
ಬೆಂಗಳೂರು: ಪತ್ತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲೂ ಆಧುನಿಕ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸತಾಗಿ ಆರಂಭಗೊಳ್ಳುತ್ತಿರುವ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಿಗೆ () ಬೇಕಾಗಿರುವ ಉಪಕರಣಗಳನ್ನು 11 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಳ್ಳಾರಿ ಹಾಗೂ ಹುಬ್ಬಳ್ಳಿಯಲ್ಲಿ ಹೊಸತಾಗಿ ಪ್ರಾರಂಭವಾಗಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ಪೋರೆನ್ಸಿಕ್ ವಿಭಾಗಗಳಿಗೆ ಬೇಕಾಗಿರುವ ಉಪಕರಣಗಳನ್ನು 11,50,60,912 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಲ್ಯಾಬ್‌ಗಳಲ್ಲಿ ಅಪರಾಧ ಪತ್ತೆ ಹಚ್ಚುವ ನಿಟ್ಟಿನಲ್ಲಿ ಅಗತ್ಯವಿರುವ ಕಿಟ್‌ಗಳು, ರಾಸಾಯನಿಕ ಸಾಮಗ್ರಿಗಳು, ಕಂಪ್ಯೂಟರ್ ಫೋರೆನ್ಸಿಕ್, ಆಡಿಯೋ ವಿಡಿಯೋ ಫೋರೆನ್ಸಿಕ್, ಮೊಬೈಲ್ ಫೋರೆನ್ಸಿಕ್‌ಗಳಿಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲಾ ಮಟ್ಟದಲ್ಲೂ ತಂತ್ರಜ್ಞಾನದ ಮೂಲಕ ಅಪರಾಧ ಪತ್ತೆ ಹಚ್ಚಲು ಆದ್ಯತೆ ನೀಡಲಾಗಿದೆ. ಫೋರೆನ್ಸಿಕ್ ಲ್ಯಾಬ್‌ಗಳಿಗೆ ಬೇಕಾಗುವ ಎಲ್ಲ ಸಲಕರಣೆಗಳ ತಾಂತ್ರಿಕ ನಿರ್ದಿಷ್ಟತೆಯನ್ನು ಟೆಂಡರ್ ಕರೆಯುವ ಮುನ್ನ ಟ್ಯಾಪ್ ಸಮಿತಿಯ ಮುಂದೆ ಇರಿಸಿ ಅನುಮೋದನೆ ಪಡೆಯಬೇಕು ಎಂದು ಸೂಚಿಸಲಾಗಿದೆ. ಅಪರಾಧಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಫೋರೆನ್ಸಿಕ್ ವಿಭಾಗ ಪಾತ್ರ ಮಹತ್ವದ್ದಾಗಿದೆ. ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ಮೈಸೂರು, ಕಲಬುರಗಿ, ಹುಬ್ಬಳ್ಳಿ - ಧಾರವಾಡ, ಬಳ್ಳಾರಿ ಸೇರಿದಂತೆ ರಾಜ್ಯದ ಆರು ಮಹಾನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಇತ್ತೀಚೆಗೆ ಹೇಳಿದ್ದರು. ಕೇಂದ್ರ ಗೃಹ ಸಚಿವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಮೊಬೈಲ್ ನಿರ್ಮಾಣ ಮಾಡಲಾಗಿದೆ. ಅಪರಾಧ ಕೃತ್ಯ ನಡೆದಾಗ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರುವುದು ಮುಂತಾದ ಬದಲಾವಣೆಗಳನ್ನು ಗೃಹ ಇಲಾಖೆ ಮಾಡಿಕೊಂಡಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
from India & World News in Kannada | VK Polls https://ift.tt/3laIKZo