ಧಾರವಾಡ: ಹಿಜಾಬ್- ಕೇಸರಿ ಶಾಲು ವಿವಾದ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಸರಕಾರ ಕೂಡಲೇ ವಿಧಾನ ಮಂಡಲ ಅಧಿವೇಶನ ಸೇರಿದಂತೆ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಸಲಹೆ ನೀಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಚಾರದಲ್ಲಿ ದಿಟ್ಟ ಕ್ರಮ ಕೈಗೊಳ್ಳುವುದು ಸರಕಾರದ ಕರ್ತವ್ಯ. ಕೂಡಲೇ ಪ್ರತಿಪಕ್ಷದ ನಾಯಕರು, ರಾಜ್ಯದ ಎಲ್ಲ ಕಾಲೇಜು ಮುಖಂಡರು, ಕುಲಪತಿಗಳು ಹಾಗೂ ಪಾಲಕರ ಸಭೆ ಕರೆದು ಉತ್ತಮ ವಾತಾವರಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ಮರ್ಯಾದೆ ಹೋಗಲಿದೆ’ ಎಂದರು. ‘ಮಕ್ಕಳ ಮನಸ್ಸು ತುಂಬಾ ಮೃದು. ಈ ಬಗ್ಗೆ ತಂದೆ-ತಾಯಿ ಮತ್ತು ರಾಜಕೀಯ ಪಕ್ಷಗಳ ಮುಖಂಡರು ವಿಚಾರ ಮಾಡಬೇಕಿದೆ’ ಎಂದರು. ಕೋರ್ಟ್‌ಗೆ ಸರಕಾರ ಮನವೊಲಿಸಲಿ‘ಹಿಜಾಬ್, ಶಾಲು ವಿವಾದ ಪಾರ್ಲಿಮೆಂಟ್‌ಗೂ ಹೋಗಿದೆ. ಈಗ ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆ ಅಂತಾ ಕೋರ್ಟ್‌ಗೂ ಸರಕಾರ ಹೇಳಬೇಕು. ಇಲ್ಲಿ ಮನಸ್ಸುಗಳು ಕೆಟ್ಟು ಹೋಗುತ್ತಿವೆ. ಹೀಗಾಗಿ ಮಕ್ಕಳ ಮನಸ್ಸುಗಳಲ್ಲಿ ಸೇರುತ್ತಿರುವ ಕೆಟ್ಟ ಭಾವನೆಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಸರಕಾರ ಎಚ್ಚರಿಕೆ ಹೆಜ್ಜೆ ಹಾಕಬೇಕು. ಈ ವಿಚಾರದಲ್ಲಿ ಯಾರೂ ರಾಜಕೀಯ ಬೆರೆಸಬಾರದು’ ಎಂದು ಹೊರಟ್ಟಿ ಪ್ರತಿಕ್ರಿಯಿಸಿದರು. ‘ಈ ವಿಚಾರವಾಗಿ ರಾಜಕೀಯ ನಾಯಕರು ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು. ಮಕ್ಕಳ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟರೆ ಹೇಗೆ? ಶಾಸಕರು ಇರೋದು ಏತಕ್ಕೆ? ನಾಲ್ಕು ಮಂದಿಗೆ ಒಳ್ಳೆಯದಾಗಲಿ ಅಂತಾ ಪ್ರಜೆಗಳು ಶಾಸಕರನ್ನು ಆಯ್ಕೆಮಾಡಿ ಕಳುಹಿಸಿದ್ದಾರೆ. ಅವರಿಗೆ ಭಾಷಣ ಬೇಕಾದರೆ ಎಲೆಕ್ಷನ್‌ನಲ್ಲಿ ಮಾಡಿಕೊಳ್ಳಲಿ’ ಎಂದು ಹೊರಟ್ಟಿ ನೀತಿ ಪಾಠ ಹೇಳಿದರು. ಬಿಕಿನಿ ಬಗ್ಗೆ ಹೇಳುವುದು ತಪ್ಪುಬಿಕಿನಿ ಬಗ್ಗೆ ಪ್ರಿಯಂಕಾ ಗಾಂಧಿ ಟ್ವಿಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ಎಲ್ಲವೂ ರಾಜಕೀಯ. ಅವರವರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಯಾವ ಬಟ್ಟೆ ಹಾಕಬೇಕು ಅಂತಾ ತಾಯಿ-ತಂದೆ ಕಲಿಸಬೇಕು. ತಾಯಿ ಸ್ಥಾನದಲ್ಲಿ ಪ್ರಿಯಾಂಕಾ ಇದ್ದಾರೆ. ಅಂತಹವರು ಬಿಕಿನಿ ಬಗ್ಗೆ ಹೇಳುವುದು ತಪ್ಪು. ಹಕ್ಕು ಎಲ್ಲರಿಗೂ ಇದೆ. ಯಾರನ್ನೊ ಓಲೈಸುವ ಕೆಲಸ ಮಾಡಬಾರದು; ಎಂದು ತಿಳಿಸಿದರು.
from India & World News in Kannada | VK Polls https://ift.tt/ail3zRJ