ಮಸಣಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ; ಪ.ಬಂಗಾಳದ 18 ಮಂದಿ ಸ್ಥಳದಲ್ಲೇ ಸಾವು!

ಕೋಲ್ಕತ್ತಾ: ಮೃತದೇಹವನ್ನು ಮಸಣಕ್ಕೆ ಕರೆದೊಯುತ್ತಿದ್ದ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ 17 ಮಂದಿ ಸಾವನ್ನಪ್ಪಿದ ಭೀಕರ ದುರಂತ ಪಶ್ಚಿಮ ಬಂಗಾಳದಲ್ಲಿ ಕಳೆದ ರಾತ್ರಿ ನಡೆದಿದೆ. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹೊತ್ತೊಯ್ಯುತ್ತಿದ್ದ ಮೆಟಡಾರ್ ವಾಹನದಲ್ಲಿ ಸುಮಾರು 20 ಜನರು ಇದ್ದರು. ಉತ್ತರ 24 ಪರಗಣದ ಬಾಗ್ಡಾದಿಂದ ನವದ್ವೀಪದ ಸ್ಮಶಾನದ ಕಡೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಟ್ರಕ್‌ಗೆ ಮೆಟಾಡರ್‌ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ದುರ್ಘಟನೆ ಸಂಭವಿಸಿದೆ. ಹಂಸಖಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫುಲ್ಬರಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಿಪರೀತ ಇಬ್ಬನಿ ಬೀಳುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿಲ್ಲ. ಹಾಗಾಗಿ ಆತ ತುಂಬ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ. ಇದರಿಂದಾಗಿ ರಸ್ತೆ ಪಕ್ಕದಲ್ಲಿ ನಿಂತ ಟ್ರಕ್ಗೆ ಹೋಗಿ ಮೃತದೇಹವನ್ನು ಹೊತ್ತ ವಾಹನವು ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಕೂಲಂಕುಶವಾಗಿ ತನಿಖೆ ಮಾಡಲು ಪೊಲೀಸರು ಆರಂಭಿಸಿದ್ದಾರೆ. ಇನ್ನು ಮೆಟಡಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ 20 ಮಂದಿಯಲ್ಲಿ 18 ಜನರು ಸಾವನ್ನಪ್ಪಿದ್ದು ಅದರಲ್ಲಿ 10 ಪುರುಷರು, ಏಳು ಮಹಿಳೆಯರು ಮತ್ತು ಒಬ್ಬಳು ಆರುವರ್ಷದ ಬಾಲಕಿ ಇದ್ದಾಳೆ. ಇವರೆಲ್ಲ ಬಂಧು- ಬಳಗದವರೇ ಆಗಿದ್ದಾರೆ. ಬಾಗ್ಡಾದ ಬಳಿಯ ಪರ್ಮಧಾನ್ ಎಂಬಲ್ಲಿಯ ನಿವಾಸಿಯಾಗಿದ್ದ ಶ್ರಬಣಿ ಮುಹುರಿ ಎಂಬ ವೃದ್ಧೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಇವೆರೆಲ್ಲರು ಸ್ಮಶಾನಕ್ಕೆ ತೆರಳಿದ್ದರು.


from India & World News in Kannada | VK Polls https://ift.tt/3nZSrLY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...