ಆರ್‌ಸಿಬಿ vs ಡಿಸಿ: ಎರಡನೇ ಸ್ಥಾನಕ್ಕೆ ಬಿಗ್‌ ಫೈಟ್‌! ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ವರದಿ, ಪಂದ್ಯದ ವಿವರ

ಹೊಸದಿಲ್ಲಿ: ನಿರ್ಣಾಯಕ ಹಂತದಲ್ಲಿ ಬಂದು ನಿಂತಿರುವ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಅಬುಧಾಬಿಯ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಟೂರ್ನಿಯ ನಿರ್ಣಾಯಕವಾಗಿದೆ. ಪಂದ್ಯ ವಿಜೇತ ತಂಡ ಪಾಯಿಂಟ್ಸ್‌ ಟೇಬಲ್‌ಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಲಿದೆ. ಸೋತ ತಂಡ ಅಂತಿಮ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳುವುದು ರನ್‌ರೇಟ್‌ ಅನ್ನು ಅವಲಂಬಿಸಿರುತ್ತದೆ. ಹಾಗಾಗಿ, ಇಂದಿನ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಈಗಲೂ ತಂಡದ ಸಮತೋಲನ ಚೆನ್ನಾಗಿದೆ. ಡೆಲ್ಲಿಯ ಗುಣಮಟ್ಟದ ಬೌಲರ್‌ಗಳ ಎದುರು ಬ್ಯಾಟಿಂಗ್‌ ಮಾಡುವುದು ಕಷ್ಟ. ಕಗಿಸೋ ರಬಾಡ ಪ್ರಸಕ್ತ ಆವೃತ್ತಿಯ ಅತ್ಯುತ್ತಮ ಲಯವನ್ನು ಮುಂದುವರಿಸುತ್ತಿದ್ದಾರೆ ಹಾಗೂ ಆನ್ರಿಚ್‌ ನಾರ್ಟ್ಜ್‌ ಹಾಗೂ ಆರ್‌ ಅಶ್ವಿನ್‌ ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌ ಲಯಕ್ಕೆ ಮರಳುವುದು ಅಗತ್ಯವಿದೆ. ಮತ್ತೊಂದೆಡೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಕೂಡ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಮಧ್ಯಮ ಓವರ್‌ಗಳಲ್ಲಿ ಹೆಣಗಾಡುತ್ತಿರುವ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲಿ ಪುಟಿದೇಳುವ ಅಗತ್ಯವಿದೆ. ಬೆಂಗಳೂರು ತಂಡದ ಬೌಲಿಂಗ್‌ ವಿಭಾಗ ಯೋಗ್ಯವಾಗಿದ್ದು, ಇಂದಿನ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುವ ಅವಕಾಶವಿದೆ. ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಹ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬಹುದು. ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭಾರೀ ಅಂತರದಲ್ಲಿ ಆರ್‌ಸಿಬಿಯನ್ನು ಸೋಲಿಸಿತ್ತು. ಇದೀಗ ಇಂದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ದೇವದತ್‌ ಪಡಿಕ್ಕಲ್‌, ಜಾಶ್‌ ಫಿಲಿಪ್‌, ವಿರಾಟ್‌ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್(ವಿ.ಕೀ), ಮೊಯಿನ್‌ ಅಲಿ, ಶಿವಂ ದುಬೇ, ವಾಷಿಂಗ್ಟನ್‌ ಸುಂದರ್‌, ಕ್ರಿಸ್‌ ಮಾರಿಸ್‌, ಯುಜ್ವೇಂದ್ರ ಚಹಲ್‌, ನವದೀಪ್‌ ಸೈನಿ ಹಾಗೂ ಉಮೇಶ್‌ ಯಾದವ್‌/ಮೊಹಮ್ಮದ್‌ ಸಿರಾಜ್‌ ಅಜಿಂಕ್ಯ ರಹಾನೆ/ಪೃಥ್ವಿ ಶಾ, ಶಿಖರ್ ಧವನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಷಭ್‌ ಪಂತ್‌(ವಿ.ಕೀ), ಶಿಮ್ರಾನ್‌ ಹೆಟ್ಮಾಯೆರ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಕ್ಷರ್‌ ಪಟೇಲ್‌, ರವಿ ಅಶ್ವಿನ್‌, ಹರ್ಷಲ್‌ ಪಟೇಲ್‌, ಆನ್ರಿಚ್‌ ನಾರ್ಟ್ಜ್‌, ಕಗಿಸೋ ರಬಾಡ ಪಿಚ್‌ ರಿಪೋರ್ಟ್‌ ಇಲ್ಲಿನ ಶೇಖ್‌ ಝಾಯೆದ್‌ ಬ್ಯಾಟಿಂಗ್‌ ಮಾಡಲು ಯೋಗ್ಯವಾಗಿದೆ. ಕಳೆದ ಐಪಿಎಲ್‌ನ ಹಲವು ಪಂದ್ಯಗಳಲ್ಲಿ 170ರ ಆಸುಪಾಸಿನ ಮೊತ್ತವನ್ನು ತಂಡಗಳು ಕಲೆ ಹಾಕಿದ್ದವು. ಪಂದ್ಯದ ಆರಂಭದಲ್ಲಿ ಚೆಂಡಿನ ಚಲನೆ ಚೆನ್ನಾಗಿರುತ್ತದೆ ಹಾಗೂ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಇಲ್ಲಿನ ಅಂಗಣದಲ್ಲಿ ಮಂಜು ಮಹತ್ತರ ಪಾತ್ರವಹಿಸುವ ಹಿನ್ನಲೆಯಲ್ಲಿ ಟಾಸ್‌ ಗೆಲ್ಲುವ ತಂಡ ಚೇಸ್‌ ಮಾಡಲು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿನ ಅಂಗಣದಲ್ಲಿ 170 ರನ್‌ಗಳು ಉತ್ತಮ ಮೊತ್ತವಾಗಲಿದೆ. ಪಂದ್ಯದ ವಿವರ: ದಿನಾಂಕ: ನ.2 2020 ಸಮಯ: ಇಂದು ರಾತ್ರಿ 7:30ಕ್ಕೆ ಸ್ಥಳ: ಶೇಖ್‌ ಝಾಯೆದ್‌, ಅಬುಧಾಬಿ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3oMIQGC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...