ಪಂಜಾಬ್‌ನಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುವುದೇ ಕಾಂಗ್ರೆಸ್‌..? ಆಪ್‌ಗೆ ಹೊಸ ಹುಮ್ಮಸ್ಸು..!

ಚಂಡೀಗಢ: ದೇಶದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಂತೆಯೇ ಪಂಜಾಬ್‌ ವಿಧಾನಸಭೆ ಚುನಾವಣೆ ಕೂಡಾ ಗಮನ ಸೆಳೆಯುತ್ತಿದ್ದು, ಪ್ರತಿಪಕ್ಷಗಳಿಗೆ ನಿರುದ್ಯೋಗ, ಮಾದಕ ವಸ್ತು ದಂಧೆ, ಅತ್ಯಾಚಾರ ಪ್ರಕರಣ, ಮರಳು ಅಕ್ರಮ ಸಾಗಣೆ ಸೇರಿ ಹಲವು ವಿಷಯಗಳೇ ರಣ ಕಣದ ಅಸ್ತ್ರವಾಗಿವೆ. ಸಾಲು ಸಾಲು ಬದಲಾವಣೆಗಳೊಂದಿಗೆ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್ಸಿಗೆ, ರಾಜ್ಯದ ಸಮಸ್ಯೆಗಳ ಜತೆಗೆ ಪ್ರತಿಪಕ್ಷಗಳನ್ನು ಎದುರಿಸುವುದು ಹಾಗೂ ಕೂಡಾ ಸವಾಲಾಗಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಮುನ್ನಡೆ ಸಿಗುತ್ತದೆ ಎಂದು ಸಮೀಕ್ಷೆಗಳು ತಿಳಿಸಿದ ಕಾರಣ, ಆಪ್‌ ಹೊಸ ಹುಮ್ಮಸ್ಸಿನಲ್ಲಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಪಂಜಾಬ್‌ ಲೋಕ ಕಾಂಗ್ರೆಸ್‌ ಹಾಗೂ ಸುಖದೇವ್‌ ಸಿಂಗ್‌ ಧಿಂಡ್ಸಾ ನೇತೃತ್ವದ ಎಸ್‌ಎಡಿ (ಸಂಯುಕ್ತ) ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಹಾಗಾಗಿ ರಾಜ್ಯದಲ್ಲಿರುವ ಪ್ರಮುಖ ವಿಷಯ ಹಾಗೂ ಆಡಳಿತ ಪಕ್ಷದ ವಿರುದ್ಧ ಇರುವ ಅಲೆಯನ್ನು ಪ್ರತಿಪಕ್ಷಗಳು ಬಳಸಿಕೊಳ್ಳಲು ಮುಂದಾಗಿವೆ. ಅತ್ತ ಕಾಂಗ್ರೆಸ್‌ ಸಹ ಜನಪರ ಯೋಜನೆಗಳ ಭರವಸೆ ಮೂಲಕ ಜನರ ಮನಸ್ಸು ಗೆಲ್ಲಲು ಯತ್ನಿಸುತ್ತಿದೆ. ಹಾಗಾಗಿ, ಪಂಜಾಬ್‌ ಚುನಾವಣೆಯು ಎಲ್ಲ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಆಡಳಿತ ವಿರೋಧಿ ಅಲೆ: ಹಾಗೆ ನೋಡಿದರೆ, ಪಂಜಾಬ್‌ನಲ್ಲಿ ಆಡಳಿತ ಪಕ್ಷಕ್ಕೇ ಹೆಚ್ಚು ಸವಾಲುಗಳಿವೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಿತ್ತಾಟ, ಹೊಸ ಮುಖ್ಯಮಂತ್ರಿ, ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಪಕ್ಷ ತೊರೆದು, ಹೊಸ ಪಕ್ಷ ಸ್ಥಾಪನೆಯಾಗಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಅದರಲ್ಲೂ, ಕಳೆದ ವಿಧಾನಸಭೆ ಚುನಾವಣೆ ವೇಳೆ ನೀಡಿದ ಭರವಸೆ ಈಡೇರಿಸದಿರುವುದು, ಡ್ರಗ್ಸ್‌ ದಂಧೆಗೆ ಕಡಿವಾಣ ಬೀಳದಿರುವುದು, ಉದ್ಯೋಗ ಸೃಷ್ಟಿ ಆಗದಿರುವುದು, ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಸೇರಿ ಪ್ರತಿಪಕ್ಷಗಳ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳಿವೆ. ಇವುಗಳನ್ನು ಭೇದಿಸಿಯೇ ಚುನಾವಣೆ ಎದುರಿಸುವುದು ಕಾಂಗ್ರೆಸ್ಸಿಗೆ ನಿಜಕ್ಕೂ ಸವಾಲಾಗಿದೆ. ಇದರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ನವಜೋತ್‌ ಸಿಂಗ್‌ ಅವರೇ ಆಡಳಿತದ ವಿರುದ್ಧ ಮಾತನಾಡುವುದು ಕಾಂಗ್ರೆಸ್ಸಿಗೆ ಕೆಲವೊಮ್ಮೆ ಕಬ್ಬಿಣದ ಕಡಲೆಯೇ ಆಗಲಿದೆ. ಆಪ್‌ ಆಗುವುದೇ ಆಪ್ತ?: ದಿಲ್ಲಿಯಲ್ಲಿ ಉತ್ತಮ ಆಡಳಿತದ ಮೂಲಕ ಜನರ ಮನ ಗೆದ್ದಿರುವ ಆಮ್‌ ಆದ್ಮಿ ಪಕ್ಷವು ರಾಷ್ಟ್ರ ರಾಜಧಾನಿ ಗಡಿ ರಾಜ್ಯಗಳಲ್ಲೂ ಬೇರು ಬಿಡಲು ಸಿದ್ಧವಾಗಿದ್ದು, ಇದಕ್ಕೆ ಪಂಜಾಬ್‌ ಉತ್ತಮ ವೇದಿಕೆಯಾಗಿದೆ. ಕೇಜ್ರಿವಾಲ್‌ ಮಾದರಿಯ ಆಡಳಿತ, 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಮಹಿಳೆಯರಿಗೆ ಮಾಸಿಕ ಸಾವಿರ ರೂ. ಧನ ಸಹಾಯ ಸೇರಿ ಹಲವು ಭರವಸೆ ನೀಡುವ ಮೂಲಕ ಜನ ಮನ ಸೆಳೆಯಲು ಮುಂದಾಗಿದೆ. ಅದರಲ್ಲೂ, ಚುನಾವಣೆ ಪೂರ್ವ ಸಮೀಕ್ಷೆಗಳು ಆಪ್‌ ಬಲ ಹೆಚ್ಚುವ ಸುಳಿವು ನೀಡಿರುವುದರಿಂದ ಪಂಜಾಬ್‌ನಲ್ಲಿ ಸರಕಾರ ರಚಿಸಲು ಆಪ್‌ ತುದಿಗಾಲಿನ ಮೇಲೆ ನಿಂತಿದೆ.


from India & World News in Kannada | VK Polls https://ift.tt/3HyQi2P

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...