ಮಂದಾರ್ತಿ: ಉಪ್ಪೂರು ಶಾಲೆಯ ಸಮೀಪ ಶನಿವಾರ ತಡರಾತ್ರಿ ಎರಡು ಯುವಕರ ತಂಡದ ನಡುವೆ ನಡೆದಿದ್ದು, ಮೂರು ಬೈಕ್‌ಗಳನ್ನು ಸುಟ್ಟು ಹಾಕಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಬಹ್ಮಾವರ ಪೊಲೀಸ್ ಠಾಣೆಯಲ್ಲಿ ಎರಡು ತಂಡಗಳಿಂದ ದೂರು ದಾಖಲಾಗಿದೆ. ಜಗಳದಲ್ಲಿ ಓರ್ವ ಯುವಕನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಹಿತರ ಮನೆಯಲ್ಲಿ ಪಾರ್ಟಿ ಮಾಡಿ ನಂತರ ದಾರಿಯಲ್ಲಿ ಹೋಗುವಾಗ ಪರಿಚಯದ ಒಬ್ಬನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುವ ಮತ್ತು ವೈಯಕ್ತಿಕ ದ್ವೇಷದ ವಿಷಯದಲ್ಲಿ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಯುವಕರ ಜಗಳದಲ್ಲಿ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳದ ಕೋಪದಲ್ಲಿ ಸ್ಥಳೀಯ ಯುವಕರ ತಂಡ ಹೊಸ ಆಕ್ಟಿವಾ ಸಹಿತ ಮೂರು ಬೈಕ್‌ಗಳನ್ನು ಸುಟ್ಟು ಹಾಕಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಹಲವರನ್ನು ವಿಚಾರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡೂ ತಂಡಗಳಿಂದ ದೂರು ದಾಖಲಾಗಿದೆ.
from India & World News in Kannada | VK Polls https://ift.tt/34Loshh