ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಿಂದ ನೊಂದವರಿಂದ ಪ್ರಾದೇಶಿಕ ಪಕ್ಷ ಸ್ಥಾಪನೆ? ತೆರೆಮರೆಯಲ್ಲಿ ಗುಸುಗುಸು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುತ್ತಿದೆ. ಮತ್ತೊಂದೆಡೆ ಕೆಲವು ಮುಖಂಡರು ಪ್ರಾದೇಶಿಕ ಪಕ್ಷಗಳ ಉಗಮದ ಸಾಧ್ಯಾಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರಾದೇಶಿಕ ಪಕ್ಷಗಳು ಜೀವ ಹಿಡಿದುಕೊಂಡು ಬಾಳಿದ್ದು ವಿರಳ. ಈ ನಡುವೆಯೂ ನಾನಾ ಪಕ್ಷಗಳ ನಾಯಕರ ನಡುವಿನ ವೈಮನಸ್ಯ, ಕಿತ್ತಾಟದಿಂದ ಹೊಸ ಪಕ್ಷಗಳು ಹುಟ್ಟಿಕೊಂಡು ಸದ್ದು ಮಾಡಿದ್ದಿದೆ. ಅಲ್ಲದೇ ಅಷ್ಟೇ ಬೇಗ ಇಂತಹ ಪಕ್ಷಗಳು ಅವಸಾನಗೊಂಡಿವೆ. ಆದರೆ, ಪ್ರಾದೇಶಿಕ ಪಕ್ಷ ಕಟ್ಟುವ ಚರ್ಚೆ ಮಾತ್ರ ನಿರಂತರ ನಡೆಯುತ್ತಿರುತ್ತದೆ. ಈ ಬಾರಿಯೂ ಚುನಾವಣೆ ಸಮೀಪಿಸುತ್ತಿದ್ದಂತೆ ಈ ವಿಚಾರದಲ್ಲಿ ಗುಸುಗುಸು ಎದ್ದಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಾಳಯದಲ್ಲಿ ಚುನಾವಣೆ ಸಿದ್ಧತೆ ಭರದಿಂದ ಸಾಗಿದೆ. ಇದರ ನಡುವೆ ಮೂರೂ ಪಕ್ಷಗಳಲ್ಲಿ ಕಳೆದೊಂದು ತಿಂಗಳಿಂದ ಪ್ರತಿಷ್ಠೆಯ ರಾಜಕಾರಣದ ಮೇಲಾಟವಾಗುತ್ತಿದೆ. ಇದು ರಾಜಕೀಯ ಪಕ್ಷಗಳಲ್ಲಿನ ಆಂತಿಕ ಭಿನ್ನಾಭೀಪ್ರಾಯಕ್ಕೆ ಕನ್ನಡಿ ಹಿಡಿಯುವಂತಿದೆ. ಪಕ್ಷಾಂತರದ ಹೇಳಿಕೆಗಳು ಧ್ರುವೀಕರಣದ ಸಾಧ್ಯತೆಯನ್ನು ನಿಚ್ಚಳವಾಗಿಸಿದೆ. ಈ ನಡುವೆ ಪ್ರತ್ಯೇಕವಾಗಿ ಮಾತನಾಡಿರುವ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ದಿಢೀರ್‌ ಆಗಿ ಪ್ರಾದೇಶಿಕ ಪಕ್ಷ ರಚನೆಯ ವಿಚಾರ ಪ್ರಸ್ತಾಪಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖವಾಗಿ ಮೂರೇ ಪಕ್ಷಗಳು (ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌) ಕಣದಲ್ಲಿದ್ದವು. 2013ರಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಅಂದಿನ ಚುನಾವಣೆಯಲ್ಲಿ ಬಿಜೆಪಿ ಮೂರು ಹೋಳಾಗಿತ್ತು. ಇದರ ನೇರ ಲಾಭ ಕಾಂಗ್ರೆಸ್‌ಗಾಗಿತ್ತು. ಪರಿಣಾಮವಾಗಿ ಬಿಜೆಪಿ 40 ಸ್ಥಾನಗಳಿಗೆ ಕುಸಿದು ಅಧಿಕೃತ ಪ್ರತಿಪಕ್ಷದ ಸ್ಥಾನವನ್ನೂ ತಪ್ಪಿಸಿಕೊಂಡಿತ್ತು. ಜೆಡಿಎಸ್‌ ಕೂಡ 40 ಸ್ಥಾನ ಗಳಿಸಿದ್ದರೂ ಮತ ಗಳಿಕೆ ಪ್ರಮಾಣದ ಆಧಾರದಲ್ಲಿ ಅಧಿಕೃತ ಪ್ರತಿಪಕ್ಷವಾಗಿ ಹೊರಹೊಮ್ಮಿತ್ತು. ಯಾರ ಮನಸ್ಸಿನಲ್ಲಿ ಏನಿದೆ?ಈ ಬಾರಿ ಹೊಸ ಪಕ್ಷಗಳ ಉದಯದ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವಂತಿಲ್ಲ. ಆದರೆ, ಬಳ್ಳಾರಿ ಭಾಗದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಬಹಿರಂಗವಾಗಿ ಕಾಣಿಸಿಕೊಂಡು, ‘ರಾಜಕೀಯ ವಿಚಾರದಲ್ಲಿ ಫೆಬ್ರವರಿ ನಂತರ ಮಾತನಾಡುತ್ತೇನೆ. ಶ್ರೀರಾಮುಲು ತೆಗೆದುಕೊಳ್ಳುವ ನಿರ್ಧಾರ ಜತೆ ಹೆಜ್ಜೆ ಹಾಕುತ್ತೇನೆ’ ಎಂಬ ಹೇಳಿಕೆ ನೀಡಿದ್ದರು. ಇನ್ನೊಂದು ಕಡೆ ಪರಿಷತ್‌ನಲ್ಲಿ ಪ್ರತಿಪಕ್ಷದ ಸ್ಥಾನ ಸಿಗದೆ ಕಾಂಗ್ರೆಸ್‌ ವಿರುದ್ಧ ಸಿ.