಂಗ್ನಂತಹ ಹಲವು ಸೇವೆಗಳಿಗೆ ಎಲ್ಲಾ ರೀತಿಯ ಹವಾಮಾನ ವೈಪರಿತ್ಯ ಸನ್ನಿವೇಶಗಳಲ್ಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಪಡೆಯಲು ಈ ಉಪಗ್ರಹವನ್ನು ಸಜ್ಜಗೊಳಿಸಲಾಗಿದೆ. ನೇರ ಪ್ರಸಾರ ನೀವೂ ವೀಕ್ಷಿಸಿ..! ಇಸ್ರೋದ ಅಧಿಕೃತ ಟ್ವಿಟರ್ ಖಾತೆ, ಯೂಟ್ಯೂಬ್ ಚಾನಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಿಎಸ್ಎಲ್ವಿ -C52 ಉಪಗ್ರಹದ ಉಡಾವಣೆಯ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಪ್ರೇಮಿಗಳ ದಿನವೇ ಇಸ್ರೋ ಸಾಹಸ ಕೈಗೊಂಡಿರೋದು ಭಾರೀ ಗಮನ ಸೆಳೆದಿದೆ.
from India & World News in Kannada | VK Polls https://ift.tt/MtICQEu