ಗುಜರಾತ್‌: 5 ವರ್ಷದ ಮಗಳನ್ನು ಅತ್ಯಾಚಾರಗೈದ ಯುವಕನನ್ನು ಕೊಂದ ತಂದೆ, ಖಾಸಗಿ ಭಾಗಕ್ಕೆ ತುಳಿದು ಹತ್ಯೆ!

ಸೂರತ್‌: 5 ವರ್ಷದ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ 19 ವರ್ಷದ ಯುವಕನನ್ನು ತಂದೆಯೇ ಕೊಂದು ಹಾಕಿರುವ ಘಟನೆ ಗುಜರಾತ್ ನ ಭರೂಚ್ ಜಿಲ್ಲೆಯಲ್ಲಿ ನಡೆದಿದೆ. ಮಗಳ ಮೇಲೆ ಅತ್ಯಾಚಾರ ಮಾಡಿದ ಹಿನ್ನೆಲೆ ಲಾಲು ರಾಜ್‌ ಎಂಬಾತನ ಖಾಸಗಿ ಭಾಗಕ್ಕೆ ಹಲವು ಬಾರಿ ತುಳಿದು ಬಾಲಕಿಯ ಹತ್ಯೆ ಮಾಡಿದ್ದಾರೆ. ಅತ್ಯಾಚಾರವೆಸಗಿದ ಕಾಮುಕ! ಲಾಲು ರಾಜ್‌ ಎಂಬಾತ ಬಾಲಕಿಯ ಮನೆಯ ಪಕ್ಕದಲ್ಲೇ ಕುಟುಂಬಸ್ಥರೊಂದಿಗೆ ಬಾಡಿಗೆ ಮನೆಯಲ್ಲಿದ್ದ. ಹೀಗಿರುವಾಗ ನವೆಂಬರ್ 20 ರಂದು ಬಾಲಕಿ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಲಾಲು ರಾಜ್‌ ಚಾಕಲೇಟ್‌ ನೀಡುವ ನೆಪದಲ್ಲಿ ಬಾಲಕಿಯನ್ನು ತನ್ನತ್ತ ಕರೆಸಿಕೊಂಡಿದ್ದಾನೆ. ಚಾಕಲೇಟ್‌ಗಾಗಿ ಬಂದ ಬಾಲಕಿಯನ್ನು ನೇರವಾಗಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಯುವಕನ ತಾಯಿಯಿಂದ ಪ್ರಕರಣ ಬೆಳಕಿಗೆ! ಮನೆಯ ಶೌಚಾಲಯದಿಂದ ಮಗು ಅಳುತ್ತ ಹೊರಗೆ ಬರುತ್ತಿರುವುದನ್ನು ಲಾಲು ರಾಜ್‌ನ ತಾಯಿ ಗಮನಿಸಿದ್ದಾರೆ. ಈ ಬೆನ್ನಿಗೆ ಲಾಲು ರಾಜ್‌ ಕೂಡ ಶೌಚಾಲಯದಿಂದ ಹೊರಗೆ ಬಂದಿದ್ದಾನೆ. ಕೂಡಲೇ ತಾಯಿ ಬಾಲಕಿ ಬಳಿ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಖಾಸಗಿ ಭಾಗದಿಂದ ರಕ್ತಸಾವ್ರವಾಗುತ್ತಿದ್ದು ಕಂಡುಬಂದಿದೆ. ಹೀಗಾಗಿ ಮಗ ಮಾಡಿರುವ ಹೀನಾಯ ಕೃತ್ಯವನ್ನು ಬಾಲಕಿಯ ತಂದೆ ಬಳಿ ತಾಯಿ ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಸಂತ್ರಸ್ತೆಯ ತಂದೆ ಯುವಕನಿಗೆ ಕೋಲಿನಲ್ಲಿ ಸರಿ ಬಾರಿಸಿದ್ದಾರೆ. ನಂತರ ಆತನ ಖಾಸಗಿ ಭಾಗಕ್ಕೆ ಒದ್ದಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿದ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಯುವಕ ಸಾವನಪ್ಪಿದ್ದಾನೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ರೇಪ್‌ ಹಾಗೂ ಕೊಲೆ ಪ್ರಕರಣ ಸಂಬಂಧ ಎರಡು ಕೇಸ್‌ಗಳನ್ನು ದಾಖಲಿಸಿದ್ದೇವೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.


from India & World News in Kannada | VK Polls https://ift.tt/3l0X3g0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...