ಬೆನ್ನಟ್ಟುವ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

ಬೆಂಗಳೂರು: ಹಿಜಾಬ್‌ ಧರಿಸಿ ಶಾಲೆ- ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಬೆನ್ನಟ್ಟಿ ವಿಡಿಯೊ ಹಾಗೂ ಫೋಟೊ ತೆಗೆದು ಪ್ರಸಾರ ಮಾಡದಂತೆ ವಿದ್ಯುನ್ಮಾನ ಮಾಧ್ಯಮ ()ಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆಯಾಗಿದೆ. ಬೆಳಗಾವಿಯ ಅಬ್ದುಲ್‌ ಮನ್ಸೂರ್‌ ಮತ್ತಿತರರು ಸಲ್ಲಿಸಿರುವ ಅರ್ಜಿಗಳು ಸೋಮವಾರ ಬೆಳಗ್ಗೆ ಸಿಜೆ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದವು. ಆಗ ಅರ್ಜಿದಾರರ ಪರ ವಕೀಲ ಎಸ್‌. ಬಾಲಕೃಷ್ಣನ್‌,ಮಾಧ್ಯಮ ಪ್ರತಿನಿಧಿಗಳು ದಿನಪೂರ್ತಿ ಶಿಕ್ಷಣ ಸಂಸ್ಥೆಗಳನ್ನು ಸುತ್ತುವರಿದು, ಹಿಜಾಬ್‌ ಧರಿಸಿ ಬರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಬೆನ್ನಟ್ಟಿ ಚಿತ್ರೀಕರಿಸುತ್ತಾರೆ. ಹೆಣ್ಣು ಮಕ್ಕಳು ಹಿಜಾಬ್‌ ಹಾಗೂ ಬುರ್ಖಾ ತೆಗೆಯುವ ದೃಶ್ಯಗಳನ್ನೂ ಬಿತ್ತರಿಸುತ್ತಿದ್ದಾರೆ. ಇಂಥ ದೃಶ್ಯಗಳ ಚಿತ್ರೀಕರಣ ಹಾಗೂ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು’ ಎಂದು ಕೋರಿದರು. ಅರ್ಜಿಯಲ್ಲಿನ ಮನವಿ ಪರಿಶೀಲಿಸಿದ ಪೀಠ, ‘ಇದೇ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳು ಪೂರ್ಣಪೀಠದ ಮುಂದಿದ್ದು, ಈ ಅರ್ಜಿಯೂ ಅಲ್ಲೇ ವಿಚಾರಣೆಗೆ ಬರಲಿ’ ಎಂದು ತಿಳಿಸಿತು ಹಾಗೂ ಹಿಜಾಬ್‌ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಜೊತೆ ಸೇರಿಸಲು ಆದೇಶಿಸಿತು. ಹಿಜಾಬ್‌ ತೆಗೆದು ವಿದ್ಯಾರ್ಥಿನಿಯರು ತರಗತಿಗೆದಾವಣಗೆರೆ: ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ ಮಧ್ಯಂತರ ತೀರ್ಪು ಲೆಕ್ಕಿಸದೆ ಹಿಜಾಬ್‌ ಧರಿಸಿಯೇ ತೀರುತ್ತೇವೆಂದು ಪಟ್ಟು ಹಿಡಿದು ಕಳೆದ ಒಂದು ವಾರದಿಂದ ತರಗತಿಯಿಂದ ಹೊರಗುಳಿದಿದ್ದ ಎವಿಕೆ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್‌ ತೆಗೆದಿರಿಸಿ ತರಗತಿಗೆ ಹಾಜರಾದರು. ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ರಜೆಯಿದ್ದ ಕಾಲೇಜುಗಳು ಪುನರಾರಂಭವಾದ ಬಳಿಕ ಎವಿಕೆ ಕಾಲೇಜಿನ 60 ವಿದ್ಯಾರ್ಥಿನಿಯರು ಪ್ರತಿದಿನ ಕಾಲೇಜಿಗೆ ಬಂದು, ಹಿಜಾಬ್‌ ತೆಗೆಯಲು ನಿರಾಕರಿಸಿ ಮನೆಗೆ ತೆರಳುತ್ತಿದ್ದರು. ಸೋಮವಾರ ಕೂಡ ಭದ್ರತಾ ಸಿಬ್ಬಂದಿ ಕಾಲೇಜು ಗೇಟ್‌ನಲ್ಲೇ ವಿದ್ಯಾರ್ಥಿಗಳನ್ನು ತಡೆದರು. ಇದನ್ನು ಖಂಡಿಸಿ 50 ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದ್ದರು. ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಮನವೊಲಿಸಲು ಯತ್ನಿಸಿದರಾದರೂ ವಿದ್ಯಾರ್ಥಿನಿಯರು ಕೇಳಲಿಲ್ಲ. ಈ ವೇಳೆ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರ ನಡುವೆ ವಾಗ್ವಾದ ಕೂಡ ನಡೆಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಹಾಗೂ ಮುಖಂಡ ಅಯೂಬ್‌ ಪೈಲ್ವಾನ್‌, ವಿದ್ಯಾರ್ಥಿನಿಯರ ಜತೆ ಮಾತನಾಡಿ, ಹಿಜಾಬ್‌ ಕುರಿತ ಹೈಕೋರ್ಟ್‌ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ. ಹೀಗಾಗಿ ಅಂತಿಮ ಆದೇಶ ಬರುವವರೆಗೂ ಹಿಜಾಬ್‌ ತೆಗೆದು ಶಾಲೆ, ಕಾಲೇಜಿಗೆ ಹೋಗುವಂತೆ ತಿಳಿಹೇಳಿದರು. ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದು ಕೊಠಡಿಯೊಂದರಲ್ಲಿ ಹಿಜಾಬ್‌ ತೆಗೆದಿರಿಸಿ ತರಗತಿಗೆ ಹಾಜರಾದರು.


from India & World News in Kannada | VK Polls https://ift.tt/pLBfP0r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...