ಮೈಸೂರು - ಬೆಂಗಳೂರು - ಚೆನ್ನೈ ನಡುವೆ ಹೈಸ್ಪೀಡ್‌ ಟ್ರೈನ್‌..! ಡಿಪಿಆರ್‌ಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ

: ಬಹು ನಿರೀಕ್ಷಿತ - - ಚೆನ್ನೈ ಹೈಸ್ಪೀಡ್‌ ಯೋಜನೆ ಸರ್ವೆ ಹಾಗೂ ಡಿಪಿಆರ್‌ಗೆ ಹಸಿರು ನಿಶಾನೆ ತೋರಿದೆ. ದೆಹಲಿ - ವಾರಾಣಸಿ, ಮುಂಬಯಿ - ನಾಗ್ಪುರ, ದೆಹಲಿ - ಅಹಮದಾಬಾದ್‌, ವಾರಾಣಸಿ - ಹೌರ, ದೆಹಲಿ - ಅಮೃತಸರ ಹಾಗೂ ಮೈಸೂರು - ಚೆನ್ನೈ ಯೋಜನೆಯ ಸರ್ವೆ ಹಾಗೂ ವಿಸ್ತೃತ ಯೋಜನಾ ವರದಿಯನ್ನು ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯ ಸಭೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮೈಸೂರು - ಕೊಡಗು ಸಂಸದ ಪ್ರತಾಪ್‌ ಸಿಂಹ, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಯೋಜನೆ ಕುರಿತು ವಿಶೇಷ ಆಸಕ್ತಿ ತೋರಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಏನಿದು ಯೋಜನೆ?: ಮೈಸೂರು - ಬೆಂಗಳೂರು - ಚೆನ್ನೈ ನಡುವೆ ಸಾಗಲಿರುವ ಈ ರೈಲು, ದೇಶದ ಪ್ರಮುಖ ಯೋಜನೆ ಗಳಲ್ಲಿ ಒಂದಾಗಲಿದೆ. ಈ ರೈಲಿನಲ್ಲಿ ಕೇವಲ 40 ನಿಮಿಷಗಳಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತಲುಪಬಹುದಾಗಿದೆ. ಅದೇ ರೀತಿ ಮೈಸೂರು - ಚೆನ್ನೈ ನಡುವೆ ಕೇವಲ 2.30 ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ. 435 ಕಿ. ಮೀ. ದೂರದ ಈ ಮಾರ್ಗದಲ್ಲಿ ರೈಲು ಗಂಟೆಗೆ 320 ಕಿ. ಮೀ. ವೇಗದಲ್ಲಿ ಚಲಿಸಲಿದೆ. ಇದರಿಂದಾಗಿ ಈಗಿನ ಪ್ರಯಾಣದ ಅವಧಿಯಲ್ಲಿ ಒಟ್ಟು 7 ಗಂಟೆಗಳು ಕಡಿತವಾಗಲಿವೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 1 ಲಕ್ಷ ಕೋಟಿ ರೂ. ಗಳು. ಮಂಗಳೂರಿಗೆ ನಿತ್ಯ ರೈಲಿಗೆ ಮನವಿ: ವಾರದಲ್ಲಿ 3 ದಿನದ ಬದಲಾಗಿ ಮೈಸೂರಿನಿಂದ ಮಂಗಳೂರಿಗೆ ನಿತ್ಯ ರೈಲು ಸಂಪರ್ಕ ಕಲ್ಪಿಸಲು ಸಂಸದ ಮನವಿ ಮಾಡಿದ್ದಾರೆ. 'ಈ ಕುರಿತು ಪ್ರಯಾಣಿಕರು ಸಂಘಗಳು, ವ್ಯಾಪಾರ ಸಂಸ್ಥೆಗಳು, ಹೋಟೆಲ್‌, ಆತಿಥ್ಯ ಉದ್ಯಮ ಮತ್ತು ಸಾರ್ವಜನಿಕರಿಂದ ಹಲವು ಬಾರಿ ಮನವಿ ಸ್ವೀಕರಿಸಿದ್ದೇನೆ. ಮೈಸೂರಿನಿಂದ ಕಾರವಾರ / ಕಣ್ಣೂರಿಗೆ ನಿತ್ಯ ರೈಲು ಸೇವೆಗಳನ್ನು ಮರು - ಪರಿಚಯಿಸಲು ರೈಲ್ವೆಯೊಂದಿಗೆ ಪ್ರಸ್ತಾಪಿಸಿ ಒತ್ತಾಯಿಸಿದ್ದೇನೆ. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಆದಾಗ್ಯೂ, ಪರ್ಯಾಯ ಕಡಿಮೆ ಮಾರ್ಗದಲ್ಲಿನ ಸೇವೆಗಳು ಗಮನಾರ್ಹವಾಗಿ ವರ್ಧಿಸಲ್ಪಟ್ಟಿವೆ. ಮೈಸೂರು ಭಾಗಕ್ಕೆ ಸೀಮಿತವಾಗಿರುವ ರೈಲು ಬಳಕೆದಾರರ ಅನುಕೂಲಕ್ಕಾಗಿ ರಮಣೀಯ ಮಾರ್ಗದಲ್ಲಿ ವಿಸ್ಟಾ ಡೋಮ್‌ ಕೋಚ್‌ಗಳನ್ನು ಪರಿಚಯಿಸಿದ್ದನ್ನು ಮೈಸೂರಿನ ಜನರು ಕಳೆದುಕೊಂಡಂತೆ ಭಾವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


from India & World News in Kannada | VK Polls https://ift.tt/s0FgBnt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...