ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ವೈರಸ್‌ ಪತ್ತೆ ! ವರದಿ ಬಂದ ಬಳಿಕ ಸಿಗಲಿದೆ ಸ್ಪಷ್ಟನೆ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ಸ್ವರೂಪದ ವೈರಸ್ ಕಂಡು ಬಂದಿದೆ. 63 ವರ್ಷದ ವ್ಯಕ್ತಿಯಲ್ಲಿ ಭಿನ್ನ ವೈರಸ್ ಕಂಡುಬಂದಿರುವುದನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಬೆಂಗಳೂರಿನಲ್ಲಿ 63 ವರ್ಷದ ಒಬ್ಬ ವ್ಯಕ್ತಿಯಲ್ಲಿ ಇಂತಹ ವೈರಾಣು ಕಂಡುಬಂದಿದೆ. ಇದು ಡೆಲ್ಟಾ ವೈರಸ್‌ಗಿಂತ ಭಿನ್ನವಾಗಿದೆ. ಆದರೆ ಇದು ಯಾವ ಸ್ವರೂಪದ ವೈರಸ್ ಎಂಬುವುದು ಇನ್ನು ದೃಢಪಟ್ಟಿಲ್ಲ. ಸೋಮವಾರ ಸಂಜೆಯೊಳಗಡೆ ವರದಿ ಕೈಸೇರಲಿದೆ. ಇದಾದ ಬಳಿಕವೇ ಸ್ಪಷ್ಟಗೊಳ್ಳಲಿದೆ ಎಂದರು. ಈ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಸಂಸ್ಥೆ (ಐಸಿಎಂಆರ್‌) ಜೊತೆ ಸಂಪರ್ಕದಲ್ಲಿ ಇದ್ದೇನೆ. ಸಂಜೆ ವರದಿ ಬಂದ ಬಳಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು. ದಕ್ಷಿಣ ಆಫ್ರಿಕಾ ಸೇರಿದಂತೆ 12 ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಅಧಿಕೃತವಾಗಿ ಈ ಸೋಂಕು ಪತ್ತೆಯಾಗಿಲ್ಲ. ಆದರೆ ಇದೀಗ ದಕ್ಷಿಣ ಆಫ್ರಿಕಾದಿಂದ ಬಂದ ಓರ್ವ ವ್ಯಕ್ತಿಯಲ್ಲಿ ಭಿನ್ನ ಸ್ವರೂಪದ ವೈರಾಣು ಪತ್ತೆಯಾಗಿರುವು ಆತಂಕಕ್ಕೆ ಕಾರಣವಾಗಿದೆ. ಓಮಿಕ್ರಾನ್‌ ಬಗ್ಗೆ ಡಿಸಂಬರ್ 1 ಕ್ಕೆ ನಿಖರ ವರದಿ ಬರುತ್ತದೆ. 12 ದೇಶಗಳಲ್ಲಿ ಕಾಣಿಸಿಕೊಂಡಿದೆ. ಅಂತರಾಷ್ಟ್ರೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗೆ ಎಚ್ಚರಿಕೆಯಿಂದ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು. ಓಮಿಕ್ರಾನ್‌ ವೈರಾಣುವಿನಲ್ಲಿ ವಾಂತಿ, ಸುಸ್ತು, ತಲೆಸುತ್ತುವಿಕೆ ಲಕ್ಷಣಗಳು ಇವೆ. ಆದರೆ ಐಸಿಯು ಕಡಿಮೆ ಡೆಲ್ಟಾಗೆ ಹೋಲಿಕೆ ಮಾಡಿದರೆ ತೀವ್ರತೆ ಕಡಿಮೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಸಿಎಂಆರ್ ವರದಿ ಬರುವ ವರೆಗೆ ಎಚ್ಚರಿಕೆ ಇರೋಣ ಎಂದರು.


from India & World News in Kannada | VK Polls https://ift.tt/3D3Kjyv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...