ಎಂ.ಇಬ್ರಾಹಿಂ ಮುನಿಸಿಕೊಂಡಿದ್ದಾರೆ. ಕಾಂಗ್ರೆಸಿನಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ಅವರು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡವರ ಭೇಟಿ ಮಾಡತೊಡಗಿದ್ದಾರೆ. 'ಅಲಿಂಗ' ಸಮಾವೇಶಕ್ಕೂ ಮುಂದಾಗಿದ್ದಾರೆ. ಮತ್ತೊಂದು ಕಡೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನಡೆ ನಿಗೂಢವಾಗಿದೆ. ಎಂಎಲ್ಸಿ ಚುನಾವಣೆಯಲ್ಲಿ ಲಖನ್‌ ಜಾರಕಿಹೊಳಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲಗಾಗಿರುವ ರಮೇಶ್ ಜಾರಕಿಹೊಳಿ ಕುಟುಂಬದ ಸದಸ್ಯರ ತಲೆಯಲ್ಲಿ ಬೇರೆಯದೇ ಯೋಚನೆ ಓಡಾಡುತ್ತಿದೆ. ಅದು ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಪಷ್ಟ ರೂಪ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಪ್ರಾದೇಶಿಕ ಪಕ್ಷ ಯಾರೂ ಕಟ್ಟುವುದಿಲ್ಲಬೆಳಗಾವಿ: ಪ್ರಾದೇಶಿಕ ಪಕ್ಷ ಕಟ್ಟುವ ಕೆಲಸವನ್ನು ಯಾರೂ ಮಾಡುವುದಿಲ್ಲ. ರಮೇಶ್‌ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿಉಳಿಯಬೇಕು, ಸಂಘಟನೆ ಮಾಡಬೇಕು ಎಂಬ ಇಚ್ಚೆ ಇದೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ‘ಮಾಜಿ ಸಚಿವ ರಮೇಶ ಜಾರಕಿಹೊಳಿ ನನ್ನ ಜೊತೆ ವಿಶೇಷವಾದದ್ದೇನೂ ಮಾತನಾಡಿಲ್ಲ. ಪ್ರಾದೇಶಿಕ ಪಕ್ಷ ಕಟ್ಟುವ ಕೆಲಸ ಮಾಡುವುದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಇರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು. ನೊಂದವರ ಪಕ್ಷವೇ ದೊಡ್ಡದಾಗಬಹುದುಕೊಪ್ಪಳ: ನೊಂದವರೆಲ್ಲರೂ ಸೇರಿ ಪಕ್ಷ ಕಟ್ಟಲು ಹೊರಟರೆ ನೊಂದವರ ಪಕ್ಷವೇ ದೊಡ್ಡದಾಗಲಿದೆ. ನಾವೂ ಸೇರಿ ಎಲ್ಲರೂ ನೋಂದವರೇ ಆಗಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ‘ಸಿ.ಎಂ. ಇಬ್ರಾಹಿಂ, ನಾನು ಸೇರಿ ಎಲ್ಲರೂ ಕಾಂಗ್ರೆಸ್‌ನಲ್ಲೇ ಇದ್ದೇವೆ. ಅವರಿಗೆ ಒಂದಷ್ಟು ಅಸಮಾಧಾನ ಇರಬಹುದು. ರಾಜಕೀಯದಲ್ಲಿ ಇನ್ನೂ ಬಹಳಷ್ಟು ಅವಕಾಶಗಳಿವೆ, ನೂರಾರು ದಾರಿಗಳಿವೆ. ಹಾಗಾಗಿ ಅವರು ಕಾಂಗ್ರೆಸ್‌ನಲ್ಲೇ ಇರುತ್ತಾರೆ’ ಎಂದಿದ್ದಾರೆ.


from India & World News in Kannada | VK Polls https://ift.tt/8ol4ibsm5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...