ಗಡಿಯಲ್ಲಿ ಹೈ ಅಲರ್ಟ್‌: ಓಮಿಕ್ರಾನ್‌ ವೈರಸ್ ಆತಂಕ, ಕೊಡಗಿನ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ!

ಮಡಿಕೇರಿ: ಕೋವಿಡ್‌ ಎರಡನೇ ಅಲೆಯಿಂದ ಜಿಲ್ಲೆಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇದರ ನಡುವೆಯೇ ಕೋವಿಡ್‌ ವೈರಸ್‌ನ ರೂಪಾಂತರ ತಳಿ '' ಆತಂಕ ಜಿಲ್ಲೆಗೂ ತಟ್ಟಿದ್ದು ಗಡಿಯಲ್ಲಿ ಭ್ರದತಾ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಕೋವಿಡ್‌ನ ರೂಪಾಂತರಿ ವೈರಸ್‌ ಜನತೆಯಲ್ಲಿ ಆತಂಕ ಹುಟ್ಟಿಸಿದ್ದು, ಗಡಿ ಜಿಲ್ಲೆ ಕೊಡಗಿನ ಜನ ಭಯದಲ್ಲಿ ಜೀವನ ಮಾಡುವಂತಾಗಿದೆ. ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಕೋವಿಡ್‌ ನೆಗೆಟಿವ್‌ ವರದಿ ಇದ್ದರೆ ಮಾತ್ರ ಎಂಟ್ರಿ ಕೊಡಲಾಗುತ್ತಿದೆ. ಕೊಡಗು ಗಡಿ ಭಾಗ ಕರಿಕೆ, ಕುಟ್ಟ ಮತ್ತು ಮಾ ಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಬಿಗಿ ಭದ್ರತೆ ಮುಂದುವರೆಸಲಾಗಿದೆ. ಕೋವಿಡ್‌ ಟೆಸ್ಟ್‌ ವರದಿ ನೆಗೆಟಿವ್‌ ಇದ್ದಲ್ಲಿ ಮಾತ್ರ ಕೊಡಗಿಗೆ ಪ್ರವೇಶ ನೀಡಲಾಗುತ್ತಿದೆ. ಕ್ರಮಕ್ಕೆ ಸೂಚನೆಓಮಿಕ್ರಾನ್‌ ಪತ್ತೆ ಹಾಗೂ ಕೆಲ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚಿರುವ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಗಡಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಲು ಸೂಚಿಸಿದ್ದಾರೆ. ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ಸಲಹೆ ಸೂಚನೆ ನೀಡಿದ್ದಾರೆ. ಗಡಿಯಲ್ಲಿ ಜಿಲ್ಲಾಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಯಾವುದೇ ರೂಪಾಂತರ ರೋಗದ ಲಕ್ಷಣ ಕಾಣಿಸಿಕೊಂಡಿಲ್ಲ. ಇದರೊಂದಿಗೆ ಕೋವಿಡ್‌ ಕೂಡ ಸಂಪೂರ್ಣ ಕಡಿಮೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಆಲರ್ಟ್‌ ಆಗಿದ್ದು, ರೋಗದ ಲಕ್ಷಣಗಳಾದ ವಾಂತಿ ಭೇದಿ, ಹೊಟ್ಟೆ ನೋವು ಜ್ವರ ಕಂಡು ಬಂದರೆ ಅಂತಹವರನ್ನು ತಪಾಸಣೆ ಮಾಡಲಾಗುತ್ತಿದೆ. ಪಾಸಿಟಿವಿಟಿ ದರ 0.37ಕೊಡಗು ಜಿಲ್ಲೆ ಕೋವಿಡ್‌ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದು, ಇದುವರೆಗೂ 432 ಮಂದಿ ಸಾವಿಗೀಡಾಗಿದ್ದಾರೆ. 35,431 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಸದ್ಯ 53 ಮಂದಿಯಲ್ಲಿ ಕೋವಿಡ್‌ ಪಾಸಿಟಿವ್‌ ಇದೆ. ಭಾನುವಾರ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ 0.37 ಇದೆ. ''ಇಲ್ಲಿಯವರೆಗೂ ಜಿಲ್ಲೆಯಲ್ಲಿ ರೂಪಾಂತರ ವೈರಸ್‌ಗಳು ಕಂಡು ಬಂದಿಲ್ಲ. ಗಡಿ ಭಾಗದಲ್ಲಿ ಆಲರ್ಟ್‌ ಮುಂದುವರೆಸ ಲಾಗಿದೆ. ಜನತೆ ಕೋವಿಡ್‌ ನಿಯಮವನ್ನು ಪಾಲಿಸಬೇಕು,'' ಎನ್ನುತ್ತಾರೆ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಆರ್‌ ವೆಂಕಟೇಶ್‌.


from India & World News in Kannada | VK Polls https://ift.tt/3D2RAOP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...