IND vs NZ Live Score: 3ನೇ ದಿನ ಭೋಜನಕ್ಕೂ ಮುನ್ನ 2 ವಿಕೆಟ್‌ ಕಿತ್ತ ಭಾರತ!

ಕಾನ್ಪುರ: ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್‌ ಪಂದ್ಯ ಸಮಬಲದಲ್ಲಿ ಸಾಗುತ್ತಿದೆ. ಮೊದಲ ದಿನ ಮೇಲುಗೈ ಪಡೆದರೆ, ಎರಡನೇ ದಿನ ದಿಟ್ಟ ತಿರುಗುತ್ತರ ಕೊಟ್ಟಿತ್ತು. ಈಗ ಮೂರನೇ ದಿನ ಅಥ್ಯಂತ ಮಹತ್ವದ್ದಾಗಿದ್ದು, ಇನಿಂಗ್ಸ್‌ ಮುನ್ನಡೆ ಗಳಿಸದಂತೆ ಕಿವೀಸ್‌ ಪಡೆಯನ್ನು ಕಟ್ಟಿಹಾಕುವ ಸವಾಲು ಭಾರತದೆದುರಿದೆ. ಮೂರನೇ ದಿನದಾಟದ ಆರಂಭದಲ್ಲೇ ಅಪಾಯಕಾರಿ ಬ್ಯಾಟ್ಸ್‌ಮನ್‌ ವಿಲ್‌ ಯಂಗ್‌ (89) ಅವರನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾದ ಭಾರತ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ಮೊದಲ ಯಶಸ್ಸು ತಂದುಕೊಟ್ಟರು. ಬಳಿಕ ಭೋಜನ ವಿರಾಮಕ್ಕೂ ಮುನ್ನ ಕಿವೀಸ್‌ ಕ್ಯಾಪ್ಟನ್‌ ಕೇನ್‌ ವಿಲಿಯಮ್ಸನ್‌ (18) ಅವರನ್ನು ವೇಗಿ ಉಮೇಶ್‌ ಯಾದವ್‌ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಕೇನ್‌ ವಿಕೆಟ್‌ ಪತನದೊಂದಿಗೆ ತೆಗೆದುಕೊಳ್ಳಲಾದ ಭೋಜನ ವಿರಾಮಕ್ಕೆ ನ್ಯೂಜಿಲೆಂಡ್‌ 85.3 ಓವರ್‌ಗಳಲ್ಲಿ 2 ವಿಕೆಟ್‌ಗೆ 197 ರನ್‌ ಗಳಿಸಿತ್ತು. IND vs NZ ಪ್ರಥಮ ಟೆಸ್ಟ್‌ ಪಂದ್ಯದ Live ಡಿಆರ್‌ಎಸ್‌ ಬಳಸಿಕೊಳ್ಳದ ಭಾರತ ಕಿವೀಸ್‌ಗೆ ಆಸರೆಯಾಗಿ ನಿಂತಿರುವ ಅನುಭವಿ ಓಪನರ್‌ ಟಾಮ್‌ ಲೇಥಮ್‌ 82 ರನ್‌ ಗಳಿಸಿ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತ್ತಿದ್ದಾರೆ. ಅಂದಹಾಗೆ ವಿಲ್‌ ಯಂಗ್‌ ವಿಕೆಟ್‌ ಪತನದ ಬೆನ್ನಲ್ಲೇ ಲೇಥಮ್‌ ಕೂಡ ಅಶ್ವಿನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಆನ್‌ ಫೀಲ್ಡ್‌ ಅಂಪೈರ್‌ ನಾಟ್‌ಔಟ್‌ ಎಂದು ತೀರ್ಪು ನೀಡಿದ್ದರು. ಆದರೆ, ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಇಲ್ಲಿ ಡಿಆರ್‌ಎಸ್‌ ತೆಗೆದುಕೊಂಡಿದ್ದರೆ ಲೇಥಮ್‌ ವಿಕೆಟ್‌ ಸಿಗುತ್ತಿತ್ತು. ಆದರೆ, ನಾಯಕನ ಮನವೊಲಿಸಲು ಬೌಲರ್‌ ಕೂಡ ಆಸಕ್ತಿ ತೋರದ ಪರಿಣಾಮ ಡಿಆರ್‌ಎಸ್‌ ತೆಗೆದುಕೊಳ್ಳಲಿಲ್ಲ. ನಂತರ ಟೆಲಿವಿಷನ್‌ ರೀಪ್ಲೇಯಲ್ಲಿ ಔಟ್‌ ಎಂಬುದು ತಿಳಿಯುತ್ತಿದ್ದಂತೆಯೇ ಭಾರತ ತಂಡದ ಆಟಗಾರರ ಮುಖದಲ್ಲಿ ಬೇಸರ ಮನೆ ಮಾಡಿತ್ತು. ಸಹಾ ಔಟ್‌, ಭರತ್‌ ಕೀಪಿಂಗ್‌ಕುತ್ತಿಗೆ ನೋವಿನ ಸಮಸ್ಯೆಗೆ ತುತ್ತಾಗಿರುವ ಭಾರತ ತಂಡದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ ಪಂದ್ಯದ ಮೂರನೇ ದಿನದಾಟದಲ್ಲಿ ಕೀಪಿಂಗ್‌ ಮಾಡಲು ಸಾಧ್ಯವಾಗಲಿಲ್ಲ. ಅವರ ಸ್ಥಾನದಲ್ಲಿ ಕೆಎಸ್‌ ಭರತ್‌ ಕೀಪಿಂಗ್‌ ಕೆಲಸ ನಿಭಾಯಿಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಕಾನ್ಪುರ ಟೆಸ್ಟ್‌ ಪಂದ್ಯದ ಸಂಕ್ಷಿಪ್ತ (3ನೇ ದಿನದ ಭೋಜನದ ಅಂತ್ಯಕ್ಕೆ)ಭಾರತ: ಮೊದಲ ಇನಿಂಗ್ಸ್‌ 111.1 ಓವರ್‌ಗಳಲ್ಲಿ 345ಕ್ಕೆ ಆಲ್‌ಔಟ್‌ (ಶುಭಮನ್ ಗಿಲ್ 52, ಚೇತೇಶ್ವರ್‌ ಪೂಜಾರ 26, ಅಜಿಂಕ್ಯ ರಹಾನೆ 35, ಶ್ರೇಯಸ್‌ ಅಯ್ಯರ್‌ 105, ರವೀಂದ್ರ ಜಡೇಜಾ ಅಜೇಯ 50; ಕೈಲ್‌ ಜೇಮಿಸನ್‌ 91ಕ್ಕೆ 3, ಟಿಮ್‌ ಸೌಥೀ 69ಕ್ಕೆ 5, ಎಜಾಝ್ ಪಟೇಲ್‌ 90ಕ್ಕೆ 2). ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 85.3 ಓವರ್‌ಗಳಲ್ಲಿ 2 ವಿಕೆಟ್‌ಗೆ 197 ರನ್‌ (ಟಾಮ್‌ ಲೇಥಮ್‌ ಅಜೇಯ 82, ವಿಲ್‌ ಯಂಗ್ 89; ಆರ್‌ ಅಶ್ವಿನ್‌ 57ಕ್ಕೆ 1, ಉಮೇಶ್‌ ಯಾದವ್‌ 30ಕ್ಕೆ 1). ಭಾರತ ಟೆಸ್ಟ್‌ ತಂಡಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ರವಿಚಂದ್ರನ್ ಅಶ್ವಿನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಚೇತೇಶ್ವರ ಪೂಜಾರ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಇಶಾಂತ್ ಶರ್ಮಾ, ಶುಭಮನ್ ಗಿಲ್, ಉಮೇಶ್ ಯಾದವ್, ಜಯಂತ್ ಯಾದವ್. ಕಿವೀಸ್‌ ಟೆಸ್ಟ್‌ ತಂಡಕೇನ್‌ ವಿಲಿಯಮ್ಸನ್ (ನಾಯಕ), ಟಾಮ್‌ ಬ್ಲಂಡಲ್‌ (ವಿಕೆಟ್‌ಕೀಪರ್‌), ಡೆವೋನ್‌ ಕಾನ್ವೇ, ಕೈಲ್‌ ಜೇಮಿಸನ್‌, ಟಾಮ್ ಲೇಥಮ್‌, ಹೆನ್ರಿ ನಿಕೋಲ್ಸ್‌, ಎಜಾಝ್ ಪಟೇಲ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌, ವಿಲ್‌ ಸಮರ್‌ವಿಲ್ಲೇ, ಟಿಮ್‌ ಸೌಥೀ, ರಾಸ್‌ ಟೇಲರ್‌, ವಿಲ್‌ ಯಂಗ್ ಮತ್ತು ನೈಲ್‌ ವ್ಯಾಗ್ನರ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3HYkeEn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...