
ಕಾನ್ಪುರ (ಉತ್ತರ ಪ್ರದೇಶ): ಹಾಗೂ ರವೀಂದ್ರ ಜಡೇಜಾ ಅವರ ಅಜೇಯ ಶತಕದ ಜೊತೆಯಾಟದ ಸಹಾಯದಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಮೇಲುಗೈ ಸಾಧಿಸಿತ್ತು. ಇಂದು ಈ ಜೋಡಿ ಎರಡನೇ ದಿನದಾಟವನ್ನು ಆರಂಭಿಸಲಿದ್ದು, ತಂಡಕ್ಕೆ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ನೆರವಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಮೊದಲನೇ ದಿನದಾಟದಲ್ಲಿ ಶುಭಮನ್ ಗಿಲ್ ಅರ್ಧಶತಕದ ಸಹಾಯದಿಂದ ಭಾರತ ಉತ್ತಮ ಆರಂಭ ಪಡೆದಿತ್ತಾದರೂ ನಂತರ, ಕೈಲ್ ಜೇಮಿಸನ್ ಅವರ ಮಾರಕ ದಾಳಿಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಐದನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಜೋಡಿ ಅಜೇಯ 113 ರನ್ ಜೊತೆಯಾಟವಾಡಿತು. ಆ ಮೂಲಕ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. 93 ಎಸೆತಗಳಿಗೆ 52 ರನ್ ಗಳಿಸಿ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ಟೆಸ್ಟ್ ಪದಾರ್ಪಣೆ ಆಟಗಾರ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅನುಭವಿ ಆಟಗಾರನಂತೆ ಬ್ಯಾಟ್ ಮಾಡಿದ ಅಯ್ಯರ್ 136 ಎಸೆತಗಳಿಗೆ ಅಜೇಯ 75 ರನ್ ಗಳಿಸಿದರು. ಮತ್ತೊಂದೆಡೆ ಅಯ್ಯರ್‌ಗೆ ಸಾಥ್ ನೀಡಿದ ರವೀಂದ್ರ ಜಡೇಜಾ ಅಜೇಯ 50 ರನ್ ಗಳಿಸಿದ್ದಾರೆ. ಈ ಜೋಡಿ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಸಂಕ್ಷಿಪ್ತ ಸ್ಕೋರ್ (ಮೊದಲ ದಿನದ ಅಂತ್ಯಕ್ಕೆ) ಭಾರತ: ಪ್ರಥಮ ಇನಿಂಗ್ಸ್ 84 ಓವರ್‌ಗಳಿಗೆ 258/4 (ಶುಭಮನ್ ಗಿಲ್ 52, ಚೇತೇಶ್ವರ್ ಪೂಜಾರ 26, 35, ಶ್ರೇಯಸ್ ಅಯ್ಯರ್ 75*, ರವೀಂದ್ರ ಜಡೇಜಾ 50*; ಕೈಲ್ ಜೇಮಿಸನ್ 47ಕ್ಕೆ 3, ಟಿಮ್ ಸೌಥೀ 43ಕ್ಕೆ 1) ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಭಾರತ: ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ನಾಯಕ), ಶ್ರೇಯಸ್ ಅಯ್ಯರ್, ವೃದ್ದಿಮಾನ್ ಸಹಾ(ವಿ.ಕೀ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್ ನ್ಯೂಜಿಲೆಂಡ್: ಟಾಮ್ ಲಥಾಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿ.ಕೀ), ರಚಿನ್ ರವೀಂದ್ರ, ಟಿಮ್ ಸೌಥೀ, ಅಜಾಝ್ ಪಟೇಲ್, ಕೈಲ್ ಜೇಮಿಸನ್, ವಿಲಿಯಮ್ ಸೋಮರ್‌ವಿಲ್ಲೆ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/316FNSC