ಅತ್ತ ಮತ ಎಣಿಕೆ ಇತ್ತ ಟ್ರಂಪ್‌ ಟ್ವೀಟ್‌, ರಿಸಲ್ಟ್‌ಗೂ ಮುನ್ನ ಥ್ಯಾಂಕ್ಯು ಎಂದಿದ್ದೇಕೆ?

ವಾಷಿಂಗ್ಟನ್‌: ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ಘಟ್ಟವಾಗಿರುವ ಮತದಾನ ನಡೆದಿದ್ದು, ಸದ್ಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಬುಧವಾರ ಮಧ್ಯಾಹ್ನಕ್ಕೆ ಅಮೆರಿಕ ಅಧ್ಯಕ್ಷರ ಗದ್ದುಗೆ ಯಾರ ಪಾಲಾಗಲಿದೆ ಎನ್ನುವ ಚಿತ್ರಣ ಚಿತ್ರಣ ಸಿಗಲಿದೆ. ಸದ್ಯದ ಮಾಹಿತಿ ಪ್ರಕಾರ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗಿಂತ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ಮುನ್ನಡೆಯನ್ನು ಸಾಧಿಸಿದ್ದಾರೆ. ಸದ್ಯ 131 ಎಲೆಕ್ಟೋರಲ್‌ ಮತಗಳನ್ನು ಜೋ ಬಿಡೆನ್‌ ಪಡೆದರೆ, 108 ಮತಗಳನ್ನು ಡೊನಾಲ್ಡ್‌ ಟ್ರಂಪ್‌ ಪಡೆದಿದ್ದಾರೆ. ಈ ಮಧ್ಯೆಯೇ ಡೊನಾಲ್ಡ್‌ ಟ್ರಂಪ್ ಟ್ವೀಟ್‌ ಮಾಡಿರುವುದು ಭಾರೀ ಕುತೂಹಲ ಕೆರಳಿಸಿದೆ. ಟ್ವೀಟ್‌ ಮಾಡಿರುವ ಟ್ರಂಪ್‌ ನಾವು ದೇಶದಾದ್ಯಂತ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ ಧನ್ಯವಾದಗಳು ಎಂದಿದ್ದಾರೆ. ಸದ್ಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ಜಿದ್ದಾಜಿದ್ದಿನ ಫೈಟ್‌ ಏರ್ಪಟ್ಟಿದೆ. ಫ್ಲೋರಿಡಾದಲ್ಲಂತೂ ಹಾವು ಏಣಿ ಆಟ ಮುಂದುವರಿದಿದೆ. ಹೀಗಾಗಿ ಈ ಬಾರಿಯ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.


from India & World News in Kannada | VK Polls https://ift.tt/2I2dETo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...