ಪೊಲೀಸ್‌ ಪರೀಕ್ಷೆ ಬರೆಯಲು ಯುಪಿಗೆ ಬಂದಿದ್ದ ಯುವತಿ ಮೇಲೆ ಚಲಿಸುವ ಕಾರಿನಲ್ಲಿ ಅತ್ಯಾಚಾರ!

ಲಖನೌ: ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣದ ಮಾದರಿಯಲ್ಲಿ ಚಲಿಸುವ ಕಾರಿನಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ಮಂಗಳವಾರ ಜರುಗಿದೆ. ಆರೋಪಿ ತೇಜ್‌ವೀರ್‌ ಸಂತ್ರಸ್ತೆಯನ್ನು ಆಗ್ರಾಕ್ಕೆ ಕರೆದೊಯ್ದಿದ್ದ. ಸಂತ್ರಸ್ತೆಯು ಸಬ್‌ಇನ್ಸ್‌ಪೆಕ್ಟರ್‌ ಪರೀಕ್ಷೆ ಬರೆಯುವ ಸಲುವಾಗಿ ಅಲ್ಲಿಗೆ ತೆರಳಿದ್ದಳು. ಮರಳಿ ಕಾರಿನಲ್ಲಿ ಬರುವಾಗ ಆರೋಪಿಯು ಬಲವಂತದಿಂದ ಸಂತ್ರಸ್ತೆಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಮಥುರಾದ ಹೊರವಲಯವಾದ ಕೋಸಿ ಕಲನ್‌ ಪ್ರದೇಶದಲ್ಲಿ ಆಕೆಯನ್ನು ಕಾರಿನಿಂದ ಹೊರದೂಡಿ ಹೋಗಿದ್ದಾನೆ. ತೇಜ್‌ವೀರ್‌ಗೆ ದಿಗಂಬರ್‌ ಎಂಬ ಸ್ನೇಹಿತ ದುಷ್ಕೃತ್ಯದಲ್ಲಿ ಸಾಥ್‌ ನೀಡಿದ್ದಾನೆ. ಯುವತಿಯ ದೂರು ಆಧರಿಸಿ ತೇಜ್‌ವೀರ್‌ನನ್ನು ಬಂಧಿಸಲಾಗಿದೆ ಎಂದು ಮಥುರಾ ಗ್ರಾಮೀಣ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಶ್‌ ಚಂದ್ರ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜ್‌ವೀರ್‌ ಸಂತ್ರಸ್ತೆಯನ್ನು ಪರಿಚಯಿಸಿಕೊಂಡು, ಸ್ನೇಹ ಬೆಳೆಸಿದ್ದ ಎಂದು ತಿಳಿದುಬಂದಿದೆ. ಶಕ್ತಿ ಮಿಲ್ಸ್‌ ಅತ್ಯಾಚಾರ ಪ್ರಕರಣ ಗಲ್ಲುಜೀವಾವಧಿಗೆ ಪರಿವರ್ತನೆ ಮುಂಬಯಿ: ಕೇಂದ್ರ ಮುಂಬಯಿ ಪ್ರದೇಶದ ಶಕ್ತಿ ಮಿಲ್ಸ್‌ ಆವರಣದಲ್ಲಿ ಫೋಟೊ ಪತ್ರಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮರಣ ದಂಡನೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳಿಗೆ ಮುಂಬಯಿ ಹೈಕೋರ್ಟ್‌ ಗುರುವಾರ ಜೀವದಾನ ಮಾಡಿದೆ. ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ್ದ ಮರಣ ದಂಡನೆಯನ್ನು ನ್ಯಾಯಮೂರ್ತಿಗಳಾದ ಸಾಧನಾ ಜಾಧವ್‌ ಮತ್ತು ಪೃಥ್ವಿರಾಜ್‌ ಚೌವಾಣ್‌ ನೇತೃತ್ವದ ವಿಭಾಗೀಯ ಪೀಠವು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತು. ವಿಜಯ್‌ ಜಾಧವ್‌, ಮೊಹಮ್ಮದ್‌ ಖಾಸಿಮ್‌ ಶೇಖ್‌ ಮತ್ತು ಮೊಹಮ್ಮದ್‌ ಅನ್ಸಾರಿ ಶಿಕ್ಷೆಗೊಳಗಾದ ಅಪರಾಧಿಗಳು. ‘‘ಪಶ್ಚಾತಾಪಕ್ಕೆ ಒಳಗಾಗಿರುವ ಈ ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗುತ್ತಿದೆ. ಆದರೆ, ಜೀವನ ಪೂರ್ತಿ ಅವರು ಸೆರೆಮನೆಯಲ್ಲಿಯೇ ಕೊಳೆಯಬೇಕು. ಪರೋಲ್‌ ಸೇರಿದಂತೆ ಯಾವುದೇ ಆಧಾರದ ಮೇಲೂ ಅವರು ಜೈಲಿನಿಂದ ಹೊರ ಹೋಗುವಂತಿಲ್ಲ,’’ ಎಂದು ನ್ಯಾಯಪೀಠ ಆದೇಶಿಸಿದೆ.


from India & World News in Kannada | VK Polls https://ift.tt/3D00bSE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...