'ಗೇಮ್‌ ಚೇಂಜರ್‌': ಕೊರೊನಾ ನಿರೋಧಕ ಮಾತ್ರೆಗೆ ಬ್ರಿಟನ್‌ ಅಸ್ತು, ವಿಶ್ವದಲ್ಲೇ ಮೊದಲು

ಲಂಡನ್‌: ಕೊರೊನಾ ವೈರಸ್‌ ನಿರೋಧಕ ಮಾತ್ರೆ ಮೊಲ್ನುಪಿರವಿರ್‌ಗೆ ಗುರುವಾರ ಅನುಮತಿ ನೀಡಿದ್ದು, ಜಗತ್ತಿನಲ್ಲೇ ಸೋಂಕಿನ ವಿರುದ್ಧ ಹೋರಾಡಲು ಮಾತ್ರೆಗಳಿಗೆ ಸಮ್ಮತಿ ಸೂಚಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ. ಅಮೆರಿಕ ಮೂಲದ ಮರ್ಕ್ ಹಾಗೂ ರಿಡ್ಜ್‌ಬ್ಯಾಕ್‌ ಬಯೋಥೆರಪ್ಯುಟಿಕ್ಸ್‌ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕೋವಿಡ್‌ - 19 ನಿರೋಧಕ ಮಾತ್ರೆಗಳಿಗೆ ಬ್ರಿಟನ್‌ನ ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್‌ಆರ್‌ಎ) ಗುರುವಾರ ಅನುಮೋದನೆ ನೀಡಿದೆ. ಕೊರೊನಾ ಸೋಂಕು ದೃಢಪಟ್ಟವರು ಹಾಗೂ ಸೋಂಕಿನ ಲಕ್ಷಣ ಕಂಡು ಬಂದವರಿಗೆ ಐದು ದಿನಗಳ ಒಳಗೆ ಚಿಕಿತ್ಸೆಯ ಭಾಗವಾಗಿ ದಿನಕ್ಕೆ ಎರಡು ಬಾರಿ ಈ ಮಾತ್ರೆಗಳನ್ನು ನೀಡಲಾಗುತ್ತದೆ. ಮಾತ್ರೆಗಳನ್ನು ಪಡೆದ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಹಾಗೂ ಆರೋಗ್ಯ ಸ್ಥಿತಿ ಗಂಭೀರವಾಗಿ ಮೃತಪಡುವ ಅಪಾಯ ಇದರಿಂದ ಕಡಿಮೆಯಾಗುತ್ತದೆ ಎಂಬುದು ಕ್ಲಿನಿಕಲ್‌ ಪ್ರಯೋಗದಿಂದ ದೃಢಪಟ್ಟಿದೆ. "ಬ್ರಿಟನ್‌ಗೆ ಇದು ಐತಿಹಾಸಿಕ ದಿನ. ಜಗತ್ತಿನಲ್ಲಿಯೇ ಕೊರೊನಾ ವಿರುದ್ಧ ಹೋರಾಡಲು ಮಾತ್ರೆಗಳಿಗೆ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ನಮ್ಮ ದೇಶ ಪಾತ್ರವಾಗಿದೆ. ಇದು ಮುಂದಿನ ದಿನಗಳಲ್ಲಿ'ಗೇಮ್‌ ಚೇಂಜರ್‌' ಆಗಲಿದೆ" ಎಂದು ಬ್ರಿಟನ್‌ ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ತಿಳಿಸಿದ್ದಾರೆ. ಮಾತ್ರೆಗಳ ನೀಡಿಕೆ ಪ್ರಕ್ರಿಯೆ, ಮಾರ್ಗಸೂಚಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲು ಬ್ರಿಟನ್‌ ಸರಕಾರ ತೀರ್ಮಾನಿಸಿದೆ. ವಾಸ್ತವದಲ್ಲಿ ಮಾತ್ರೆಗಳನ್ನು ಜ್ವರಕ್ಕಾಗಿ ನೀಡಲಾಗುತ್ತಿತ್ತು. ಇವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಕೊರೊನಾ ಸೋಂಕಿತರಿಗೂ ನೀಡಬಹುದು ಎಂದು ಪ್ರಯೋಗದಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಅಮೆರಿಕದಿಂದ ಲಕ್ಷಾಂತರ ಮಾತ್ರೆಗಳನ್ನು ಆಮದು ಮಾಡಿಕೊಳ್ಳಲು ಸಹ ಬ್ರಿಟನ್‌ನ ಬೋರಿಸ್‌ ಜಾನ್ಸನ್‌ ಸರಕಾರ ತೀರ್ಮಾನಿಸಿದೆ.


from India & World News in Kannada | VK Polls https://ift.tt/3BLku5q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...