
ಕಾನ್ಪುರ(ಉತ್ತರ ಪ್ರದೇಶ): ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿಯೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಚೊಚ್ಚಲ ಶತಕ ಸಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ. ಆ ಮೂಲಕ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಶತಕ ಸಿಡಿಸಿದ ಭಾರತದ 16ನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಅಯ್ಯರ್ ಶುಕ್ರವಾರ ಪಾತ್ರರಾದರು. ನಿಯಮಿತ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ರಿಷಭ್ ಪಂತ್ ಅವರಂಥ ಕೀ ಆಟಗಾರರ ಅನುಪಸ್ಥಿತಿಯಲ್ಲಿ ಗುರುವಾರ ಟೆಸ್ಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಮನ ಮೋಹಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಮೊದಲನೇ ದಿನ 136 ಎಸೆತಗಳನ್ನು ಎದುರಿಸಿ 75 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್, 4 ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. ನಂತರ, ಎರಡನೇ ದಿನದಾಟದಲ್ಲಿ ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಆರಂಭಿಕ ದಿನದ ಲಯವನ್ನು ಮುಂದುವರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅಯ್ಯರ್ ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಪ್ರಥಮ ಇನಿಂಗ್ಸ್‌ನ 92ನೇ ಓವರ್‌ನ ಮೊದಲನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಅಯ್ಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಮೂರಂಕಿ ವೈಯಕ್ತಿಕ ಮೊತ್ತ ದಾಖಲಿಸಿದರು. ಒಟ್ಟು 162 ಎಸೆತಗಳಿಗೆ 104 ರನ್ ಗಳಿಸಿದ ಶ್ರೇಯಸ್, ಬ್ಯಾಟಿಂಗ್ ಮುಂದುವರಿಸಿದ್ದಾರೆ. ಚೊಚ್ಚಲ ಶತಕ ಸಿಡಿಸಲು ಶ್ರೇಯಸ್ ಅಯ್ಯರ್ 157 ಎಸೆತಗಳನ್ನು ತೆಗೆದುಕೊಂಡರು. ಇವರ ಈ ಅಜೇಯ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳು ಒಳಗೊಂಡಿವೆ. ಇನ್ನು 92 ಓವರ್‌ಗಳ ಅಂತ್ಯಕ್ಕೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್‌ಗೆ ಮೊದಲನೇ ದಿನ ಸಾಥ್ ನೀಡಿದ್ದ ರವೀಂದ್ರ ಜಡೇಜಾ(50) ಎರಡನೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಮೊದಲನೇ ದಿನದಾಟದಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ್ದ ಶುಭಮನ್ ಗಿಲ್ ಅರ್ಧಶತಕ ಸಿಡಿಸಿದ್ದರು. ಅವರು ಎದುರಿಸಿದ್ದ 93 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಐದು ಬೌಂಡರಿಯೊಂದಿಗೆ 52 ರನ್ ಗಳಿಸಿದ್ದರು. ಉತ್ತಮವಾಗಿಯೇ ಆಡುತ್ತಿದ್ದ ಅವರು ಕೈಲ್ ಜೇಮಿಸನ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀಬ್ ಬೌಲ್ಡ್ ಆಗಿದ್ದರು. ಇನ್ನು, ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ(26) ಅಜಿಂಕ್ಯ ರಹಾನೆ(35) ಮತ್ತೊಮ್ಮೆ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ಆ ಮೂಲಕ ಟೀಮ್ ಮ್ಯಾನೇಜ್‌ಮೆಂಟ್‌ಗೆ ಬೇಸರ ಉಂಟು ಮಾಡಿದ್ದರು. ನಂತರ, ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಶತಕದ ಜೊತೆಯಾಟದ ಮೂಲಕ ಮೊದಲನೇ ದಿನ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು:
- ಲಾಲಾ ಅಮರನಾಥ್: 118 (ಇಂಗ್ಲೆಂಡ್-1933)
- ದೀಪಕ್ ಶೋಧನ್: 110 (ಪಾಕಿಸ್ತಾನ-1952)
- ಎ.ಜಿ ಕೃಪಾಲ್ ಸಿಂಗ್: 100* (ನ್ಯೂಜಿಲೆಂಡ್-1955)
- ಅಬ್ಬಾಸ್ ಅಲಿ ಬೈಗ್: 112 (ಇಂಗ್ಲೆಂಡ್-1959)
- ಹನುಮಂತ್ ಸಿಂಗ್: 105 (ಇಂಗ್ಲೆಂಡ್-1964)
- ಜಿ. ವಿಶ್ವನಾಥ್: 137 (ಆಸ್ಟ್ರೇಲಿಯಾ-1969)
- ಸುರೀಂದರ್ ಅಮರನಾಥ್: 124 (ನ್ಯೂಜಿಲೆಂಡ್-1976)
- ಮೊಹಮ್ಮದ್ ಅಝರುದ್ದೀನ್ 110 (ಇಂಗ್ಲೆಂಡ್-1984)
- ಪ್ರವೀಣ್ ಆಮ್ರೆ: 103 (ದಕ್ಷಿಣ ಆಫ್ರಿಕಾ-1992)
- ಸೌರವ್ ಗಂಗೂಲಿ: 131 (ಇಂಗ್ಲೆಂಡ್-1996)
- ವಿರೇಂದ್ರ ಸೆಹ್ವಾಗ್: 105 (ದಕ್ಷಿಣ ಆಫ್ರಿಕಾ-2001)
- ಸುರೇಶ್ ರೈನಾ:120 (ಶ್ರೀಲಂಕಾ-2010)
- ಶಿಖರ್ ಧವನ್:187 (ಆಸ್ಟ್ರೇಲಿಯಾ-2013)
- ರೋಹಿತ್ ಶರ್ಮಾ: 177 ವೆಸ್ಟ್ ಇಂಡೀಸ್-2013)
- ಪೃಥ್ವಿ ಶಾ: 134 (ವೆಸ್ಟ್ ಇಂಡೀಸ್-2018)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cPARE7