ವಿಜಯೇಂದ್ರ ಪ್ರದಕ್ಷಿಣೆ.. ಮೈಸೂರು ಭಾಗದ ಮಠಗಳಿಗೆ ದಕ್ಷಿಣೆ..! ಇದಕ್ಕೆಲ್ಲಾ ಕಾರಣ ಚುನಾವಣೆ..?

ಶಿವಮೂರ್ತಿ ಜುಪ್ತಿಮಠಮೈಸೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಮಠಗಳಿಗೆ ಬಿಡುಗಡೆಗೊಳಿಸಿರುವ ಅನುದಾನದಲ್ಲಿ ಹಾಗೂ ನೆರೆ ಜಿಲ್ಲೆ ಚಾಮರಾಜ ನಗರಕ್ಕೆ ಈ ಬಾರಿ ಸಿಂಹಪಾಲು ದೊರೆತಿದೆ. ಇದು ಸಹಜವಾಗಿ ಭಕ್ತ ಸಮೂಹದಲ್ಲಿ ಸಂತಸವನ್ನುಂಟು ಮಾಡಿದೆ. ಆದರೆ, ಪ್ರತಿಪಕ್ಷದ ಕೆಲವರಿಗೆ ಇದರಲ್ಲಿ 'ರಾಜಕೀಯ' ವಾಸನೆ ಬಡಿಯುತ್ತಿದೆ. 2020-21ನೇ ಸಾಲಿನಲ್ಲಿ 143 , ದೇವಸ್ಥಾನ, ಟ್ರಸ್ಟ್‌ಗಳಿಗೆ ಒಟ್ಟು 49.75 ಕೋಟಿ ರೂ. ಬಿಡುಗಡೆಗೊಳಿಸಲಾಗಿದ್ದು, ಮೈಸೂರು ಹಾಗೂ ಚಾಮರಾಜನಗರದ 45 ಮಠ, ಟ್ರಸ್ಟ್‌ಗಳು ಫಲಾನುಭವಿಯಾಗಿರುವುದು ವಿಶೇಷ. ತಮ್ಮ ಮಠಗಳಿಗೆ ಅನುದಾನ ಬಿಡುಗಡೆಯಾಗಿರುವುದು ಮಠದ ಪೀಠಾಧಿಪತಿಗಳಿಗಷ್ಟೇ ಅಲ್ಲ, ಈ ಭಾಗದ ಭಕ್ತರಲ್ಲೂ ಸಂತಸ ಮೂಡಿಸಿದೆ. ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳ 33 ಮಠ/ಟ್ರಸ್ಟ್‌ಗಳು, ಚಾಮರಾಜ ನಗರ ಜಿಲ್ಲೆಯ 12 ಮಠ/ಟ್ರಸ್ಟ್‌ಗಳು ಸರಕಾರದ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಹಳೆ ಮಠಗಳ ಜೀರ್ಣೋದ್ಧಾರ, ಸಮುದಾಯ ಭವನ, ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾರ‍್ಯಗಳಿಗೆ ಈ ಅನುದಾನವನ್ನು ಬಳಸಲು ನೀಡಲಾಗುತ್ತದೆ. ಮೈಸೂರು ಜಿಲ್ಲೆಯ ಒಂದು ಮಠಕ್ಕೆ 1 ಕೋಟಿ, ಮೂರು ಮಠಗಳಿಗೆ ತಲಾ 50 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯ ಐದು ಮಠಗಳಿಗೆ ತಲಾ 50 ಲಕ್ಷ ರೂ. ನೀಡಿದ್ದು, ಇನ್ನುಳಿದ ಮಠಗಳಿಗೆ 10, 15, 20, 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿ ಸಿಎಂ ಆದೇಶಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದೇ, ಮಠಗಳಿಗೆ ಭಕ್ತರೂ ಬರದೇ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಮಠಗಳಿಗೆ ಈ ಅನುದಾನದಿಂದ ತುಸು ಚೈತನ್ಯ ಸಿಕ್ಕಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ಎಸ್‌.ವಿಜಯೇಂದ್ರ ಅವರು ಮೈಸೂರು ಜಿಲ್ಲೆಯಿಂದಲೇ ತಮ್ಮ ಚುನಾವಣಾ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಶ್ರಮಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಭಾಗದ ಮಠಗಳಿಗೆ ಹೆಚ್ಚೆಚ್ಚು ಅನುದಾನ ಬಿಡುಗಡೆಗೊಳಿಸುವ ಮೂಲಕ ಇಲ್ಲಿನ ವೀರಶೈವ ಮತಗಳನ್ನು ಕ್ರೋಡೀಕರಿಸುವ ಆಲೋಚನೆಯೂ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿ ನಡೆಸಿದ್ದರು. ಇನ್ನೇನು ಟಿಕೆಟ್‌ ಸಿಕ್ಕೇ ಬಿಟ್ಟಿತು ಎಂಬ ಉತ್ಸಾಹದಲ್ಲಿದ್ದ ವೇಳೆ ಹೈಕಮಾಂಡ್‌ ಇವರ ಓಟಕ್ಕೆ ತಡೆ ಹಾಕಿತ್ತು. ಆದರೆ, ಈಗಲೂ ಇಲ್ಲಿನ ಜನರು ವಿಜಯೇಂದ್ರ ಅವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಅವರು ಆ ವಿಶ್ವಾಸ ಉಳಿಸಿಕೊಳ್ಳಲು ಸಿಎಂ ಮಠಗಳಿಗೆ ನೀಡುವ ಅನುದಾನವನ್ನು ಬಳಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಪ್ರಾಧಿಕಾರವೊಂದಕ್ಕೆ ಅಧ್ಯಕ್ಷರಾಗಿರುವವರು ಇಲ್ಲಿನ ಮಠಗಳ ಪಟ್ಟಿ ತಯಾರಿಸಿಕೊಟ್ಟಿದ್ದು, ಅದಕ್ಕೆ ವಿಜಯೇಂದ್ರ ಸಮ್ಮತಿಸಿದ್ದರು. ಸಿಎಂ ಯಡಿಯೂರಪ್ಪ ಆ ಪಟ್ಟಿಗೆ ಒಪ್ಪಿಗೆ ಮುದ್ರೆ ಒತ್ತಿ ಆದೇಶಿದ್ದಾರೆ ಎನ್ನಲಾಗಿದೆ. ಅದಕ್ಕೂ ಮೊದಲು ಸಿದ್ಧಪಡಿಸಿದ್ದ ಪಟ್ಟಿಯನ್ನು ನಿರಾಕರಿಸಿದ್ದಕ್ಕೆ ಆ ಪಟ್ಟಿಯಲ್ಲಿದ್ದ ಕೆಲ ಮಠಾಧೀಶರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮತ್ತೊಮ್ಮೆ ತಮ್ಮ ಬೇಡಿಕೆ ಸಲ್ಲಿಸಲು ನಿರ್ಧರಿಸಿದ್ದಾರೆ. ನಮ್ಮ ಭಾಗದ ಮಠಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿರುವುದು ಸಂತಸ ತಂದಿದೆ. ಇಲ್ಲಿನ ಮಠಗಳು ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಪರ ಕಾರ‍್ಯಗಳನ್ನು ಮಾಡುತ್ತಿದ್ದು, ಅನುದಾನ ಸದ್ಭಳಕೆಯಾಗಲಿದೆ ಎನ್ನುತ್ತಾರೆ, ಮೈಸೂರಿನ ಶಿವಾನಂದಮೂರ್ತಿ


from India & World News in Kannada | VK Polls https://ift.tt/35PipZA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...