ಪಂಜಾಬ್‌ನಲ್ಲಿ ಹೆಲಿಕಾಪ್ಟರ್‌ ರಾಜಕೀಯ..! ಸಿಎಂ ಚನ್ನಿ ಹೆಲಿಕಾಪ್ಟರ್‌ ತಡೆಗೆ ಕೈ ಆಕ್ರೋಶ..!

ಚಂಡೀಗಢ: ಪಂಜಾಬ್‌ ವಿಧಾನಸಭೆ ಚುನಾವಣೆ ರಣ ಕಣ ರಂಗೇರಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವಿಷಯವೂ ಕಾವು ಪಡೆದುಕೊಳ್ಳುತ್ತಿದೆ. ಇದೀಗ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನೀಡುವ ವಿಷಯವೂ ರಾಜಕೀಯದ ದಾಳವಾಗಿ ಪರಿಣಮಿಸಿದೆ. ರಾಹುಲ್‌ ಗಾಂಧಿ ಸಮಾವೇಶದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಅವರು ಚಂಡೀಗಢದಿಂದ ಹೋಷಿಯಾರ್‌ಪುರಕ್ಕೆ ತೆರಳಬೇಕಿದ್ದ ಹೆಲಿಕಾಪ್ಟರ್‌ಗೆ ಹಾರಾಟ ಮಾಡಲು ಅನುಮತಿ ನೀಡದಿರುವುದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೆ ಟಾಂಗ್‌ ನೀಡಿರುವ , '2014ರಲ್ಲಿ ಪಂಜಾಬ್‌ನಲ್ಲಿ ನಾನು ಸಂಚರಿಸಬೇಕಿದ್ದ ಹೆಲಿಕಾಪ್ಟರ್‌ಗೂ ಅನುಮತಿ ನೀಡಿರಲಿಲ್ಲ' ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜಲಂಧರ್‌ನಲ್ಲಿ ಸಮಾವೇಶ ನಡೆಸಿದ ಕಾರಣ, ಯಾವುದೇ ಹೆಲಿಕಾಪ್ಟರ್‌ಗಳಿಗೆ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಅದರಂತೆ ಚನ್ನಿ ಅವರ ಹೆಲಿಕಾಪ್ಟರ್‌ಗೆ ಅನುಮತಿ ನೀಡಿರಲಿಲ್ಲ. ಇದನ್ನು ಖಂಡಿಸಿದ ಕಾಂಗ್ರೆಸ್‌ ನಾಯಕ ಸುನಿಲ್‌ ಜಾಖರ್‌, 'ಸರಕಾರವು ಹೆಲಿಕಾಪ್ಟರ್‌ಗೆ ಅನುಮತಿ ನೀಡದಿರುವುದು ನಾಚಿಕೆಗೇಡು. ಚುನಾವಣಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದಿದ್ದರು. ಮೋದಿ ಅವರ ಭೇಟಿಯಿಂದಾಗಿಯೇ ನನ್ನ ಹೆಲಿಕಾಪ್ಟರ್‌ಗೆ ಅನುಮತಿ ನೀಡಿಲ್ಲ ಎಂದು ಚನ್ನಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಆಕ್ರೋಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. 'ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ನಾನು 2014ರಲ್ಲಿ ಪಂಜಾಬ್‌ಗೆ ಆಗಮಿಸಿದ್ದೆ. ಇದೇ ವೇಳೆ ಕಾಂಗ್ರೆಸ್‌ 'ಯುವ ರಾಜ' ರಾಹುಲ್‌ ಗಾಂಧಿಯವರೂ ಅಮೃತಸರಕ್ಕೆ ಭೇಟಿ ನೀಡಿದ್ದರು. ಅವರ ಹೆಲಿಕಾಪ್ಟರ್‌ ಹಾರಾಟದ ಕಾರಣಕ್ಕಾಗಿ ನಾನು ಸಂಚರಿಸಬೇಕಿದ್ದ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಪ್ರತಿಪಕ್ಷಗಳ ಕಾರ್ಯಕ್ಕೆ ಅಡ್ಡಿಪಡಿಸುವುದು ಕಾಂಗ್ರೆಸ್‌ಗೆ ರೂಢಿಯಾಗಿದೆ' ಎಂದು ಟೀಕಿಸಿದ್ದಾರೆ. ಭದ್ರತಾ ವೈಫಲ್ಯ ಕುರಿತು ಮೋದಿ ಮೊದಲ ಪ್ರತಿಕ್ರಿಯೆ ಕಳೆದ ತಿಂಗಳು ಪಂಜಾಬ್‌ನಲ್ಲಿ ಉಂಟಾದ ಭದ್ರತಾ ವೈಫಲ್ಯದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡುವ ಜತೆಗೆ, ಇದೇ ಮೊದಲಿಗೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ. 'ನಾನು ದೇವಿ ಕಾ ತಾಲಾಬ್‌ ಮಂದಿರಕ್ಕೆ ಭೇಟಿ ನೀಡಲು ತೆರಳುತ್ತಿದ್ದೆ. ಆದರೆ, ಭದ್ರತಾ ಕಾರಣದಿಂದ ನಾನು ತೆರಳಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದರು. ರಾಜ್ಯದಲ್ಲಿ ಭದ್ರತೆಯ ಪರಿಸ್ಥಿತಿ ಹೀಗಿದೆ' ಎಂದು ಹೇಳಿದ್ದರು. ಜನವರಿ 5ರಂದು ರಸ್ತೆ ಮಾರ್ಗವಾಗಿ ತೆರಳುವಾಗ ರಸ್ತೆ ತಡೆ ನಡೆಸಿದ ಕಾರಣ, ಫೀರೋಜ್‌ಪುರ ಫ್ಲೈಓವರ್‌ ಮೇಲೆಯೇ ಮೋದಿ ಅವರು 20 ನಿಮಿಷ ಕಾದು ವಾಪಸಾಗಿದ್ದರು.


from India & World News in Kannada | VK Polls https://ift.tt/Fh495ij

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...