ಮಂಗಳೂರು: ಯುವಕನ ಮೇಲೆ ತಲವಾರಿನಿಂದ ದಾಳಿ, ಗಂಭೀರ ಗಾಯಗೊಂಡ ನೌಶಾದ್‌!

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ತಲವಾರಿನ ಸದ್ದು ಕೇಳಿ ಬಂದಿದೆ. ನೌಶಾದ್‌ (30) ಎಂಬವರ ಮೇಲೆ ಫಳ್ನೀರ್‌ನ ಯುನಿಟಿ ಆಸ್ಪತ್ರೆ ಎದುರು ಸೋಮವಾರ ರಾತ್ರಿ ತಲವಾರು ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ನೌಶಾದನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಕದ್ರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಹಿನ್ನೆಲೆ!ನವೆಂಬರ್ 15ರಂದು ಗುರುಪುರದ ಕೈಕಂಬದ ಕಂದಾವರ ಮಸೀದಿ ಬಳಿ ಅಬ್ದುಲ್‌ ಅಝೀಝ್‌ ಎಂಬವರ ಮೇಲೆ ಚೂರಿಯಿಂದ ದಾಳಿ ನಡೆದಿತ್ತು. ಅಝೀಜ್‌ ಅವರ ಮಗಳ ಪತಿ(ನೌಶಾದ್‌) ಅವರ ಮೇಲೆ ಇದೀಗ ತಲವಾರು ದಾಳಿ ನಡೆದಿದೆ. ಹೀಗಾಗಿ ವೈಯಕ್ತಿಕ ಕಾರಣದಿಂದ ದಾಳಿ ನಡೆದಿರುವ ಸಾಧ್ಯತೆ ಇದೆ. ಇನ್ನು ಈ ಹಿಂದೆ ಚೂರಿ ಇರಿತಕ್ಕೊಳಗಾದ ಅಝೀಝ್‌ ಆಸ್ಪತ್ರೆಯಲ್ಲಿ ಚೇತರಿಕೊಳ್ಳುತ್ತಿದ್ದಾರೆ. ಅವರನ್ನು ಅವರ ಮಗ, ಅಳಿಯ ನೋಡಿಕೊಳ್ಳುತ್ತಿದ್ದಾರೆ. ಮಗನಿಗೆ ಹಲ್ಲೆ ನಡೆಸಲು ಬಂದಿದ್ದರು! ಇನ್ನು ಗಾಯಗೊಂಡ ನೌಶಾದ್‌ ಕುಟುಂಬಸ್ಥರ ಮಾಹಿತಿ ಪ್ರಕಾರ ಅಝೀಜ್‌ ಅವರ ಮಗನ ಮೇಲೆ ದಾಳಿ ನಡೆಸಲು ದುಷ್ಕರ್ಮಿಗಳು ಬಂದಿದ್ದರು ಎನ್ನಲಾಗಿದೆ. ಆದರೆ ಒಂದೇ ರೀತಿಯ ಬಟ್ಟೆ ಧರಿಸಿದ್ದರಿಂದ ಮಗನ ಬದಲು ಅಳಿಯನನ್ನು ಇಬ್ಬರು ದುಷ್ಕರ್ಮಿಗಳು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾರೆ. ನಂತರ ಕಾರಿನಲ್ಲಿ ಬಂದಿದ್ದ ಇಬ್ಬರು ಸೇರಿ ಒಟ್ಟು ನಾಲ್ವರು ನೌಶಾದ್‌ ಮೇಲೆ ತಲವಾರು ಬೀಸಿದ್ದು ಹೊಟ್ಟೆ ಹಾಗೂ ಎದೆಗೆ ಗಂಭೀರ ಗಾಯವಾಗಿದೆ. ನೌಶಾದ್‌ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಸೀದಿ ಕಮಿಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಹಲ್ಲೆ ನಡೆದಿದೆ.


from India & World News in Kannada | VK Polls https://ift.tt/3fzilQT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...