
ಮಂಜುನಾಥ ಹಳ್ಳದ ಯಲಬುರ್ಗಾ ಕೊಪ್ಪಳ: ಹವಾಮಾನ ವೈಪರೀತ್ಯದಿಂದ ಸತತವಾಗಿ ಸುರಿದ ಮಳೆಯಿಂದ ತೋಟಗಾರಿಕೆ ಬೆಳೆಯಾದ ಹಾನಿಯಾಗುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಯಲಬುರ್ಗಾ ತಾಲೂಕಿನ ಸುಮಾರು 700 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು ಅದರಲ್ಲಿ ಮಳೆಯಿಂದ ಸುಮಾರು 500 ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ. ದ್ರಾಕ್ಷಿ ಈಗ ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದ್ದು, ನಿರಂತರ ಮಳೆಯಿಂದ ದ್ರಾಕ್ಷಿ ಹೂವು ಮತ್ತು ಕಾಯಿ ಕೊಳೆತು ಹೋಗಿದೆ. ಇದರಿಂದ ತೋಟಗಾರಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೆಚ್ಚು ದಾಕ್ಷಿ ಬೆಳೆಯುವ ಪ್ರದೇಶಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗುತ್ತದೆ. ಕಲಭಾವಿ, ಮಾಟಲದಿನ್ನಿ, ಬುಡಗುಂಟಿ, ಗುತ್ತೂರು, ಬೇವೂರು, ಕುಡಗುಂಟಿ, ಮುಧೋಳ, ಹಿರೇಮ್ಯಾಗೇರಿ, ಬಳೂಟಗಿ, ಸೋಂಪೂರ ವ್ಯಾಪ್ತಿಯಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ದ್ರಾಕ್ಷಿ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಇಲಾಖೆ ಮೊರೆ ಹೋಗುವಂತಾಗಿದೆ. ಬೆಳೆ ನಷ್ಟಕಳೆದೊಂದು ವಾರ ನಿರಂತರ ಸುರಿದ ಮಳೆಯಿಂದಾಗಿ ದ್ರಾಕ್ಷಿ ಹೂವು, ಕಾಯಿ ಕೊಳೆಯುತ್ತಿವೆ. ದ್ರಾಕ್ಷಿ ಬೆಳೆಗೆ ಡೌನೀಯ ಎಂಬ ರೋಗ ಹರಡುವ ಭೀತಿ ಎದುರಾಗಿದೆ. ಸತತವಾಗಿ ಸುರಿದ ಮಳೆಗೆ ಈಗಾಗಲೇ ಶೇ.80ರಷ್ಟು ದ್ರಾಕ್ಷಿ ಬೆಳೆ ಸಂಪೂರ್ಣ ನಷ್ಟವಾಗಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆದ ರೈತರು. ಅಧಿಕಾರಿಗಳು ಭೇಟಿಜಿಟಿ ಜಿಟಿ ಮಳೆಯಿಂದ ದ್ರಾಕ್ಷಿ ಬೆಳೆ ಹಾನಿಯಾಗಿರುವುದು ಪರಿಶೀಲಿಸುವುದರ ಜತೆಗೆ ಸಮೀಕ್ಷೆ ಕಾರ್ಯ ಕೈಗೊಂಡು ರೈತರಿಗೆ ಧೈರ್ಯ ತುಂಬಲು ತೋಟಗಾರಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ತಾಲೂಕಿನಾದ್ಯಂತ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿದ್ದು, ರೈತರಿಗೆ ಪರಿಹಾರ ಕೊಡಿಸುವ ಭರವಸೆಯೂ ನೀಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಲ್ಕು ಎಕರೆ ಜಮೀನಿನಲ್ಲಿ ದಾಕ್ಷಿ ಬೆಳೆಯುತ್ತಿದ್ದೇವೆ. ಈ ವರ್ಷ ಹೂವು ಮೊಗ್ಗು ಕಾಯಿ ಇಳುವರಿ ಚೆನ್ನಾಗಿಯೇ ಬಂದಿದೆ. ಆದರೆ ಜಿಟಿ ಜಿಟಿ ಮಳೆಯಿಂದ ದ್ರಾಕ್ಷಿ ನಾಶವಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಹಾಂತಪ್ಪ ರಾಠೋಡ, ದಾಕ್ಷಿ ಬೆಳೆದ , ಬಳೂಟಗಿ ತಾಲೂಕಿನಲ್ಲಿ 700 ಎಕರೆ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಮಳೆಗೆ 500 ಎಕರೆಗೂ ಅಧಿಕ ದ್ರಾಕ್ಷಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ವೈಜ್ಞಾನಿಕವಾಗಿ ಸರ್ವೆ ಕಾರ್ಯ ಕೈಗೊಂಡು ಸಮೀಕ್ಷೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ಬೆಳೆ ಪರಿಹಾರಧನ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಬೆಳೆಹಾನಿ ಪರಿಹಾರ ಪಡೆದುಕೊಳ್ಳುವುದಕ್ಕೆ ರೈತರು ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿಯನ್ನು ಇಲಾಖೆಗೆ ನಿಗದಿತ ಸಮಯದಲ್ಲಿ ಒದಗಿಸಬೇಕು. ಮಂಜುನಾಥ ಲಿಂಗಣ್ಣವರ, ಸಹಾಯಕ ತೋಟಗಾರಿಕೆ ನಿರ್ದೇಶಕ, ಯಲಬುರ್ಗಾ
from India & World News in Kannada | VK Polls https://ift.tt/3xw4SST