ಲಖನೌ: ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣದ ಶ್ರೇಯಸ್ಸನ್ನು ಯೋಗಿ ಆದಿತ್ಯನಾಥ್ ಸರಕಾರಕ್ಕೆ ನೀಡಿ ಬಿಜೆಪಿ ಸಂಸದ ಮಾಡಿರುವ ಟ್ವೀಟ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯದ ತಿರುಗೇಟು ನೀಡಿದ್ದಾರೆ. ‘ದೀಪದ ಕೆಳಗೆ ಕತ್ತಲು ಎನ್ನುವ ಮಾತಿದೆ. ಅಂತೆಯೇ ಈ ಸೂರ್ಯ ಎಲ್ಲವನ್ನೂ ಗಮನಿಸಿಯೂ ತಮ್ಮ ಬುಡದಲ್ಲಿ ನಡೆದ ಘಟನೆಗಳ ಬಗ್ಗೆ ಮೈಮರೆತಿದ್ದಾರೆ. ಆಗ್ರಾ-ಲಖನೌ ಹೆದ್ದಾರಿ ಯೋಗಿ ಆದಿತ್ಯನಾಥ್ ಸರಕಾರದ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಇದು ಅವರ ತಿಳಿವಳಿಕೆ ಕೊರತೆಯನ್ನು ತೋರಿಸುತ್ತದೆ. ವಾಸ್ತವವಾಗಿ ಆ ಹೆದ್ದಾರಿ ನಿರ್ಮಾಣವು ಹಿಂದಿನ ಅವಧಿಯ ನಮ್ಮ ಸರಕಾರದ ಕೊಡುಗೆ’ ಎಂದು ಅಖಿಲೇಶ್ ಹೇಳಿದ್ದಾರೆ. ಅಖಿಲೇಶ್ ಪರ ಮುಲಾಯಂ ಪ್ರಚಾರಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯು ತೀವ್ರ ಪೈಪೋಟಿಯಿಂದ ಕೂಡಿರುವ ಕಾರಣ ಇದೇ ಮೊದಲ ಬಾರಿಗೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಅವರು ಗುರುವಾರ ಪುತ್ರ ಅಖಿಲೇಶ್ ಯಾದವ್ ಪರ ಬಹಿರಂಗವಾಗಿ ಮತಯಾಚನೆ ಮಾಡಿದ್ದಾರೆ. ಅಖಿಲೇಶ್ ಸ್ಪರ್ಧಿಸುತ್ತಿರುವ ಕರ್ಹಾಲ್ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಅವರು, ‘ರಾಜ್ಯದಲ್ಲಿ ಬಡತನ ನಿರ್ಮೂಲನೆ ಹಾಗೂ ಉದ್ಯೋಗ ಸೃಷ್ಟಿಯು ಅಖಿಲೇಶ್ ಯಾದವ್ ಗುರಿಯಾಗಿದೆ. ಹಾಗಾಗಿ ಜನರು ಅಖಿಲೇಶ್ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ. ‘ಉತ್ತರ ಪ್ರದೇಶದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಅಮೆರಿಕ ಸೇರಿ ಜಗತ್ತಿನ ಗಮನ ಸಮಾಜವಾದಿ ಪಕ್ಷದ ಮೇಲಿದೆ. ಹಾಗಾಗಿ, ಜನರು ನಮ್ಮ ಪಕ್ಷವನ್ನು ಗೆಲ್ಲಿಸಬೇಕು. ಖಂಡಿತವಾಗಿಯೂ ಅಖಿಲೇಶ್ ಯಾದವ್ ಅವರು ನಿಮ್ಮ ಆಶೋತ್ತರಗಳನ್ನು ಈಡೇರಿಸಲಿದ್ದಾರೆ’ ಎಂದು ಭರವಸೆ ನೀಡಿದ್ದಾರೆ. ವಯಸ್ಸು ಸೇರಿ ಹಲವು ಕಾರಣಗಳಿಂದಾಗಿ ಮುಲಾಯಂ ಸಿಂಗ್ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.
from India & World News in Kannada | VK Polls https://ift.tt/YeWEo2u